Byrathi Suresh: ಸಚಿವ ಬೈರತಿ ಸುರೇಶ್ ಫೇಸ್‌ಬುಕ್ ಖಾತೆಯಿಂದ ಕೆಟ್ಟ ಕೆಟ್ಟ ಕಾಮೆಂಟ್
ರಾಜ್ಯ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅವಾಚ್ಯವಾಗಿ ನಿಂದಿಸಿ ಕಾಮೆಂಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸುರೇಶ್ ಅವರ ಅಧಿಕೃತ ಖಾತೆಯಿಂದಲೇ ಈ ಕಾಮೆಂಟ್ ಬಂದಿದ್ದು, ಈ ಕಾಮೆಂಟ್ ಅನ್ನು ಸುರೇಶ್ ಅವರೇ ಮಾಡಿದ್ದಾರೆ ಎಂದು ಎಲ್ಲರೂ ದೂರಿದ್ದಾರೆ. ಕೆಲವರು ಸಚಿವರಾಗಿ ಇಂತಹ ಕೀಳು ಭಾಷೆ ಬಳಸಿದ್ದೀರಲ್ಲ ಎಂದು ತರಾಟೆ ಕೂಡ ತೆಗೆದುಕೊಂಡಿದ್ದಾರೆ. ಆದರೆ ಕೊನೆಗೆ ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವುದಾಗಿ ಸಚಿವ ಬೈರತಿ ಸುರೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಇಷ್ಟಕ್ಕೂ ಆ ಕಾಮೆಂಟ್ ಏನು? ಎಂಬುದರ ವಿವರ ಇಲ್ಲಿದೆ..
ಸಚಿವರಾದ ಕಾರಣ ಬೈರತಿ ಸುರೇಶ್ ಅವರು ತಮ್ಮ ದೈನಂದಿನ ವಿಚಾರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಪ್ರತಿದಿನ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳ ಮಾಹಿತಿ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಅದರಂತೆ ಉಚಿತ ನೀರು ಪೂರೈಸುವ ನೀರಿನ ಟ್ಯಾಂಕರ್ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್ಬುಕ್ ಪೋಸ್ಟ್ ಮಾಡಿದ್ದರು. ಆದರೆ ವ್ಯಕ್ತಿಯೊಬ್ಬ ಬೈರತಿ ಸುರೇಶ್ ಹಂಚಿಕೊಂಡಿದ್ದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. "ಎಲ್ಲ ನಾಟಕಗಳು, ಜನ ಮೂರ್ಖರು" ಎಂದು ಆ ವ್ಯಕ್ತಿ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಮಾಡಿದ್ದ ಎಂದು ತಿಳಿದುಬಂದಿದೆ.

ಇದಕ್ಕೆ ಬೈರತಿ ಸುರೇಶ್ ಅವರ ಅಧಿಕೃತ ಖಾತೆಯಿಂದಲೇ ರಿಪ್ಲೈ ಕೂಡ ಬಂದಿದೆ. ಇದರಲ್ಲಿ ಬೈರತಿ ಅವರು ಅವಾಚ್ಯ ಪದಗಳನ್ನು ಬಳಸಿ ಆತನಿಗೆ ನಿಂದಿಸಿ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಎಂಬ ವ್ಯಕ್ತಿಗೆ ಈ ರೀತಿ ಕೆಟ್ಟ ಪದಗಳಿಂದ ಸಚಿವ ಸುರೇಶ್ ನಿಂದಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೆ ಈ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಹಲವರು ಹಂಚಿಕೊಳ್ಳುವ ಮೂಲಕ ಕಾಮೆಂಟ್ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು.
ಇನ್ನು ಆ ಕಾಮೆಂಟ್ ಅನ್ನು ಬೈರತಿ ಸುರೇಶ್ ಅವರೇ ಮಾಡಿದ್ದಾರೆ ಎಂದುಕೊಂಡಿದ್ದ ಕಾರ್ತಿಕ್ ಕೂಡ ಮತ್ತೆ ಅದಕ್ಕೆ ರಿಪ್ಲೈ ಮಾಡಿದ್ದಾನೆ. "ಮೊದಲು ಹೆತ್ತ ತಾಯಿಗೆ ಗೌರವ ಕೊಡೋದು ಕಲಿ, ನೀನೆಲ್ಲ ಒಬ್ಬ ಜನಪ್ರತಿನಿಧಿ ಅಂತೆ, ಕೆಟ್ಟ ಪದಗಳನ್ನು ಬಳಕೆ ಮಾಡುವ ನಿಗಗೆ ನಾಚಿಕೆ ಆಗ್ಬೇಕು, ನಾನು ಸರಿಯಾಗಿಯೇ ಹೇಳಿದ್ದೀನಿ. ನಿನ್ನಂತವರನ್ನು ಆರಿಸಿದ ಜನರು ಮೂರ್ಖರು. ಜನಸಾಮಾನ್ಯರ ಹತ್ತಿರ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲ" ಎಂದು ಕಾಮೆಂಟ್ ಮಾಡಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಈ ಎರಡೂ ಕಾಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳು ಹರಿದಾಡಿದ್ದು, ಇದರ ಬೆನ್ನಲ್ಲೇ ಅವರು ಡಿಲೀಟ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ಬೈರತಿ ಸುರೇಶ್ ಅವರು ಈ ಬಗ್ಗೆ ಮತ್ತೆ ತಮ್ಮ ಫೇಸ್‌ಬುಕ್ ಖಾತೆ ಮೂಲಕ ಪೋಸ್ಟ್ ಮಾಡಿ ಸ್ಪಷ್ಟನೆಯೂ ನೀಡಿದ್ದಾರೆ. "ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ. ಯಾವುದೇ ರೀತಿಯ ಮೆಸೇಜ್‌ಗಳಿಗೆ ಯಾರೂ ಕೂಡ ಅನ್ಯತಾ ಭಾವಿಸಬೇಡಿ" ಎಂದು ಪೋಸ್ಟ್ ಮೂಲಕ ಹೇಳಿದ್ದಾರೆ. ಈ ಕಾಮೆಂಟ್‌ಗೂ ಹಲವರು ರಿಪ್ಲೈ ಮಾಡಿದ್ದು, ಸಚಿವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications