• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?

|

ಬೆಂಗಳೂರು, ಡಿಸೆಂಬರ್ 11: ಮುಖ್ಯಮಂತ್ರಿ ಯಡಿಯೂರಪ್ಪ ನೇತೃಯ್ವದ ಸಚಿವ ಸಂಪುಟ ವಿಸ್ತರಣೆಗೆ ಯಾವಾಗ? ಸಂಪುಟ ಸೇರ್ಪಡೆಗೊಳ್ಳುವವರ ಹೆಸರು, ಸಮಯ ಮತ್ತು ಸಂಭಾವ್ಯ ಪಟ್ಟಿ ಸಿದ್ಧವಾಗಿದೆ. ಆದರೆ ಪಕ್ಷದ ವರಿಷ್ಠರು ಮಂತ್ರಿಮಂಡಲ ವಿಸ್ತರಣೆಗೆ ಇನ್ನೂ ಹಸಿರು ನಿಶಾನೆ ತೋರಿಲ್ಲ. ಇನ್ನೊಂದೆರಡು ದಿನ ಕಳೆದರೆ ಧನುರ್ಮಾಸ ಎಂದು ಹೇಳಿ ಜನವರಿ ತಿಂಗಳಿಗೆ ಸಂಪುಟ ವಿಸ್ತರಣೆ ಮುಂದೂಡುವ ಎಲ್ಲಾ ಸಾಧ್ಯತೆಯಿದೆ. ಆದರೆ, ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ...

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹಗೊಂಡು ಮತ್ತೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಳಿಸಿ ಸ್ಪರ್ಧಿಸಿ ಗೆದ್ದು ಶಾಸಕರಾಗಿರುವ ರಮೇಶ್ ಜಾರಕಿ ಹೊಳಿ, ಗೋಪಾಲಯ್ಯ, ಎಸ್.ಟಿ. ಸೋಮೋಮಶೇಖರ್, ನಾರಾಯಣ ಗೌಡ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಕೆ. ಸುಧಾಕರ್ ಹಾಗೂ ಬಿ.ಸಿ. ಪಾಟೀಲ್ ಮಂತ್ರಿಯಾಗಲಿದ್ದಾರೆ.

ಮಾಜಿ ಅನರ್ಹರನ್ನು ಬಿಟ್ಟು, ಮತ್ಯಾರು ಸೇರಲಿದ್ದಾರೆ ಯಡಿಯೂರಪ್ಪ ಸಂಪುಟ?

ಇವರ ಜೊತೆಯಲ್ಲೇ ಬಿಜೆಪಿಯ ಹಿರಿಯ ನಾಯಕರು ಮತ್ತು ಶಾಸಕರಾದ ಬೆಳಗಾವಿಯ ಉಮೇಶ್ ಕತ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ, ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಮಂತ್ರಿಯಾಗಲಿದ್ದಾರೆ. ಜೊತೆಗೆ ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿ ಅವರಿಗೆ ಅವಕಾಶ ಸಿಕ್ಕರೂ ಅಚ್ಚರಿಯೇನಿಲ್ಲ ಎಂಬ ಸುದ್ದಿಯಿದೆ.

ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ

ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ

ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ. ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಈಗ 117ಕ್ಕೇರಿದೆ.

ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಸೋತವರ ಕಥೆ?

ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಸೋತವರ ಕಥೆ?

ಸೋತವರ ಕಥೆ ಏನು? ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ವಲಸೆ ಬಂದಿರುವ ಶಾಸಕರ ದಂಡು ಇತ್ತೀಚೆಗೆ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಆಗ್ರಹಿಸಿದೆ. ಈ ಮೊದಲಿನ ತೀರ್ಮಾನದಂತೆ ರಮೇಶ್ ಜಾರಕಿಹೊಳಿ ಮತ್ತು ವಿಶ್ವನಾಥ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಬಲವಾಗಿ ಕೇಳಿ ಬಂದಿದೆ. ಈ ನಡುವೆ ಆರ್ ಶಂಕರ್ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಆದರೆ, ಸದ್ಯಕ್ಕೆ ಎಂಎಲ್ಸಿ ಸ್ಥಾನವೂ ಖಾಲಿಯಿಲ್ಲ.

ಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿ

ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ

ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ

ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಬಹುಶಃ ಅತೃಪ್ತರಾಗಿ ಅನರ್ಹರಾಗಿ ಮುಂದೆ ಬಿಜೆಪಿ ಸೇರಿದ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ

ಯಾರಿಗೆ ಯಾವ ಖಾತೆ?

ಯಾರಿಗೆ ಯಾವ ಖಾತೆ?

ರಮೇಶ್ ಜಾರಕಿಹೊಳಿ: ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಖಾತೆ.

ಬೈರತಿ ಬಸವರಾಜ್: ಇಂಧನ

ಡಾ. ಸುಧಾಕರ್: ವೈದ್ಯಕೀಯ

ಶಿವಾರಾಂ ಹೆಬ್ಬಾರ್: ತೋಟಗಾರಿಕೆ, ಒಳನಾಡು ಹಾಗೂ ಬಂದರು.

ಆನಂದ್ ಸಿಂಗ್: ಗಣಿ ಮತ್ತು ಭೂ ವಿಜ್ಞಾನ.

ಎಸ್. ಟಿ ಸೋಮಶೇಖರ್: ಸಹಕಾರಿ ಇಲಾಖೆ

ಮಹೇಶ್ ಕುಮಟಳ್ಳಿ: ಯುವಜನ ಮತ್ತು ಕ್ರೀಡಾ ಇಲಾಖೆ

ನಾರಾಯಣಗೌಡ: ಪ್ರವಾಸೋದ್ಯಮ

ಬಿ. ಸಿ ಪಾಟೀಲ್: ಲೋಕೋಪಯೋಗಿ ಇಲಾಖೆ

ಆರ್ ಶಂಕರ್: ಅರಣ್ಯ

ಶ್ರೀಮಂತ ಪಾಟೀಲ್: ಸಕ್ಕರೆ, ರೇಷ್ಮೆ

English summary
Karnataka Chief Minister B S Yediyurappa all set for cabinet expansion after getting green signal from party high command. Here is probable list of who can get which portfolio
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more