ಉಪಚುನಾವಣೆ: 5 ಕ್ಷೇತ್ರಗಳ ಸಂಭಾವ್ಯ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು

Recommended Video

      5 ಕ್ಷೇತ್ರ, ಸ್ಪರ್ಧಿಗಳು ಯಾರು..? | Oneindia Kannada

      ರಾಮನಗರ ಮತ್ತು ಜಮಖಂಡಿ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ. ನವೆಂಬರ್ ಮೂರರಂದು ಚುನಾವಣೆ ನಡೆಯಲಿದೆ. ಇದರ ಜೊತೆಗೆ, ಅನಿರೀಕ್ಷಿತ ಎನ್ನುವಂತೆ, ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಕೂಡಾ ಅದೇ ದಿನ ನಿಗದಿಯಾಗಿದೆ.

      ಬಳ್ಳಾರಿಯಲ್ಲಿ ಶ್ರೀರಾಮುಲು, ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ವಿಧಾನಸಭೆಗೆ ಆಯ್ಕೆಯಾಗಿರುವುದರಿಂದ, ಈ ಮೂರು ಕ್ಷೇತ್ರಗಳ ಚುನಾವಣೆಯೂ ನ. 6ರಂದು ನಡೆಯಲಿದೆ. ಒಂದು ರೀತಿಯಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಮೂರೂ ಪಕ್ಷಗಳಿಗೆ ಈ ಚುನಾವಣೆ ಬೇಡವಾದ ಇಲೆಕ್ಷನ್.

      ಈ ಉಪಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮುಂದುವರಿಯಲಿದೆ. ರಾಮನಗರ (ಅಸೆಂಬ್ಲಿ) ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಜಮಖಂಡಿ (ಅಸೆಂಬ್ಲಿ), ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.

      ಇನ್ನು ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿರುವುದರಿಂದ, ಲೋಕಸಭಾ ಉಪಚುನಾವಣೆಯ ಮೇಲೆ ಮೂರು ಪಕ್ಷಗಳಿಗೆ ಉತ್ಸಾಹ ಇಲ್ಲದಿದ್ದರೂ, ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆಯಲ್ಲಿದೆ.

      ರಾಮನಗರ, ಜಮಖಂಡಿ ಕ್ಷೇತ್ರವನ್ನು ಹೊರತು ಪಡಿಸಿ, ಮಿಕ್ಕ ಮೂರು ಕಡೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎರಡರಿಂದ ಮೂರು ಹೆಸರು, ಸಂಭಾವ್ಯರ ಪಟ್ಟಿಯಲ್ಲಿ ಇರುವುದರಿಂದ, ಇನ್ನು ಎರಡ್ಮೂರು ದಿನಗಳಲ್ಲಿ ಪಟ್ಟಿ ಅಂತಿಮವಾಗಬಹುದು. ಐದು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

      ಎರಡು ಅಸೆಂಬ್ಲಿ, ಮೂರು ಲೋಕಸಭಾ ಕ್ಷೇತ್ರಗಳು

      ಎರಡು ಅಸೆಂಬ್ಲಿ, ಮೂರು ಲೋಕಸಭಾ ಕ್ಷೇತ್ರಗಳು

      ಉಪಚುನಾವಣೆ - ಅಸೆಂಬ್ಲಿ
      ರಾಮನಗರ
      ಜಮಖಂಡಿ

      ಉಪಚುನಾವಣೆ - ಲೋಕಸಭೆ
      ಶಿವಮೊಗ್ಗ
      ಬಳ್ಳಾರಿ
      ಮಂಡ್ಯ

      ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 16
      ಚುನಾವಣಾ ದಿನಾಂಕ : ನವೆಂಬರ್ 3
      ಮತಎಣಿಕೆ : ನವೆಂಬರ್ 6

      ಮಂಡ್ಯ ಲೋಕಸಭಾ ಉಪಚುನಾವಣೆ

      ಮಂಡ್ಯ ಲೋಕಸಭಾ ಉಪಚುನಾವಣೆ

      ಮಂಡ್ಯ
      ಜೆಡಿಎಸ್: ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಲಕ್ಷ್ಮೀ ಅಶ್ವಿನ್ ಗೌಡ
      ಬಿಜೆಪಿ: ಚಂದಗಾಲು ಶಿವಣ್ಣ, ಚೆಲುವರಾಯಸ್ವಾಮಿ, ಆರ್ ಅಶೋಕ್, ಎಸ್ ಎಂ ಕೃಷ್ಣ ಪುತ್ರಿ ಶಾಂಭವಿ, ನಂಜುಂಡೇ ಗೌಡ

      ರಾಮನಗರ, ಜಮಖಂಡಿ ಅಸೆಂಬ್ಲಿ ಉಪಚುನಾವಣೆ

      ರಾಮನಗರ, ಜಮಖಂಡಿ ಅಸೆಂಬ್ಲಿ ಉಪಚುನಾವಣೆ

      ರಾಮನಗರ
      ಜೆಡಿಎಸ್: ಅನಿತಾ ಕುಮಾರಸ್ವಾಮಿ
      ಬಿಜೆಪಿ: ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್, ರುದ್ರೇಶ್

      ಜಮಖಂಡಿ
      ಬಿಜೆಪಿ: ಶ್ರೀಕಾಂತ್ ಕುಲಕರ್ಣಿ, ಸಂಗಮೇಶ್ ನಿರಾಣಿ
      ಕಾಂಗ್ರೆಸ್: ಆನಂದ್ ನ್ಯಾಮೇಗೌಡ

      ಬಳ್ಳಾರಿ ಲೋಕಸಭಾ ಕ್ಷೇತ್ರ

      ಬಳ್ಳಾರಿ ಲೋಕಸಭಾ ಕ್ಷೇತ್ರ

      ಬಳ್ಳಾರಿ
      ಕಾಂಗ್ರೆಸ್ : ಎಂ ರಾಮ್ ಪ್ರಸಾದ್
      ಬಿಜೆಪಿ: ಜೆ ಶಾಂತಾ, ಸಣ್ಣ ಫಕೀರಪ್ಪ, ಟಿ ಸುರೇಶ್ ಬಾಬು, ಡಿ ರಾಘವೇಂದ್ರ

      ಶಿವಮೊಗ್ಗ ಲೋಕಸಭಾ ಕ್ಷೇತ್ರ

      ಶಿವಮೊಗ್ಗ ಲೋಕಸಭಾ ಕ್ಷೇತ್ರ

      ಶಿವಮೊಗ್ಗ
      ಬಿಜೆಪಿ: ಬಿ ವೈ ರಾಘವೇಂದ್ರ
      ಕಾಂಗ್ರೆಸ್: ಕಿಮ್ಮನೆ ರತ್ನಾಕರ, ಮಂಜುನಾಥ ಬಂಡಾರಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+