ಕುಮಾರಸ್ವಾಮಿಗೆ ಟ್ವೀಟರ್ ಮೂಲಕ ತಿರುಗೇಟು ಕೊಟ್ಟ ವಿಜಯೇಂದ್ರ!
Recommended Video
ಬೆಂಗಳೂರು, ಆಗಸ್ಟ್ 19 : "ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರರನ್ನೇ ಇದರ ಹಿಂದೆ ಬಿಟ್ಟಿದ್ದಾರೆ" ಇದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾಡಿದ್ದ ಗಂಭೀರ ಆರೋಪ.
ಭಾನುವಾರ ಉಡುಪಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, "ವರ್ಗಾವಣೆ ದಂಧೆಯ ಕರಾಳತೆ ಸರ್ಕಾರಿ ಅಧಿಕಾರಿಗಳಿಗೆ ತಿಳಿದಿದ್ದು, ಅವರ ಪ್ರಾಮಾಣಿಕತನ ಮುಂದಿನ ದಿನಗಳಲ್ಲಿ ಹೊರಬರುತ್ತದೆ" ಎಂದು ಹೇಳಿದ್ದರು.

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕುಮಾರಸ್ವಾಮಿ ಆರೋಪಕ್ಕೆ ಟ್ವೀಟರ್ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಎಚ್. ಡಿ. ರೇವಣ್ಣ ಮಾಡಿದ್ದ ವರ್ಗಾವಣೆಯ ಸುದ್ದಿ ಇರುವ ಫೋಟೋವನ್ನು ಹಾಕಿದ್ದಾರೆ.
ವಿಜಯೇಂದ್ರ ಟ್ವೀಟ್ : "ಕಮೀಷನ್ ದಂಧೆ ,ವರ್ಗಾವಣೆ ದಂಧೆ,ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ, "ಕೋತಿ ತಾನು ತಿಂದು ಮೇಕೆ ಬಾಯಿಗೆವರೆಸಿ ದಂತಿದೆ "ನಿಮ್ಮ ಮಾತುಗಳು. CBI ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ ವಿಷಯಾಂತರಗೊಳಿಸಿ ಜನತೆಯ ಧಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ" ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, 'ಮೈತ್ರಿ ಸರ್ಕಾರವನ್ನು ಲೂಟಿ ಸರ್ಕಾರ. ವರ್ಗಾವಣೆ ದಂಧೆ ಸರ್ಕಾರವೆಂದು ಆರೋಪ ಮಾಡುತ್ತಿದ್ದ ಯಡಿಯೂರಪ್ಪ ಈಗ ಜೈಲಿಗೆ ಹೋಗಿ ಬಂದಿದ್ದ ತಹಶೀಲ್ದಾರ್‌ನನ್ನು ಯಲಹಂಕಕ್ಕೆ ನೇಮಕ ಮಾಡಲು ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ" ಎಂದು ಪ್ರಶ್ನಿಸಿದ್ದರು.













Click it and Unblock the Notifications