ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನಿಂದ ಬರ ಪ್ರವಾಸ ಆರಂಭಿಸಿದ ಯಡಿಯೂರಪ್ಪ

|
Google Oneindia Kannada News

ಬೀದರ್, ಏಪ್ರಿಲ್ 27 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬರ ಪೀಡಿತ ಜಿಲ್ಲೆಗಳ ಪ್ರವಾಸ ಆರಂಭಿಸಿದರು. ಇಂದಿನಿಂದ 5 ದಿನಗಳ ಕಾಲ ಯಡಿಯೂರಪ್ಪ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಬುಧವಾರ ಬೀದರ್‌ನಲ್ಲಿ ಪ್ರವಾಸ ಆರಂಭಿಸಿದ ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ರಾಜ್ಯದಲ್ಲಿರುವ ಸರ್ಕಾರ ಜನರ ಪಾಲಿಗೆ ಇದ್ದು ಸತ್ತುಹೋದಂತಾಗಿದೆ. ಬರದಿಂದ ತತ್ತರಿಸಿರುವ ಜನರ ಬಗ್ಗೆ ಕಾಳಜಿ ಇಲ್ಲ ಮುಖ್ಯಮಂತ್ರಿ ಯಾರಿಗೆ ಬೇಕು?' ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದರು. [ಜೂನ್ 15ರ ತನಕ ಬರ ಪರಿಹಾರ ಕಾಮಗಾರಿ ನಡೆಸಿ]

yeddyurappa

ಬಿಎಸ್‌ವೈ ಪ್ರವಾಸ ವೇಳಾಪಟ್ಟಿ : ಬಿ.ಎಸ್.ಯಡಿಯೂರಪ್ಪ ಅವರು ಏಪ್ರಿಲ್ 27ರಂದು ಬೀದರ್, ಔರಾದ್ ಮತ್ತು ಬಾಲ್ಕಿಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಏ.28ರಂದು ಕಲಬುರಗಿ ಅಳಂದ, ಏಪ್ರಿಲ್ 29ರಂದು ಯಾದಗಿರಿ, ಏಪ್ರಿಲ್ 30ರಂದು ರಾಯಚೂರು, ಲಿಂಗಸಗೂರು, ದೇವದುರ್ಗ, ಮೇ 1 ರಂದು ವಿಜಯಪುರದಲ್ಲಿ ಪ್ರವಾಸ ನಡೆಸಲಿದ್ದಾರೆ. [ಸಚಿವರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]

ಪ್ರವಾಸದ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶದಲ್ಲಿ ಸರ್ಕಾರ ಕೈಗೊಂಡಿರುವ ಬರ ಪರಿಹಾರ ಕಾರ್ಯಗಳ ಬಗ್ಗೆ ಯಡಿಯೂರಪ್ಪ ಅವರು ರೈತರಿಂದ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.

ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಕೋಟಿ ರೂ. ಬೆಲೆಬಾಳುವ ಕಾರು ಕೊಟ್ಟಿದ್ದರು. ಆದರೆ, ಕಾರಿನ ಬಗ್ಗೆ ವಿವಾದವಾದ ಹಿನ್ನಲೆಯಲ್ಲಿ ಅದನ್ನು ಯಡಿಯೂರಪ್ಪ ಅವರು ವಾಪಸ್ ಕೊಟ್ಟಿದ್ದು, ರೈಲಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. [ಯಡಿಯೂರಪ್ಪ ಅವರನ್ನು ವಿವಾದಕ್ಕೆ ಸಿಲುಕಿಸಿದ ಕಾರು!]

ಸಿದ್ದರಾಮಯ್ಯ ಗದಗ ಪ್ರವಾಸದಲ್ಲಿದ್ದಾರೆ : ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇಂದು ಗದಗ ಜಿಲ್ಲೆಯಲ್ಲಿದ್ದಾರೆ. ಮಂಗಳವಾರ ಅವರು ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದರು. [ಚಿತ್ರಗಳು : ಧಾರವಾಡದಲ್ಲಿ ಸಿದ್ದರಾಮಯ್ಯ ಬರ ಪ್ರವಾಸ]

ಬರ ಪ್ರವಾಸದ ಚಿತ್ರಗಳು

English summary
Karnataka BJP president B.S.Yeddyurappa began his tour of drought affected districts on Wednesday by visiting Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X