ಕರ್ನಾಟಕದಲ್ಲಿ ಅಖಾಡಕ್ಕಿಳಿದ ಬಿಸ್ಪಿಯ 21 ಅಭ್ಯರ್ಥಿಗಳು
ಬೆಂಗಳೂರು, ಮಾ. 22 : ಕರ್ನಾಟಕದ ಲೋಕಸಭೆ ಚುನಾವಣಾ ಕಣಕ್ಕೆ ಮಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಧುಮಿಕಿದೆ. ಪಕ್ಷದ ರಾಜ್ಯದಲ್ಲಿ ಸ್ಪರ್ಧಿಸುವ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಎರಡು ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣಾ ಪ್ರಚಾರ ಮಾಡಲು ನಿರ್ಧರಿಸಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉತ್ತರ ಪ್ರದೇಶದ ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಉಸ್ತುವಾರಿ ಡಾ.ಅಶೋಕ ಸಿದ್ದಾರ್ಥ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬಿಸ್ಪಿ ಪಕ್ಷ ರಾಜ್ಯದಲ್ಲಿ ಯಾವುದೇ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ. ಎರಡು ಕಡೆ ಸಮಾವೇಶ ಆಯೋಜಿಸಿ ಚುನಾವಣಾ ಪ್ರಚಾರ ಮಾಡಲಾಗುತ್ತದೆ. ಬಿಎಸ್ಪಿ ಅಧಿನಾಯಕಿ ಮಾಯಾವತಿ ಸಮಾವೇಶದಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿಗಳ ಪಟ್ಟಿ
ಚಿಕ್ಕೋಡಿ - ಮಚ್ಚೇಂದ್ರ ಕಾಡಪೂರ
ಬೆಳಗಾವಿ - ರಮೇಶ್ ಕಡ್ಲಾಸ್ಕರ್
ಬಾಗಲಕೋಟೆ - ವೈ.ಸಿ.ಕಾಂಬಳೆ
ಬಿಜಾಪುರ - ಸುಧಾಕರ್ ಕನಮಡಿ
ಗುಲ್ಬರ್ಗ - ಮಹದೇವ ಬಿ. ಧನ್ನಿ
ಬೀದರ್ - ಶಂಕರ್ ಭಯ್ನಾ
ಕೊಪ್ಪಳ - ಸೈಯದ್ ಜಿಯಾಉದ್ದೀನ್ ಆರೀಫ್
ಬಳ್ಳಾರಿ - ಬಿ.ರಾಮುಡು (ಅಬ್ಬಗೇರಿ ರಾಮಣ್ಣ)
ಹಾವೇರಿ - ಬಿ.ಗಣೇಶ್
ಶಿವಮೊಗ್ಗ - ಮಂಜುನಾಥ್ ಗೌಡ
ಉತ್ತರ ಕನ್ನಡ - ಸಂತೋಷ್ ನಾಯಕ
ಉಡುಪಿ-ಚಿಕ್ಕಮಗಳೂರು - ಜಾಕೀರ್ ಹುಸೇನ್
ಹಾಸನ - ಎ.ಪಿ.ಅಹಮದ್
ದಕ್ಷಿಣ ಕನ್ನಡ - ಮಹಮದ್ ಕರೀಂ
ಚಿತ್ರದುರ್ಗ - ಟಿ.ಡಿ.ರಾಜಗಿರಿ
ಮಂಡ್ಯ- ಡಾ.ಎಂ.ಕೃಷ್ಣಮೂರ್ತಿ
ಮೈಸೂರು - ಮೋಹನ್ ಕುಮಾರ್
ಬೆಂಗಳೂರು ಉತ್ತರ - ವಿ.ವೇಲು
ಬೆಂಗಳೂರು ಕೇಂದ್ರ - ಆರ್.ಮೋಹನ್‌ರಾಜ್
ಚಿಕ್ಕಬಳ್ಳಾಪುರ - ಚಿತ್ರ ಪ್ರಸಾದ್
ಕೋಲಾರ - ಆರ್.ರವೀಂದ್ರ ಕುಮಾರ್












Click it and Unblock the Notifications