• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಮಪತ್ರ ಸಲ್ಲಿಕೆ ಮುಕ್ತಾಯ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ

|
Google Oneindia Kannada News
   ಉಪ ಚುನಾವಣೆಯಿಂದ ಹಿಂದೆ ಸರಿದ ಅನರ್ಹ ಶಾಸಕರು | Oneindia kannada

   ಬೆಂಗಳೂರು, ನವೆಂಬರ್ 19: ರಾಜ್ಯದಲ್ಲಿ ಉಪ ಚುನಾವಣೆ ಕದನದ ಒಂದು ಹಂತ ಮುಕ್ತಾಯಗೊಂಡಿದೆ. ಯಾರಿಗೆ ಟಿಕೆಟ್ ಸಿಕ್ಕಿದೆ, ಯಾರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಹಾಗೂ ಯಾರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಗಳಿಗೆ ಉತ್ತರ ದೊರಕಿದೆ. 15 ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗೆ ನೂರಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

   ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆಆರ್ ಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಹುಣಸೂರು ಮತ್ತು ಕೆಆರ್ ಪೇಟೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದರು.

   ಕೊನೆಯ ದಿನ ನಾಮಪತ್ರ ಸಲ್ಲಿಸಿದ ಹಲವು ಘಟಾನುಘಟಿ ನಾಯಕರುಕೊನೆಯ ದಿನ ನಾಮಪತ್ರ ಸಲ್ಲಿಸಿದ ಹಲವು ಘಟಾನುಘಟಿ ನಾಯಕರು

   ಈ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ನ.21 ಕೊನೆಯ ದಿನವಾಗಿದೆ. ಎಷ್ಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ, ಯಾರ ನಾಮಪತ್ರ ತಿರಸ್ಕೃತವಾಗಲಿದೆ, ಯಾರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲಗಳಿಗೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ. ಈಗ ನಾಮಪತ್ರ ಸಲ್ಲಿಸಿ ಕಣದಲ್ಲಿರುವ ಪ್ರಮುಖ ಹೆಸರುಗಳ ಪಟ್ಟಿ ಇಲ್ಲಿದೆ.

   ಬೆಂಗಳೂರು ನಗರ ಭಾಗ

   ಬೆಂಗಳೂರು ನಗರ ಭಾಗ

   * ಯಶವಂತಪುರ ಕ್ಷೇತ್ರ

   ಎಸ್‌ಟಿ ಸೋಮಶೇಖರ್ (ಬಿಜೆಪಿ), ಪಿ. ನಾಗರಾಜ್ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್)

   * ಕೆಆರ್ ಪುರ

   ಬೈರತಿ ಬಸವರಾಜ್ (ಬಿಜೆಪಿ), ನಾರಾಯಣಸ್ವಾಮಿ (ಕಾಂಗ್ರೆಸ್), ಕೃಷ್ಣಮೂರ್ತಿ (ಜೆಡಿಎಸ್)


   * ಮಹಾಲಕ್ಷ್ಮಿ ಲೇಔಟ್

   ಕೆ. ಗೋಪಾಲಯ್ಯ (ಬಿಜೆಪಿ), ಎಂ. ಶಿವರಾಮು (ಕಾಂಗ್ರೆಸ್), ಡಾ. ಗಿರೀಶ್ ನಾಶಿ (ಜೆಡಿಎಸ್)


   * ಶಿವಾಜಿನಗರ

   ಶರವಣ (ಬಿಜೆಪಿ), ರಿಜ್ವಾನ್ ಅರ್ಷದ್ (ಕಾಂಗ್ರೆಸ್), ತನ್ವೀರ್ ಅಹ್ಮದ್ (ಜೆಡಿಎಸ್)

   ಎಂಟಿಬಿ, ವಿಶ್ವನಾಥ್, ನಾರಾಯಣಗೌಡ

   ಎಂಟಿಬಿ, ವಿಶ್ವನಾಥ್, ನಾರಾಯಣಗೌಡ

   * ಚಿಕ್ಕಬಳ್ಳಾಪುರ

   ಕೆ. ಸುಧಾಕರ್ (ಬಿಜೆಪಿ), ಆಂಜಿನಪ್ಪ (ಕಾಂಗ್ರೆಸ್), ಕೆಪಿ ಬಚ್ಚೇಗೌಡ,ಮತ್ತು ರಾಧಾಕೃಷ್ಣ (ಜೆಡಿಎಸ್)

