• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆ

|
   ರಾಹುಲ್ ಗಾಂಧಿ ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಭೇಟಿ | ಬಿ ಎಸ್ ವೈ ಗರಂ | Oneindia Kannada

   "ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯುವ ಇಲೆಕ್ಷನ್ ಹಿಂದು..." ಎನ್ನುವ ಮೂಲಕ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದಿದ್ದಾರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ.

   ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಜವಾರಿ ಕೋಳಿ ಬಿರಿಯಾನಿ ಸೇವಿಸಿ, ನಂತರ ದೇವರ ದರ್ಶನಕ್ಕೆ ತೆರಳಿದ್ದನ್ನು ಖಂಡಿಸಿರುವ ಯಡಿಯೂರಪ್ಪ ಪ್ರತಿ ಬಾರಿ ಹಿಂದುಗಳ ಭಾವನೆಗಳಿಗೆ ಕಾಂಗ್ರೆಸ್ ಏಕೆ ಧಕ್ಕೆ ತರುತ್ತಿದೆ ಎಂದು ಪ್ರಶ್ನಿಸಿದ್ದಾರೆ.

   ಮಿರ್ಚಿ ಬಜ್ಜಿ, ಗಿರ್ಮಿಟ್ ಚಪ್ಪರಿಸಿ ತಿಂದ ರಾಹುಲ್ ಗಾಂಧಿ

   ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯನವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡ ಯಡಿಯೂರಪ್ಪ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ಇಲೆಕ್ಷನ್ ಹಿಂದು ಎಂದು ರಾಹುಲ್ ಗಾಂಧಿಯವರನ್ನೂ ಕುಟುಕುವುದಕ್ಕೆ ಮರೆಯಲಿಲ್ಲ. ಸಾಲು ಸಾಲು ಟ್ವೀಟ್ ಗಳ ಮೂಲಕ ಕಾಂಗ್ರೆಸ್ ನ ಹಲವು ನಡೆಗಳನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಟೀಕಿಸಿದ್ದಾರೆ.

   ಸಮಾಜವಾದವಲ್ಲ, ಮಜಾವಾದ!

   10 ಪರ್ಸೆಂಟ್ ಸಿಎಂ ಎಂದು ಸಿದ್ದರಾಮಯ್ಯ ಅವರ ಕಾಲೆಳೆಯುತ್ತಿರುವ ಬಿಎಸ್ ವೈ, ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಭೇಟಿ ಮಾಡುವ ಮೊದಲು ಮಾಂಸ ಸೇವಿಸಿದ ಸಿದ್ದರಾಮಯ್ಯ ಅವರನ್ನು ನೆನೆಪಿಸಿಕೊಂಡರು. ಅಂದು ಸಿದ್ದರಾಮಯ್ಯ ಮಾಡಿದ್ದನ್ನೇ ಇಂದು ಇಲೆಕ್ಷನ್ ಹಿಂದು ರಾಹುಲ್ ಗಾಂಧಿ ಮಾಡಿದ್ದಾರೆ. ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆದಿದ್ದಾರೆ. ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದವಾದರೆ, ಕಾಂಗ್ರೆಸ್ ನದ್ದು ಸಮಾಜವಾದವಲ್ಲ, ಮಜಾವಾದ ಎಂದು ಅಣಕಿಸಿದ್ದಾರೆ.

   ತ್ರಿವಳಿ ತಲಾಖ್ ವಿರೋಧಿಸಿದ್ದೇಕೆ?

   ಮುಸ್ಲಿಂ ಓಲೈಕೆಗಾಗಿ ದರ್ಗಾಕ್ಕೆ ಭೇಟಿ ನೀದುವ ನೀವು, ಕೇಮದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ, ತ್ರಿವಳಿ ತಲಾಖ್ ಜಾರಿಯನ್ನು ವಿರೋಧಿಸುತ್ತಿರುವುದೇಕೆ? ಮುಸ್ಲಿಂ ಮಹಿಳೆಯರ ನೆಮ್ಮದಿ ಕಸಿಯುವುದೇ ನಿಮ್ಮ ಹುನ್ನಾರವೇ ಎಂದು ಪ್ರಶ್ನಿಸಿದ್ದಾರೆ.

