ಚಂದ್ರಗ್ರಹಣ ಸಮಯದಲ್ಲಿ ತಿನ್ನಬಾರದೇ, ಈ 5 ಸತ್ಯಗಳನ್ನು ತಿಳಿದುಕೊಳ್ಳಿ! Blood Moon Eclipse 2025
Blood Moon Eclipse 2025: ಅಪರೂಪದ ಹಾಗೂ ವರ್ಷದ ಕೊನೆಯ ಚಂದ್ರಗ್ರಹಣವು ಭಾನುವಾರ (ಸೆಪ್ಟೆಂಬರ್ 07)ದಂದು ಗೋಚರಿಸಿದೆ. ಇದು ಅಪರೂಪದಲ್ಲಿ ಅಪರೂಪದ ಚಂದ್ರಗ್ರಹಣ ಎಂದೇ ಪರಿಗಣಿಸಲಾಗಿದೆ. ಆದರೆ ಚಂದ್ರಗ್ರಹಣವನ್ನು ನೋಡಬೇಕೇ ಅಥವಾ ನೋಡಬಾರದೇ ಎನ್ನುವ ವಿಚಾರದಲ್ಲಿ ಹಲವರಲ್ಲಿ ಗೊಂದಲಗಳು ಇವೆ. ಇನ್ನು ಚಂದ್ರಗ್ರಹಣವು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇನ್ನು ಚಂದ್ರಗ್ರಹಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಇರುವ ಐದು ಮಿಥ್ಯೆ ಮತ್ತು ಸಂತ್ಯಾಂಶ ಎನ್ನುವುದನ್ನು ಈ ಲೇಖದಲ್ಲಿ ನೋಡೋಣ.
ಚಂದ್ರನ ಬಣ್ಣವು ಕಡುಗೆಂಪು ಬಣ್ಣಕ್ಕೆ ತಿರುಗುವುದರಿಂದ ಈ ಚಂದ್ರಗ್ರಹಣವನ್ನು ರಕ್ತ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರಗ್ರಹಣ ಹಾಗೂ ರಕ್ತ ಚಂದ್ರನ ಬಗ್ಗೆ ಬೆರಗುಗೊಳಿಸುವ ಸಂಗತಿಗಳಿವೆ. ಇದೇ ಕಾರಣಕ್ಕೆ ಇಂದಿನ ಚಂದ್ರಗ್ರಹಣ ವಿಶೇಷವಾಗಿದೆ. ಚಂದ್ರಗ್ರಹಣಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಮಿಥ್ಯೆ ಹಾಗೂ ವಾಸ್ತವಾಂಶ ಇಲ್ಲಿವೆ. ಈ ಬಗ್ಗೆ TN ವರದಿ ಮಾಡಿದೆ.

1. ಮಿಥ್ಯೆ: ಚಂದ್ರಗ್ರಹಣವನ್ನು ನೋಡುವುದರಿಂದ ನಿಮ್ಮ ಕಣ್ಣುಗಳಿಗೆ ಹಾನಿ ಆಗುತ್ತದೆ ?
ವಾಸ್ತವ: ಚಂದ್ರಗ್ರಹಣಗಳನ್ನು ಬರಿಗಣ್ಣಿನಿಂದ ನೋಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಚಂದ್ರಗ್ರಹಣವನ್ನು ನೋಡುವುದಕ್ಕೆ ಕನ್ನಡಕ ಅಥವಾ ಫಿಲ್ಟರ್ ಸಾಧನಗಳನ್ನು ಬಳಸುವ ಅವಶ್ಯಕತೆ ಇಲ್ಲ. ಆದರೆ ಸೂರ್ಯಗ್ರಹಣವನ್ನು ನೋಡುವ ಸಂದರ್ಭದಲ್ಲಿ ನೀವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಯಾಕೆಂದರೆ ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ. ಅಲ್ಲದೇ ಬರಿಗಣ್ಣಿನಿಂದ ನೋಡುವುದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
2. ಮಿಥ್ಯೆ: ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಸುರಕ್ಷಿತ ಅಥವಾ ತಪ್ಪು ?
ಸತ್ಯ: ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಸುರಕ್ಷಿತ ಅಥವಾ ತಿನ್ನಬಾರದು ಎನ್ನುವುದಕ್ಕೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ಚಂದ್ರಗ್ರಹಣ ಸಮಯದಲ್ಲಿ ಭೂಮಿಗೆ ಯಾವುದೇ ವಿಕಿರಣ ಬೀಳುವುದಿಲ್ಲ ಅಥವಾ ಪರಿಣಾಮ ಬೀರುವುದಿಲ್ಲ.
3. ಮಿಥ್ಯೆ: ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು. ಹೋದರೆ ಮಗುವಿಗೆ ಗಾಯದ ಗುರುತು ಬೀಳುವ ಸಾಧ್ಯತೆ ಇದೆ ?
ಸತ್ಯ: ವಿಜ್ಞಾನದ ಪ್ರಕಾರ ಈ ವಿಷಯವನ್ನು ಸಾಬೀತು ಮಾಡುವ ಯಾವುದೇ ಪುರಾವೆಗಳಿಲ್ಲ. ಮಗುವಿನ ದೈಹಿಕ ಗುರುತುಗಳು ಮತ್ತು ಲಕ್ಷಣಗಳು ಅವರ ಬೆಳವಣಿಗೆಗೆ ಮಾತ್ರ ಸಂಬಂಧಿಸಿವೆ. ಅಲ್ಲದೇ ಇದು ಡಿಎನ್‌ಎಯಿಂದ ನಿರ್ಧರಿಸಲ್ಪಡುತ್ತವೆ. ಇದಕ್ಕೂ ಚಂದ್ರಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.
4. ಮಿಥ್ಯೆ: ಗ್ರಹಣವು ಭೂಕಂಪ ಹಾಗೂ ಪ್ರಕೃತಿ ವಿಕೋಪಗಳಿಗೆ ಕಾರಣವಾಗಬಹುದು ?
ಸತ್ಯ: ಗ್ರಹಣಗಳು ಯಾವುದೇ ರೀತಿಯ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಸಾಧ್ಯತೆ ಇಲ್ಲ. ಇದು ಆಕಾಶದಲ್ಲಿ ಸಂಭವಿಸುವ ಪ್ರಕ್ರಿಯೆಯಾಗಿದೆ ಮತ್ತು ಅತ್ಯಂತ ಸಹಜ ಪ್ರಕೃತಿ ಪ್ರಕ್ರಿಯೆಯಾಗಿದೆ.
5. ಮಿಥ್ಯೆ: ಗ್ರಹಣಗಳು ಸಂಭವಿಸಿದರೆ ದುರದೃಷ್ಟ ಬರುವ ಸಾಧ್ಯತೆ ಇದೆ ?
ಸತ್ಯ: ಗ್ರಹಣಗಳು ಜನರಿಗೆ ಯಾವುದೇ ದುರದೃಷ್ಟವನ್ನು ಉಂಟುಮಾಡುವುದಿಲ್ಲ. ಇದು ಕೇವಲ ಮೂಢನಂಬಿಕೆಯ ವಿಷಯವಾಗಿದೆ. ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ, ಜನರು ಅದನ್ನು ದುರದೃಷ್ಟ ಎಂದು ಭಾವಿಸುವ ಅವಶ್ಯಕತೆ ಇಲ್ಲ.
-
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Bengaluru Migration: ಬೆಂಗಳೂರಿಗೆ ನಾರ್ಥಿಗಳ ವಲಸೆಗೆ ಇದೇ ಕಾರಣ, ವೈರಲ್ ಪೋಸ್ಟ್ - ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications