ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ಸಂಕಷ್ಟ; ಕ್ಯಾಬಿನೆಟ್‌ಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿರೋ 40 ಮಂದಿ ಹಿರಿಯರು!

ಬೆಂಗಳೂರು, ಮೇ 22: ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳನ್ನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಕಾಂಗ್ರೆಸ್‌ ನಲ್ಲಿ ಚುನಾವಣೆ ಬಳಿಕ ಸೋಲು ಗೆಲುವಿನ ಲೆಕ್ಕಾಚಾರ ಒಂದು ಕಡೆಯಾದ್ರೆ, ಇತ್ತ ಸಚಿವ ಸಂಪುಟ ಸರ್ಜರಿಯ ಚರ್ಚೆ ಜೋರಾಗಿದೆ.

ಹೌದು, ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಂಪುಟ ಪುನರ್‌ ರಚನೆಯ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಒಂದು ವರ್ಷ ಪೂರೈಸಿದ್ದು, ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಿಂದ ಮಂತ್ರಿಗಿರಗಾಗಿ ಸಾಕಷ್ಟು ಒತ್ತಡಗಳು ಕೇಳಿ ಬರುತ್ತಿವೆ. ಕಳೆದ ವರ್ಷ ಮೇ 20 ರಂದು ಸಿದ್ದರಾಮಯ್ಯ ಅವರು ಸರ್ಕಾರ ರಚಿಸಿದಾಗ, ಅವರು ತಮ್ಮ ಸಚಿವ ಸಂಪುಟದ ಎಲ್ಲಾ 34 ಸ್ಥಾನಗಳನ್ನು ಒಂದೇ ಬಾರಿಗೆ ಸಚಿವರುಗಳನ್ನ ಆಯ್ಕೆ ಮಾಡಿಕೊಂಡಿದ್ದರು.

Cabinet Surgery Some 40 senior Congressmen are aspiring for ministerial berths

ಸಚಿವ ಸಂಪುಟ ರಚನೆಯಾದ ಸಂದರ್ಭದಲ್ಲಿ ಮಂತ್ರಿಗಿರಿ ಕೈ ತಪ್ಪಿದ ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತಪಸಿದ್ದರು. ಅಲ್ಲದೇ ಬಹಿರಂಗವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಕೆಲ ನಾಯಕರು ಸಚಿವ ಸಂಪುಟದಿಂದ ವಂಚಿತರಾದ ನಾಯಕರಿಗೆ ಭರವಸೆ ನೀಡಿದ್ರು. ಇದೀಗ ಲೋಕಸಭೆ ಚುನಾವಣೆಯ ನಂತರ ಹೊಸ ಮುಖಗಳೊಂದಿಗೆ ಅವಕಾಶ ಕೊಡಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.

Cabinet Surgery Some 40 senior Congressmen are aspiring for ministerial berths

ಇನ್ನೂ ಎರಡುವರೆ ವರ್ಷದ ನಂತನ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಸೂತ್ರ ಪದೇ ಪದೇ ಕೈ ಪಾಳಯದಲ್ಲಿ ಕೇಳಿ ಬರುತ್ತಿದ್ದು, ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಮಾತುಗಳು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುನ್ನಲೆಗೆ ಬರುವ ಸಾಧ್ಯತೆ ಇದೆ. ಇತ್ತ ಸಚಿವ ಸಂಪುಟದಿಂದ ವಂಚಿತರಾದ ಸುಮಾರು 40 ಹಿರಿಯ ಕಾಂಗ್ರೆಸ್ಸಿಗರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಲೋಕಸಭೆ ಚುನಾವಣೆ ಮುಗಿದ ನಂತರ ಅವರು ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರೀಕ್ಷೆಯಿದೆ.

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕ್ಷೇತ್ರಗಳನ್ನ ಗೆಲ್ಲದಿದ್ದರೇ ಅಥವಾ ಕಳಪೆ ಪ್ರದರ್ಶನ ನೀಡಿದರೆ ಕೆಲವು ಸಚಿವರನ್ನು ಕೈಬಿಡಬಹುದು ಎಂದು ಪಕ್ಷದ ವರಿಷ್ಠರು ಈ ಹಿಂದೆ ಸೂಚಿಸಿದ್ದರು. ಆರಂಭದಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಕೇಳಿದರೂ ನಿರಾಕರಿಸಿದ ಸಚಿವರ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಕೆಲ ಸಚಿವರಿಗೆ ಸಚಿವ ಸ್ಥಾನ ಕೈ ತಪ್ಪುವ ಆತಂಕ ಶುರುವಾಗಿದೆ.

ಚುನಾವಣೆಯ ಫಲಿತಾಂಶವು ಅವರ ದಕ್ಷತೆಯನ್ನು ಅಳೆಯುವ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಯಾ ಜಿಲ್ಲೆಗಳಲ್ಲಿ ಪಕ್ಷವು ಕಳಪೆ ಪ್ರದರ್ಶನ ನೀಡಿದರೆ ಮುಂದಿನ ಕ್ರಮದ ಕುರಿತು ಚರ್ಚಿಸಲು ಆಕಾಂಕ್ಷಿ ಹಿರಿಯ ಶಾಸಕರು ಶೀಘ್ರದಲ್ಲೇ ಸಭೆ ನಡೆಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಕೂಡ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ ಮತ್ತು ಗೆಲುವಿಗೆ ಕಾರಣರಾದ ಶಾಸಕರು ಸಚಿವ ಸಂಪುಟದಲ್ಲಿ ಸ್ಥಾನವನ್ನ ನಿರೀಕ್ಷಿಸುವುದು ಸಹಜ . ಅವರಲ್ಲಿ ಹಲವರು ತಮ್ಮ ಕುಂದುಕೊರತೆಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ಸಿಎಂ ತಾಳ್ಮೆಯಿಂದ ಆಲಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+