   ಯಡಿಯೂರಪ್ಪ ನಾಟಕ, ಶೋಭಾ ಕರಂದ್ಲಾಜೆ ನಾಟಕ ಎಂದ ಸಿದ್ದರಾಮಯ್ಯ

   ಟ್ವಿಟ್ಟರ್ ನಲ್ಲಿ ಮಹದಾಯಿ ಸದ್ದು!

   "ಪ್ರೀತಿಯ ಇಲೆಕ್ಷನ್ ಹಿಂದೂ... ಮಹಾದಾಯಿ ಯೋಜನೆಯ ಮೂಲಕ ರೈತರಿಗೆ ನೀರು ನೀಡಲು ಗೋವಾ ಸರ್ಕಾರ ಸಿದ್ಧವಿತ್ತು. ಆದರೆ ಅದನ್ನು ವಿರೋಧಿಸಿದವರು ಗೋವಾದ ನಿಮ್ಮದೇ ಕಾಂಗ್ರೆಸ್ ಶಾಸಕರು. ನೀವು ಗೋವಾದ ಕಾಂಗ್ರೆಸ್ ಶಾಸಕರನ್ನು ಒಪ್ಪಿಸಿ ಕರ್ನಾಟಕದ ಜನರಿಗೆ ನೆರವಾಗಿ ನೋಡೋಣ" ಎಂದು ಸವಾಲೆಸೆದಿದ್ದಾರೆ ಬಿಎಸ್ ವೈ!

   ಮಹಾದಾಯಿಯ ಹನಿನೀರನ್ನೂ ಬಿಡಲ್ಲ ಎಂದಿದ್ದ ಸೋನಿಯಾ!

   2007ರ ಗೋವಾ ಚುನಾವಣಾ ಸಂಧರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು, ಕರ್ನಾಟಕದ ಜನರಿಗೆ ಮಹದಾಯಿಯ ಒಂದು ಹನಿ ನೀರನ್ನೂ ಬಿಡಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದರು. ಈಗ ನೀವು ರೈತರ ಪರ ಎಂದರೆ ನಾಡಿನ ಜನ ನಿಮ್ಮನ್ನು ಹೇಗೆ ನಂಬುತ್ತಾರೆ? ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ ಯಡಿಯೂರಪ್ಪ.

   ಸಿಎಂ ಎಂಥ ರಾಜಕಾರಣ ಮಾಡುತ್ತಾರೆ!

   ಮಹದಾಯಿ ವಿಚಾರದಲ್ಲಿ ನಾವು ರೈತರಿಗಾಗಿ ನಮ್ಮ ಪಕ್ಷದವರನ್ನು ಒಪ್ಪಿಸಲು ಯತ್ನಿಸಿದರೆ ಸಿಎಂ ಎಂಥ ರಾಜಕಾರಣ ಮಾಡುತ್ತಾರೆ! ಕರ್ನಾಟಕ ಕಾಂಗ್ರೆಸ್ಸಿಗೂ, ಗೋವಾ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿಮಗೂ, ಕರ್ನಾಟಕಕ್ಕೂ ಸಂಬಂಧ ಇದೆ ಎಂದಾದರೆ ಸಿದ್ದರಾಮಯ್ಯನವರ ಹೇಳಿಕೆ ಖಂಡಿಸುವಿರಾ ರಾಹುಲ್ ಗಾಂಧಿಯವರೇ ಎಂದೂ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನೆ ಎಸೆದಿದ್ದಾರೆ.

   ಇದು ಶೋಭೆಯೇ?

   "ರೈತ ಸಂವಾದದಲ್ಲಿ ಇದು ನನ್ನ ಊರಲ್ಲ ಅಥವಾ ನಾನು ಈ ಊರಿಗೆ ಸೇರಿದವನಲ್ಲ ಎಂದಿದ್ದೀರಿ. ಈ ಮಾತು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಶೋಭೆಯೇ? ನೀವೇ ಅಸಹಾಯಕರಾಗಿರುವಾಗ ಕಾಂಗ್ರೆಸ್ ನಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ? ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸುತ್ತಿರುವದಕ್ಕೆ ಧನ್ಯವಾದಗಳು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಬಿ.ಎಸ್.ಯಡಿಯೂರಪ್ಪ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP Karnataka state president BS Yeddyurappa blames Congress president Rahul Gandhi, and Karnataka chief minister Siddaramaiah on twitter, for their disrespect towards hindu religion

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more