   * ಹೊಸಕೋಟೆ

   ಎಂಟಿಬಿ ನಾಗರಾಜ್ (ಬಿಜೆಪಿ), ಪದ್ಮಾವತಿ ಸುರೇಶ್ (ಕಾಂಗ್ರೆಸ್), ಶರತ್ ಬಚ್ಚೇಗೌಡ (ಪಕ್ಷೇತರ)

   * ಹುಣಸೂರು

   ಎಚ್ ವಿಶ್ವನಾಥ್ (ಬಿಜೆಪಿ), ಎಚ್ ಪಿ ಮಂಜುನಾಥ್ (ಕಾಂಗ್ರೆಸ್), ಸೋಮಶೇಖರ್ (ಜೆಡಿಎಸ್)

   * ಕೆಆರ್ ಪೇಟೆ

   ನಾರಾಯಣಗೌಡ (ಬಿಜೆಪಿ), ಕೆಬಿ ಚಂದ್ರಶೇಖರ್ (ಕಾಂಗ್ರೆಸ್), ದೇವರಾಜ್ ಬಿಎಲ್ (ಜೆಡಿಎಸ್)

   ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

   ಜಾರಕಿಹೊಳಿ ಸಹೋದರರ ಉಮೇದುವಾರಿಕೆ

   ಜಾರಕಿಹೊಳಿ ಸಹೋದರರ ಉಮೇದುವಾರಿಕೆ

   * ಗೋಕಾಕ್

   ರಮೇಶ್ ಜಾರಕಿಹೊಳಿ (ಬಿಜೆಪಿ), ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ (ಕಾಂಗ್ರೆಸ್), ಅಶೋಕ್ ಪೂಜಾರಿ (ಜೆಡಿಎಸ್)

   * ಅಥಣಿ

   ಮಹೇಶ್ ಕುಮಟಳ್ಳಿ (ಬಿಜೆಪಿ), ಗಜಾನನ ಮಂಗಸೂಳಿ (ಕಾಂಗ್ರೆಸ್), ಗುರು ದಾಶ್ಯಾಳ (ಜೆಡಿಎಸ್)

   * ಕಾಗವಾಡ

   ಶ್ರೀಮಂತ್ ಪಾಟೀಲ್ (ಬಿಜೆಪಿ), ರಾಜು ಕಾಗೆ (ಕಾಂಗ್ರೆಸ್), ಶ್ರೀಶೈಲ್ ತುಗಶೆಟ್ಟಿ (ಜೆಡಿಎಸ್)

   ಕೆಬಿ ಕೋಳಿವಾಡ, ಸ್ವಾಮೀಜಿ, ಆನಂದ್ ಸಿಂಗ್

   ಕೆಬಿ ಕೋಳಿವಾಡ, ಸ್ವಾಮೀಜಿ, ಆನಂದ್ ಸಿಂಗ್

   * ರಾಣೆಬೆನ್ನೂರು

   ಅರುಣ್ ಕುಮಾರ್ ಪೂಜಾರಿ (ಬಿಜೆಪಿ), ಕೆಬಿ ಕೋಳಿವಾಡ (ಕಾಂಗ್ರೆಸ್), ಮಲ್ಲಿಕಾರ್ಜುನ ಹಲಗೇರಿ (ಜೆಡಿಎಸ್)

   * ಹಿರೇಕೆರೂರು

   ಬಿ.ಸಿ ಪಾಟೀಲ್ (ಬಿಜೆಪಿ), ಬಿಎಚ್ ಬನ್ನಿಕೋಡ್ (ಕಾಂಗ್ರೆಸ್), ಶಿವಾನಂದ ಶಿವಾಚಾರ್ಯ ಸ್ವಾಮೀಜಿ (ಜೆಡಿಎಸ್)

   *ವಿಜಯನಗರ

   ಆನಂದ್ ಸಿಂಗ್ (ಬಿಜೆಪಿ), ಬಿವೈ ಘೋರ್ಪಡೆ (ಕಾಂಗ್ರೆಸ್), ಎನ್ ಎಂ ನಬಿ (ಜೆಡಿಎಸ್), ಕವಿರಾಜ್ ಅರಸು (ಬಿಜೆಪಿ ಬಂಡಾಯ)

   *ಯಲ್ಲಾಪುರ

   ಶಿವರಾಂ ಹೆಬ್ಬಾರ್ (ಬಿಜೆಪಿ), ಭೀಮಣ್ಣ ನಾಯ್ಕ್ (ಕಾಂಗ್ರೆಸ್), ಚೈತ್ರಾ ಗೌಡ (ಜೆಡಿಎಸ್)

   English summary
   Filing of nomination has ended on Monday for by elections. Here is a final list of candidates from key parties who submitted their nomination.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X