Get Updates
Get notified of breaking news, exclusive insights, and must-see stories!

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ಅಕ್ಟೋಬರ್ 20: ದಶಕಗಳ ಬಳಿಕ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಜಂಟಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಈ ಜಂಟಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಆದರೆ ಬಹು ವರ್ಷಗಳ ಬಳಿಕ ಇಬ್ಬರೂ ಮಾಧ್ಯಮದ ಎದುರಿಗೆ ಬರುತ್ತಿರುವುದು ಕುತೂಹಲ ಮೂಡಿಸಿದೆ.

ಈ ಮುಂಚೆ ಒಂದೇ ಪಥದಲ್ಲಿದ್ದ ಆ ನಂತರ ವಿರುದ್ಧ ದಿಕ್ಕಿಗೆ ಸಾಗುತ್ತಿದ್ದ 'ಗುರು-ಶಿಷ್ಯ' ರೆಂದೇ ಕರೆಸಿಕೊಳ್ಳುವ ದೇವೇಗೌಡ-ಸಿದ್ದರಾಮಯ್ಯ ಅವರು ಮತ್ತೆ ಮುನ್ನೆಲೆ ರಾಜಕೀಯದಲ್ಲಿ ಒಂದಾಗುತ್ತಿರುವುದು ರಾಜಕೀಯವಾಗಿಯೂ ಬಹು ಮಹತ್ವ ಪಡೆದುಕೊಂಡಿದೆ.

by election 2018: Deve Gowda Siddaramaiah doing joint press meet

ಇಂದು 12 ಗಂಟೆಗೆ ಸುದ್ದಿಗೋಷ್ಠಿ ಪ್ರಾರಂಭವಾಗಲಿದ್ದು, ಉಪಚುನಾವಣೆ, ಮುಂಬರುವ ಲೋಕಸಭೆ ಚುನಾವಣೆ, ಜೆಡಿಎಸ್-ಕಾಂಗ್ರೆಸ್‌ ಮೈತ್ರಿಯಲ್ಲಿನ ಒಳಮುನಿಸು ಎಲ್ಲ ವಿಷಯಗಳ ಬಗ್ಗೆ ಅವರು ಮಾತನಾಡಲಿದ್ದಾರೆ.

Oct 20, 2018, 12:31 pm IST

ತೋಂಟದಾರ್ಯ ಶ್ರೀಗಳು ನಿಧನಕ್ಕೆ ಸುದ್ದಿಗೋಷ್ಠಿಯಲ್ಲಿದ್ದ ನಾಯಕರು ಸಂತಾಪ, ಎರಡು ನಿಮಿಷಗಳ ಮೌಚಾರಣೆ.
Oct 20, 2018, 12:15 pm IST

ಸಿದ್ದರಾಮಯ್ಯ - ದೇವೇಗೌಡ ಅವರ ಹಳೆಯ ಸ್ನೇಹ, ಬಾಂದವ್ಯ ಈಗಲೂ ಹಾಗೇ ಇದೆ ದೇಹ ಬೇರೆ ಇದ್ದರೂ ಮನಸ್ಸು ಒಂದೆ - ಕುಮಾರಸ್ವಾಮಿ
Oct 20, 2018, 12:13 pm IST

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕಾಯ, ವಾಚ, ಮನಸಾ ಒಟ್ಟಾಗಿ ಕೆಸಲ ಮಾಡುತ್ತಿದ್ದೇವೆ - ಸಿದ್ದರಾಮಯ್ಯ
Oct 20, 2018, 12:13 pm IST

ಎರಡೂ ಪಕ್ಷಕ್ಕೆ ರಾಜಕೀಯವಾಗಿ, ಸೈದ್ಧಾಂತಿಕವಾಗಿ ಬಿಜೆಪಿ ನಮ್ಮ ಸಾಮಾನ್ಯ ಎದುರಾಳಿ, ಅವರನ್ನು ಸೋಲಿಸುವುದು ನಮ್ಮ ಜವಾಬ್ದಾರಿ, ಆ ಕಾರ್ಯವನ್ನು ನಾವು ಮಾಡುತ್ತೇವೆ- ಸಿದ್ದರಾಮಯ್ಯ
Oct 20, 2018, 12:12 pm IST

30ನೇ ತಾರೀಖು ಶಿವಮೊಗ್ಗದ ಜಂಟಿ ಸಮಾವೇಶ ಮಾಡುತ್ತಿದ್ದಾರೆ ನಾನು ಸಭೆಗೆ ಹೋಗುತ್ತೇನೆ, ನಾವು ಜಂಟಿ ಸಮಾವೇಶ ಮಾಡುತ್ತೇವೆ- ಸಿದ್ದರಾಮಯ್ಯ
Oct 20, 2018, 12:11 pm IST

ಬಳ್ಳಾರಿ, ಶಿವಮೊಗ್ಗ, ಮಂಡ್ಯ, ಜಮಖಂಡಿಗೂ ಪ್ರಚಾರಕ್ಕೆ ಹೋಗುತ್ತೇನೆ ರಾಮನಗರದಲ್ಲಿ ಅಗತ್ಯ ಬಿದ್ದರೆ ಹೋಗುತ್ತೇನೆ, ಅಗತ್ಯ ಇದ್ದರೆ ಜಂಟಿ ಪ್ರಚಾರ ಸಹ ಮಾಡ್ತೇವೆ- ಸಿದ್ದರಾಮಯ್ಯ
Oct 20, 2018, 12:10 pm IST

ಕಾಂಗ್ರೆಸ್ ಕಾರ್ಯಕರತರು, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು, ಎರಡೂ ಪಕ್ಷಗಳು ವಿರೋಧಿಗಳಾಗಿದ್ದೆವು ನಿಜ, ಆದರೆ ಅನಿವಾರ್ಯತೆ ಇದ್ದು, ಒಟ್ಟಾಗಿ ಕೆಲಸ ಮಾಡಲೇಬೇಕಿದೆ- ಸಿದ್ದರಾಮಯ್ಯ
Oct 20, 2018, 12:09 pm IST

ಜಾತ್ಯಾತೀತ ಮತಗಳು ವಿಭಜನೆ ಆಗುತ್ತಿರುವ ಕಾರಣ ಬಿಜೆಪಿ ಗೆಲ್ಲುತ್ತಿದೆ, ಆದರೆ ಈ ಬಾರಿ ಜಾತ್ಯಾತೀತರನ್ನು ಒಂದು ಮಾಡುವ ಪ್ರಯತ್ನ ಕರ್ನಾಟಕದಿಂದ ಪ್ರಾರಂಭವಾಗುತ್ತಿದೆ- ಸಿದ್ದರಾಮಯ್ಯ
Oct 20, 2018, 12:09 pm IST

ದೇಶದ ರಾಜಕಾರಣದ ಬಗ್ಗೆ ದೇವೇಗೌಡರಿಗೆ ಅರಿವಿದೆ, ಅವರು ಮುಂಚೂಣಿಯಲ್ಲಿ ನಿಂತು ಜಾತ್ಯಾತೀತ ಶಕ್ತಿಗಳು ಒಟ್ಟು ಮಾಡುವ ಕಾರ್ಯ ಮಾಡುತ್ತಾರೆ- ಸಿದ್ದರಾಮಯ್ಯ
Oct 20, 2018, 12:07 pm IST

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜನರ ಬದುಕು ದುಸ್ತರವಾಗಿದೆ, ರೈತರ ಕಷ್ಟವನ್ನು ಮೋದಿ ಆಲಿಸಿಲ್ಲ- ಸಿದ್ದರಾಮಯ್ಯ
Oct 20, 2018, 12:06 pm IST

ಲೋಕಸಭೆ ಚುನಾವಣೆಗೆ ಇದು ಅಡಿಪಾಯ, ರಾಜ್ಯದ 28 ಕ್ಷೇತ್ರಗಳನ್ನೂ ಗೆದ್ದೇ ಗೆಲ್ಲುತ್ತೇವೆ- ಸಿದ್ದರಾಮಯ್ಯ
Oct 20, 2018, 12:06 pm IST

ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವ ಕಾರಣ ಐದೂ ಕ್ಷೇತ್ರಗಳ ಉಪಚುನಾವಣೆಯಲ್ಲಿ 100% ಗೆದ್ದೇ ಗೆಲ್ಲುತ್ತೇವೆ - ಸಿದ್ದರಾಮಯ್ಯ
Oct 20, 2018, 12:05 pm IST

