ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025ಕ್ಕೆ ಅಂಗೀಕಾರ

ಬೆಂಗಳೂರು, ಮಾರ್ಚ್‌ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025ಕ್ಕೆ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧೇಯಕವನ್ನು ಗುರುವಾರದಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಂತರ ಮಾತನಾಡಿ, ಬೆಂಗಳೂರು ನಗರದ ಖಾಸಗಿ ಬಡಾವಣೆಗಳಲ್ಲಿ ರಸ್ತೆಗಳನ್ನು ಮಾಡಲಾಗಿದೆ. ಆ ರಸ್ತೆಗಳನ್ನು ನಾವು ಸಹ ಅಭಿವೃದ್ದಿ ಮಾಡಿದ್ದೇವೆ. ನಿವೇಶನಗಳನ್ನು ಮಾಡಿ ಹಂಚಿದ್ದರೂ ಸಹ ಕಂದಾಯ ದಾಖಲೆಗಳಲ್ಲಿ ಇನ್ನೂ ಭೂ ಮಾಲೀಕರ ಹೆಸರು ನಮೂದಾಗಿಯೇ ಇದೆ. ಈ ಭೂ ದಾಖಲೆಗಳನ್ನು ನವೀಕರಣ ಮಾಡಬೇಕಿದೆ. ಖಾಸಗಿ ಬಡಾವಣೆಗಳ ರಸ್ತೆಗಳನ್ನು ಸರ್ಕಾರಿ ರಸ್ತೆಗಳೆಂದು ಘೋಷಣೆ ಮಾಡಬೇಕಿದೆ ಎಂದು ಹೇಳಿದರು.

Bruhat Bengaluru Mahanagara Palike Amendment Bill 2025 passed

ಭೂ ಮಾಲೀಕರಲ್ಲಿ ಒಂದಷ್ಟು ಜನ ನಾವು ನಿವೇಶನ ಮಾತ್ರ ಹಂಚಿದ್ದೇವೆ. ರಸ್ತೆ ನೀಡಿಲ್ಲ ಎಂದು ಈಗ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ರಸ್ತೆಗಳನ್ನು ತೆಗೆದು ಮಾರಾಟ ಮಾಡಲು ಪ್ರಯತ್ನ ಮಾಡುವುದು ನಡೆಯುತ್ತಿದೆ. ಸರ್ಕಾರ ಟಿಡಿಆರ್ ನೀಡುತ್ತದೆ ಎಂದು ಈಗ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಅವರ ಬಡಾವಣೆಗಳಿಗೆ ರಸ್ತೆ ಮಾಡಿ ಅದಕ್ಕೆ ಈಗ ಪರಿಹಾರ ನೀಡಿ ಎಂದರೆ ಹೇಗೆ? ಆದ ಕಾರಣ ಈ ಪರಿಹಾರಗಳನ್ನು ನೀಡಲು ಆಗುವುದಿಲ್ಲ ಎಂದು ಈ ತಿದ್ದುಪಡಿ ತರಲಾಗಿದೆ ಎಂದರು. ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಕಾಯ್ದೆ ಜಾರಿಗೆ ತಂದಿದ್ದು, ಮುಂದಕ್ಕೆ ಪಟ್ಟಣಗಳು, ಪಂಚಾಯಿತಿಗಳಲ್ಲೂ ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು.

ಲೆವಿಯನ್ನು ಹಾಕುವ ಅಧಿಕಾರ ಮುಖ್ಯ ಆಯುಕ್ತರಿಗಿತ್ತು. ಇದು ಏಕಾಂಗಿ ನಿರ್ಧಾರಕ್ಕೆ ಕಾರಣವಾಗುತ್ತದೆ. ಈ ಅಧಿಕಾರವನ್ನು ಪಾಲಿಕೆಗೆ ನೀಡಿ, ಸಭೆಗಳಲ್ಲಿ ಇಟ್ಟು ತೀರ್ಮಾನ ಮಾಡುವುದನ್ನು ತಿದ್ದುಪಡಿಯಲ್ಲಿ ತರಲಾಗಿದೆ. ಅಕ್ರಮ ನಿರ್ಮಾಣಗಳಿಗೆ ಪಾಲಿಕೆಗೆ ಸೀಲಿಂಗ್ ಮಾಡುವ ಅವಕಾಶವಿರಲಿಲ್ಲ. ತಿದ್ದುಪಡಿ ಮೂಲಕ ಈ ಅವಕಾಶವನ್ನು ತರಲಾಗಿದೆ ಎಂದು ಹೇಳಿದರು.

Bruhat Bengaluru Mahanagara Palike Amendment Bill 2025 passed

ಚರ್ಚೆಯ ವೇಳೆ ಮಾತನಾಡಿದ ಡಿಸಿಎಂ ಅವರು, ಉದಾಹರಣೆಗೆ ಒಬ್ಬ ವ್ಯಕ್ತಿ 30/40 ಅಳತೆಯ ನಿವೇಶನ ಅಥವಾ ಅನೇಕ ನಿವೇಶನಗಳು ಸೇರಿ 20 ಸಾವಿರ ಚದರ ಅಡಿ ನಿವೇಶನಗಳನ್ನು ಉಪನೋಂದಾವಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿರುತ್ತಾನೆ. ಈಗಾದಾಗ ಮಿಕ್ಕ ಜಾಗಗಳು ಅವನ ಹೆಸರಿಗೆ ಬರದಂತೆ ಹಾಗೂ ಆತನ ಹೆಸರಿನಲ್ಲಿ ಪಹಣಿಯನ್ನೂ ಉಳಿಸಿಕೊಳ್ಳಲು ನೋಡುತ್ತಾನೆ. ಈಗ ಅನೇಕರು ತಕರಾರು ತೆಗೆದು ರಸ್ತೆಯ ಮಧ್ಯೆ ಗೋಡೆ ಎಬ್ಬಿಸುವುದು ಅಥವಾ ಅನೇಕರು ಈ ವಿಚಾರ ನನಗೆ ಗೊತ್ತಿಲ್ಲ, ನನ್ನ ತಂದೆ ಈ ರೀತಿ ಮಾಡಿದ್ದಾರೆ. ನಾನು ಮಾಡಿಲ್ಲ, ನನಗೆ ಗೊತ್ತಿಲ್ಲ ಎನ್ನುವುದೂ ನಡೆಯುತ್ತಿದೆ ಎಂದರು.

