ಹಾಲಿನ ದರ ಏರಿಕೆಗೆ ಸಂಪುಟ ಅಸ್ತು: ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡ ಮಹತ್ವದ ನಿರ್ಣಯಗಳು ಇಲ್ಲಿವೆ!

ಬೆಂಗಳೂರು, ಜುಲೈ 27: ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪುಗೆ ನೀಡಿದ್ದು, ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಆಗಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಈ ಕುರಿತು ಗುರುವಾರ ಸಿಎಂ‌ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ. ಇನ್ನೂ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಮಾಧ್ಯಮಗಳ ಜೊತೆಗೆ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆ ಸನ್ನಡತೆಯ ಆಧಾರದ ಮೇಲೆ 67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ 24, ಮೈಸೂರು- 8, ಬೆಳಗಾವಿ 2, ಕಲಬುರಗಿ 5,ಶಿವಮೊಗ್ಗ 12, ಬಳ್ಳಾರಿ 8, ಧಾರವಾಡ ಸೆಂಟ್ರಲ್ ಜೈಲು - 2 ಕೈದಿಗಳಿಗೆ ಆಗಸ್ಟ್ 15 ಕ್ಕೆ ಬಿಡುಗಡೆ ಭಾಗ್ಯ ಸಿಗಲಿದೆ ಎಂದು ಹೇಳಿದರು.

cabinet-meeting-nandini-milk-price

ಸಂಪುಟದ ಇತರ ತೀರ್ಮಾನಗಳು ಇಲ್ಲಿವೆ:

  • ಬೆಂಗಳೂರಿನಲ್ಲಿ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ 22ಕೋಟಿ ಮಂಜೂರು. ನೆಫ್ರೋ ಯುರಾಲಜಿ ಕಟ್ಟಡಕ್ಕೆ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ
  • ಲೋಕೋಪಯೋಗಿ ಇಲಾಖೆಯಲ್ಲಿ ಹೊಸ ಪ್ರಾಧಿಕಾರ ರಚನೆಗೆ ಒಪ್ಪಿಗೆ
  • ಕರ್ನಾಟಕ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ
  • ಪ್ರವರ್ಗ 3ಎ ನಲ್ಲಿ ಕೊಡಗರು ಎಂದಿರುದರ ಬದಲಾಗಿ ಕೊಡವ ಹಾಗೂ ಕೊಡವರು ಎಂದು ಬದಲಾಯಿಸಲು ಸಂಪುಟ ಸಮ್ಮತಿ. ಹಿಂದುಳಿದ ವರ್ಗಗಳ ಆಯೋಗ ಶಿಪಾರಸ್ಸು ಮಾಡಿತ್ತು.
  • ರಾಜ್ಯದ ಹಲವೆಡೆ ಒತ್ತುವರಿದಾರ ಕಲ್ಲು ಗಣಿಕಾರಿಕೆ ಮಾಲೀಕರಿಂದ ಒಂದು ಸಲ ದಂಡ ಕಟ್ಟಿಸಿಕೊಳ್ಳಲು ನಿರ್ಣಯ

    ಹಾಲಿನ ದರ 3 ರೂ. ಹೆಚ್ಚಳ; ಕೆಎಂಎಫ್‌ ಅಧ್ಯಕ್ಷರ ಸಮರ್ಥನೆ

    • ನಬಾರ್ಡ್ ಯೋಜನೆಯಡಿ ಸಹಕಾರ ಇಲಾಖೆಗೆ ಎಪಿಎಂಸಿಗಳಿಗೆ ರಸ್ತೆ, ಮೂಲಭೂತ ಸೌಕರ್ಯ ಒದಗಿಸಲು 130.40 ಕೋಟಿ ರೂ ಮಂಜೂರು
    • ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ. ರಾಜಶೇಖರ್ ಅವರನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ.
    • ಡಾ.ಮೈತ್ರಿಗೆ ಕೆಎಎಸ್ ಗ್ರೂಪ್ ಎ ಕಿರಿಯ ಶ್ರೇಣಿ ಹುದ್ದೆ ನೀಡುವ ಪ್ರಸ್ತಾಪಕ್ಕೆ ಸಂಪುಟ ಪುರಸ್ಕಾರ.
    • ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ ವಲಯವೆಂದು ಘೋಷಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲು ಹಟಗೂಯ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ಸಂಪುಟ ನಿರ್ಧಾರ.
    • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಫ್ರೋ ಯೂರಾಲಜಿಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ.
    • ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+