ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರː ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ

|
Google Oneindia Kannada News

ಬೆಂಗಳೂರು, ನ.8: ರಾಜ್ಯ ಸರ್ಕಾರ ಕೂಡಲೇ ಸಾರ್ವಜಕನಿಕರಿಗೆ ಹೊರೆಯಾಗಿರುವ ಬಸ್ ದರ ಕಡಿಮೆಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವೊಂದನ್ನು ಬರೆದಿದ್ದಾರೆ.

ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದ್ದರೂ ರಾಜ್ಯ ಸರ್ಕಾರ ಜನರ ಮೇಲಿನ ಹೊರೆ ಕಡಿಮೆ ಮಾಡಲು ಮುಂದಾಗಿಲ್ಲ. ಪ್ರತಿ ಬಾರಿ ಡಿಸೇಲ್ ದರ ಏರಿದಾಗಲೂ ಅದನ್ನೇ ನೆಪವಾಗಿಟ್ಟುಕೊಂಡು ಸಾರ್ವಜನಿಕ ಸಾರಿಗೆ ದರ ಹೆಚ್ಚಳ ಮಾಡಲಾಗಿದೆ. ಈಗ ಡಿಸೇಲ್ ಶೇ. 20 ರಷ್ಟು ಕಡಿಮೆಯಾಗಿದ್ದರೂ ಯಾಕೆ ಬೆಲೆ ಇಳಿಸುತ್ತಿಲ್ಲ? ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.[ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]

hdk

ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಯಲ್ಲಿ ಸಾಮಾನ್ಯ ಜನ ಸಂಚರಿಸದಂಥ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಉತ್ತಮ ಸೇವೆಗೆ ಹೆಸರಾಗಿದ್ದ ಸಂಸ್ಥೆ ಇಂದು ನಷ್ಟದ ಹಳಿಯಲ್ಲಿ ಯಾಕೆ ಸಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ, ಅಷ್ಟೇ ಏಕೆ ಏಷ್ಯಾದಲ್ಲೇ ಕರ್ನಾಟಕದ ಸಾರ್ವಜನಿಕ ಸಾರಿಗೆ ದುಬಾರಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯನ್ನು ವ್ಯವಸ್ಥಿತವಾಗಿ ನಡೆಸಲು ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ದೂರಿದ್ದಾರೆ.[ಶಂಕರ ಬಿದರಿ ಮಾತಿಗೆ ಕುಮಾರಣ್ಣ ಸಾಥ್]

ಇನ್ನಾದರೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಜನರ ಹಿತ ಕಾಪಾಡುವಂಥ ಮನಸ್ಸು ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

English summary
JD(S) leader and Former Chief Minister H.D.Kumaraswamy wrote a letter to CM Siddaramaiah regarding to reduce KSRTC and BMTC bus in fares. State Government forgot peoples wealth he claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X