ಸಿ-ಫೋರ್ ಸಮೀಕ್ಷೆ : ಚುನಾವಣೆ ಮೇಲೆ ಐಟಿ ದಾಳಿ ಪ್ರಭಾವವೇನು?

ಬೆಂಗಳೂರು, ಮಾರ್ಚ್ 26 : ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಇದು ಕಾಂಗ್ರೆಸ್ ನಾಯಕರನ್ನು ಬೆದರಿಸಲು ಬಿಜೆಪಿ ಮಾಡುತ್ತಿರುವ ತಂತ್ರ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ.

ಸಿ-ಫೋರ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವಾಗ ಐಟಿ ದಾಳಿ ಬಗ್ಗೆಯೂ ಜನರನ್ನು ಪ್ರಶ್ನೆ ಮಾಡಿದೆ. ಹೌದು ಐಟಿ ದಾಳಿ ಮಾಡಿಸಿದ್ದು ರಾಜಕೀಯ ಪ್ರೇರಿತ ಎಂದು ಶೇ 58ರಷ್ಟು ಜನರು ಉತ್ತರ ನೀಡಿದ್ದಾರೆ.

ಮಾರ್ಚ್ 1ರಿಂದ 25ರ ತನಕ ಸಿ-ಫೋರ್ ಸಂಸ್ಥೆ ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಲ್ಲಿ 22,357 ಜನರನ್ನು ಸಂದರ್ಶನ ಮಾಡಿ ಸಮೀಕ್ಷೆಯನ್ನು ಮಾಡಲಾಗಿದೆ.

326 ನಗರ, 977 ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 126 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಐಟಿ ದಾಳಿ ಬಗ್ಗೆ ಜನರು ಹೇಳುವುದೇನು? ಚಿತ್ರಗಳಲ್ಲಿ ನೋಡಿ...

ರಾಜಕೀಯ ಪ್ರೇರಿತ ದಾಳಿ

ರಾಜಕೀಯ ಪ್ರೇರಿತ ದಾಳಿ

ಕಾಂಗ್ರೆಸ್ ಆರೋಪಿಸಿದಂತೆ ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳನ್ನು ಬಿಜೆಪಿ ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದೆಯೇ? ಎಂದು ಜನರನ್ನು ಪ್ರಶ್ನಿಸಲಾಗಿತ್ತು.

ಶೇ 58ರಷ್ಟು ಜನರು ಹೌದು ಎಂದು, ಶೇ 34 ರಷ್ಟು ಜನರು ಇಲ್ಲ ಎಂದು ಮತ್ತು ಶೇ 8ರಷ್ಟು ಜನರು ತಿಳಿದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

500, 1000 ರೂ. ನೋಟು ನಿಷೇಧದ ಬಗ್ಗೆ?

500, 1000 ರೂ. ನೋಟು ನಿಷೇಧದ ಬಗ್ಗೆ?

ಸಿ-ಫೋರ್ ಸಮೀಕ್ಷೆಯಲ್ಲಿ ನೋಟುಗಳ ನಿಷೇಧದ ಬಗ್ಗೆಯೂ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ಶೇ 48 ರಷ್ಟು ಜನರು ಇದು ದೇಶಕ್ಕೆ ಉತ್ತಮವಾದದ್ದು, ಇದರಿಂದ ಕಪ್ಪು ಹಣದ ಪ್ರಭಾವ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಶೇ 52ರಷ್ಟು ಜನರು ನೋಟುಗಳ ನಿಷೇಧದಿಂದ ಉದ್ಯೋಗ ಸೃಷ್ಟಿಗೆ ತೊಂದರೆ ಆಗಿದೆ ಎಂದು ಜನರು ಹೇಳಿದ್ದಾರೆ.

ಜಿಎಸ್‌ಟಿ ಬಗ್ಗೆ ಜನರ ಅಭಿಪ್ರಾಯ?

ಜಿಎಸ್‌ಟಿ ಬಗ್ಗೆ ಜನರ ಅಭಿಪ್ರಾಯ?

ಸಿ-ಫೋರ್ ಸಮೀಕ್ಷೆಯಲ್ಲಿ ಜಿಎಸ್‌ಟಿ ಜಾರಿ ಬಗ್ಗೆ ಜನರ ಅಭಿಪ್ರಾಯ ಕೇಳಲಾಗಿದೆ.

ಇದು ಆರ್ಥಕ ವ್ಯವಸ್ಥೆಗೆ ಉತ್ತಮವಾದದ್ದು ಎಂದು ಶೇ 36ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‌ಟಿ ಜಾರಿಯಿಂದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಶೇ 64ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಅಮಿತ್ ಶಾ ಪುತ್ರನ ಹಗರಣ?

ಅಮಿತ್ ಶಾ ಪುತ್ರನ ಹಗರಣ?

ಸಿ-ಫೋರ್ ಸಮೀಕ್ಷೆಯಲ್ಲಿ ಅಮಿತ್ ಶಾ ಪುತ್ರ ಜೈ ಶಾ ಹಗರಣ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ? ಎಂದು ಪ್ರಶ್ನೆ ಮಾಡಲಾಗಿದೆ.

ಅಮಿತ್ ಶಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಲ್ಲ ಎಂದು ಶೇ 23ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಶೇ 41ರಷ್ಟು ಜನರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಹೇಳಿದ್ದಾರೆ. ಶೇ 36ರಷ್ಟು ಜನರು ಜೈ ಶಾ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+