ಬಿ ಕೆ ಸಂಗಮೇಶ್ ಪುತ್ರನ ಗೂಂಡಾಗಿರಿ: ಸರ್ಕಾರದ ವಿರುದ್ಧ ಬಿ ವೈ ವಿಜಯೇಂದ್ರ ವಾಗ್ದಾಳಿ

ಬೆಂಗಳೂರು, ಫೆಬ್ರವರಿ 11: ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನದ ಮಹಿಳಾ ಅಧಿಕಾರಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರ ಅತ್ಯಂತ ಕೆಟ್ಟ ಪದಗಳಿಂದ ಬೈದು ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಂಗಮೇಶ್‌ ಅವರ ಪುತ್ರನ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿ ಜ್ಯೂತಿ ಎಂಬವರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ಕಳೆದ ರಾತ್ರಿ ದಾಳಿ ಮಾಡಿದ್ದರು. ಈ ವೇಳೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಸಂಗಮೇಶ್ ಪುತ್ರ ಬಸವೇಶ್ ಈ ಕೃತ್ಯವನ್ನು ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿಯನ್ನ ನಡೆಸಿದ್ದಾರೆ.

BY Vijayendra attacks Congress MLA BK Sangamesh Son

ಈ ಕುರಿತು ಟ್ವೀಟ್‌ ಮೂಲಕ ಕಿರಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಭದ್ರಾವತಿಯ ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕರ್ತವ್ಯ ನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಸಕರ ಪುತ್ರನೆಂಬ ಅಹಂಕಾರದಿಂದ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ಭದ್ರಾವತಿ ಗೂಂಡಾಗಿರಿಯಲ್ಲಿ ನಲುಗುತ್ತಿರುವುದನ್ನು ಸಾಕ್ಷೀಕರಿಸಿದೆ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ತ್ರೀಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯ ಒಂದು ಕಡೆಯಾದರೆ, ಸರ್ಕಾರದ ಮಹಿಳಾ ಅಧಿಕಾರಿ/ಸಿಬ್ಬಂದಿಗಳಿಗೂ ಯಾವ ರಕ್ಷಣೆಯೂ ಇಲ್ಲ ಎನ್ನುವುದಕ್ಕೆ ನಿನ್ನೆಯ ಘಟನೆ ಕನ್ನಡಿ ಹಿಡಿದಿದೆ, ಭದ್ರಾವತಿಯ ಗುಂಡಾಗಿರಿ ಆಡಳಿತ ಸಮರ್ಥಿಸುವ ರೀತಿಯಲ್ಲಿ ಸರ್ಕಾರ ಈವರೆಗೂ ಶಾಸಕರ ಪುತ್ರನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಗಮನಿಸಿದರೆ ಈ ಸರ್ಕಾರ ಯಾರ ರಕ್ಷಕ ಎಂಬುದು ಜನರಿಗೆ ಮನವರಿಕೆಯಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಅಪಮಾನವಾಯಿತೆಂದು ನಮ್ಮ ಪಕ್ಷದ ಶಾಸಕರ ವಿರುದ್ಧ ಕ್ಷಣಮಾತ್ರದಲ್ಲಿ ನಿಯಮ ಮೀರಿ ಕ್ರಮ ಜರುಗಿಸಲು ಮುಂದಾದ ಸರ್ಕಾರ, ಸರ್ಕಾರದ ಮಹಿಳಾ ಅಧಿಕಾರಿಯ ಮೇಲೆ ನೇರಾ ನೇರ ದುಶ್ಯಾಸನ ದಾಳಿ ನಡೆದಿರುವಾಗ ಕಣ್ಣು ಮುಚ್ಚಿ ಕುಳಿತಿರುವುದೇಕೆ? ಈ ಸಂಬಂಧ ಮಹಿಳಾ ಆಯೋಗ ಕೂಡ ಈ ಕ್ಷಣದವರೆಗೂ ಮೌನ ವಹಿಸಿ ಕುಳಿತಿರುವುದೇಕೆ? ಎಂದು ಶಿಕಾರಿಪುರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಭದ್ರಾವತಿ ಶಾಸಕರ ಪುತ್ರನ ಪ್ರಕರಣ ಕುರಿತು ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ, ಅಧಿಕಾರಿಗಳನ್ನು ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದನೆ ಮಾಡುವುದು ಅಪರಾಧ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಬೇಕು. ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಹಾಗೆ ಮಾತನಾಡಬಾರದು. ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲೀ, ಶಾಸಕ‌ ಆಗಲೀ, ಶಾಸಕನ‌ ಮಗ ಆಗಲೀ ಯಾರೂ ಹಾಗೆ ಮಾತನಾಡಬಾರದು. ಹಾಗೆ ಮಾತನಾಡೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+