ಬಿಜೆಪಿ ಅಧಿಕಾರಕ್ಕೆ ಬಂದರೆ ಜನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಕೋಮುವಾದ ಹೆಚ್ಚಾಗುತ್ತದೆ - ಸಿದ್ದರಾಮಯ್ಯ
Oct 20, 2018, 12:05 pm IST

ಅಧಿಕಾರ ಹಿಡಿಯಲು ಈ ಹಿಂದೆ ಅವರು ಬಹಳ ಕೆಟ್ಟ ರೀತಿಯಲ್ಲಿ ಪ್ರಯತ್ನ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ ಆದರೆ ಅವರ ಯತ್ನ ಫಲಿಸದು- ಸಿದ್ದರಾಮಯ್ಯ
Oct 20, 2018, 12:04 pm IST

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಮತ ಹೆಚ್ಚು ಬಂದಿತ್ತು, ಜೆಡಿಎಸ್‌ಗೂ ಸಹ 20% ಫಲಿತಾಂಶ ಬಂದಿತ್ತು- ಸಿದ್ದರಾಮಯ್ಯ
Oct 20, 2018, 12:03 pm IST

ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು, ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಟ್ಟುಗೂಡಬೇಕು ಎಂದು ನಾವು ಒಂದುಗೂಡಿದ್ದೇವೆ- ಸಿದ್ದರಾಮಯ್ಯ
Oct 20, 2018, 12:02 pm IST

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದ್ದೇವೆ, ಹಂಚಿಕೆ ಆಧಾರದಲ್ಲಿ ಈ ಉಪಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತಿದ್ದೇವೆ-ಸಿದ್ದರಾಮಯ್ಯ
Oct 20, 2018, 12:01 pm IST

ಸ್ವಲ್ಪ ಮುನಿಸುಗಳು ಇವೆ, ಅದನ್ನೆಲ್ಲಾ ಸರಿಪಡಿಸುವ ಹೊಣೆ ಹೊರುತ್ತೇವೆ, ನಮ್ಮ ಜಂಟಿ ಪ್ರಚಾರ ರಾಜ್ಯದ ರಾಜಕೀಯ ಇತಿಹಾಸವನ್ನು ಬದಲಾಯಿಸಲಿದೆ- ದೇವೇಗೌಡ
Oct 20, 2018, 12:00 pm IST

ನಾವು ಮಾಡಿರುವ ತಪ್ಪುಗಳನ್ನು ಕ್ಷಮಿಸಿ, ಉಪಚುನಾವಣೆಯಲ್ಲಿ ನಮ್ಮ ಕೈ ಬಲಪಡಿಸಿ ಎಂದು ಕೈ ಮುಗಿದು ಕೋರಿಕೊಳ್ಳುತ್ತೇನೆ- ದೇವೇಗೌಡ
Oct 20, 2018, 11:59 am IST

ವೈಯಕ್ತಿಕ ಲಾಭಕ್ಕಾಗಿ ಅಲ್ಲ, ದೇಶದ ಹಿತದೃಷ್ಠಿಯಿಂದ ಈ ಕಾರ್ಯಕೈಗೊಂಡಿದ್ದೇವೆ, ಕೈ ಮುಗಿದು ಕೇಳಿಕೊಳ್ಳುತ್ತೇವೆ, ಎರಡೂ ಪಕ್ಷದ ಕಾರ್ಯಕರ್ತರು ಕೈ ಜೋಡಿಸಿಕೊಳ್ಳಿ-ದೇವೇಗೌಡ
Oct 20, 2018, 11:59 am IST

ಹಳೆಯ ನೆನಪುಗಳನ್ನು ಮರೆತು ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಎಂದು ಹೊರಟಿದ್ದೇವೆ-ದೇವೇಗೌಡ
Oct 20, 2018, 11:59 am IST

ಸುದ್ದಿಗೋಷ್ಠಿ ಆರಂಭ, ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆ ಶಿವಕುಮಾರ್‌, ದಿನೇಶ್ ಗುಂಡೂರಾವ್, ಜಿ.ಪರಮೇಶ್ವರ್‌ ಭಾಗಿ ಭಾಗಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+