ದೀಪಾವಳಿಗೂ ಮುನ್ನವೇ ಉಪಚುನಾವಣೆ: 15 ಕ್ಷೇತ್ರಗಳ ಪಟ್ಟಿ ಹೀಗಿದೆ...
ಬೆಂಗಳೂರು, ಸೆಪ್ಟೆಂಬರ್ 21: ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ 17 ವಿಧಾನಸಭೆ ಕ್ಷೇತ್ರದಲ್ಲಿ 15 ಕ್ಷೇತ್ರಕ್ಕೆ ಚುನಾವಣೆ ದಿನಾಂಕ ಪ್ರಕಟವಾಗಿದೆ.
ಕೇಂದ್ರ ಚುನಾವಣೆ ಆಯೋಗವು ಇಂದು ಚುನಾವಣಾ ದಿನಾಂಕ ಪ್ರಕಟ ಮಾಡಿದ್ದು, ಎರಡು ಕ್ಷೇತ್ರಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಚುನಾವಣಾ ದಿನಾಂಕ ಪ್ರಕಟವಾಗಿಲ್ಲ.
ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ 24 ಕ್ಕೆ ಪ್ರಕಟವಾಗಲಿದೆ. ಸೆಪ್ಟೆಂಬರ್ 23 ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆ ಕೊನೆಯ ದಿನ ಆಗಿದೆ.

ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿಲ್ಲ. ನ್ಯಾಯಾಲಯದ ತಡೆಆಜ್ಞೆ ಇರುವ ಕಾರಣ ಈ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿಲ್ಲ.
ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪಟ್ಟಿ
1) ಚಿಕ್ಕಬಳ್ಳಾಪುರ
2) ಮಹಾಲಕ್ಷ್ಮಿ ಲೇಔಟ್
3) ಹೊಸಕೋಟೆ
4) ಹುಣಸೂರು
5) ಗೋಕಾಕ
6) ಯಶವಂತಪುರ
7) ಅಥಣಿ
8) ಕಾಗವಾಡ
9) ಶಿವಾಜಿನಗರ
10) ಕೆ.ಆರ್.ಪೇಟೆ
11) ಕೆ.ಆರ್.ಪುರಂ
12) ಹಿರೇಕೆರೂರು
13) ರಾಣೆಬೆನ್ನೂರು
14) ವಿಜಯನಗರ
15) ಯಲ್ಲಾಪುರ












Click it and Unblock the Notifications