ಯಡಿಯೂರಪ್ಪ ಅವರು 21ನೇ ಶತಮಾನದ ಬಸವಣ್ಣː ಶ್ರೀರಾಮುಲು
Recommended Video

B S Yeddyurappa is 21st century Basavanna, says B. Sriramulu
ಬೀದರ್, ಸೆ. 19: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು 21ನೇ ಶತಮಾನದ ಬಸವಣ್ಣ ಎಂದು ಮಾಜಿ ಸಚಿವ, ಬಳ್ಳಾರಿ ಸಂಸದ ಶ್ರೀರಾಮುಲು ಹೊಗಳಿದ್ದಾರೆ. ಇಲ್ಲಿನ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಯಡಿಯೂರಪ್ಪ ಅವರನ್ನು ಶ್ರೀರಾಮುಲು ಹಾಡಿ ಹೊಗಳಿದರು.
'12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಡಾ.ಅಂಬೇಡ್ಕರ್ ಅವರು ಮಾಡಿದ ಕೆಲಸ ಕಾರ್ಯಗಳನ್ನು ಇಂದು ಯಡಿಯೂರಪ್ಪ ಮಾಡುತ್ತಿದ್ದಾರೆ. ಇವರ ಚಿಂತನೆಗಳ ಕಾರಣಕ್ಕೆ 21ನೇ ಶತಮಾನದ ಬಸವಣ್ಣ ಎನಿಸಿದ್ದಾರೆ ಎಂದು ಬಣ್ಣಿಸಿದರು.

ಸಹಕಾರಿ ಧುರೀಣ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ಅವರು ಸೋಮವಾರದಂದು ಅಧಿಕೃತವಾಗಿ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಸಂಸದ ಬಿ ಶ್ರೀರಾಮುಲು ಮುಂತಾದವರು ಉಪಸ್ಥಿತರಿದ್ದ ಸಮಾರಂಭದಲ್ಲಿ ಪಕ್ಷದ ಧ್ವಜ ನೀಡಿ ಸೂರ್ಯಕಾಂತ ಅವರನ್ನು ಸ್ವಾಗತಿಸಲಾಯಿತು.












Click it and Unblock the Notifications