ಕೊಳೆಗೇರಿಗಳನ್ನು ಅಭಿವೃದ್ದಿ ಮಾಡುತ್ತೇವೆ, ಕಂದಾಯ ಬಡಾವಣೆಗಳನ್ನು ಮಾಡದೇ ಇರುತ್ತೇವಾ? ಕಳೆದ ನೂರಾರು ವರ್ಷಗಳಿಂದ ರಸ್ತೆ ಎಂದು ಬಳಸಿರುವುದನ್ನು ಈಗ ನನ್ನ ಆಸ್ತಿ ಎಂದು ಅಧಿಕಾರ ಚಲಾಯಿಸಲು ಹೋಗಬಾರದು. ರಸ್ತೆಗಳು ಸರ್ಕಾರದ ಆಸ್ತಿಗಳು. ಈ ದೃಷ್ಟಿಯಿಂದ ತಿದ್ದುಪಡಿ ಮಾಡಲಾಗಿದೆ. ಇನ್ನೂ ಕೆಲವೊಂದು ಕಡೆ ಕಾಂಪೌಂಡ್ ಕಮ್ಯುನಿಟಿ ಎಂದು ಮಾಡಿರುತ್ತಾರೆ. ಈ ಹಿಂದೆ ಎಂಬೆಸಿಯವರು ಈ ರೀತಿ ಮಾಡಿದ್ದರು. ನಂತರ ಸಾರ್ವಜನಿಕರು ನ್ಯಾಯಲಯಕ್ಕೆ ತೆರಳಿ ಸಮಸ್ಯೆ ಬಗೆಹರಿಸಲಾಯಿತು. ಜನರ ಬಳಕೆಗೆ ಮುಕ್ತವಾಗಿರಬೇಕು ಎಂಬುದು ನಮ್ಮ ಆಶಯ ಎಂದರು.

ಈಗಾಗಲೇ ಗೇಟೆಡ್ ಕಮ್ಯೂನಿಟಿ ಎಂದು ಮಾಡಿರುವುದರ ಬಗ್ಗೆ ಸರ್ಕಾರ ನಿಲುವೇನು ಎಂದು ಪ್ರತಿಪಕ್ಷಗಳು ಪ್ರಶ್ನಿಸಿದಾಗ, "ಒಂದು ಬಡಾವಣೆ ಮಾಡಿದರೆ ಒಳಬರಲು ಮತ್ತು ಹೊರ ಹೋಗಲು ವ್ಯವಸ್ಥೆ ಇರಬೇಕು. ಈಗಾಗಲೇ ಮಾಡಿರುವುದರ ಬಗ್ಗೆ ಮುಂದಕ್ಕೆ ಆಲೋಚಿಸಿ ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವರಾಹಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಕ್ರಮ

ವರಾಹಿ ಯೋಜನೆ ಯಾವಾಗ ಪ್ರಾರಂಭವಾಯಿತು ಇಲ್ಲಿಯ ತನಕ ಇದಕ್ಕೆ ಎಷ್ಟು ಖರ್ಚಾಗಿದೆ ಎಂದು ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ, "1979 ರಿಂದ 2005 ರವರೆಗೆ ಸುಮಾರು 26 ವರ್ಷಗಳ ಕಾಲ ಕೇಂದ್ರ ಪರಿಸರ ಇಲಾಖೆಯ ತಿಳುವಳಿಕೆ ಪತ್ರ ಪಡೆಯಲು ಸಮಯ ಹೋಗಿದೆ. ಇದಾದ ನಂತರ ಈ ಯೋಜನೆಗೆ ಜೀವ ಬಂದಿತು. ಆದಷ್ಟು ಬೇಗ ಕೆಲಸ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ವರಾಹಿ ಎಡದಂಡೆಯಲ್ಲಿ ಮಾತ್ರ ನೀರು ಹೋಗುತ್ತಿದೆ. ಭಂಡಾರಿಯವರ ಜೊತೆ ಒಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡಲಾಗುವುದು" ಎಂದು ತಿಳಿಸಿದರು.

1979 ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನೀತಿ ನಿಯಮಗಳ ಅರಿವಿಲ್ಲದೆ ಯೋಜನೆ ಮಾಡಿಬಿಟ್ಟಿದ್ದಾರೆ. ಭೂ ಸ್ವಾಧೀನವೇ ಈ ಯೋಜನೆಯ ಪ್ರಮುಖ ವಿಚಾರ. 1,009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದ್ದು, ಇನ್ನೂ 343 ಎಕರೆ ಬಾಕಿಯಿದೆ. 813 ಎಕರೆ ಸರ್ಕಾರಿ ಭೂಮಿಯಲ್ಲಿ 714 ಎಕರೆ ಸ್ವಾಧೀನ ಮಾಡಿಕೊಂಡಿದ್ದು 99 ಎಕರೆ ಬಾಕಿಯಿದೆ. 345 ಎಕರೆ ಅರಣ್ಯ ಭೂಮಿಯಲ್ಲಿ 319 ಎಕರೆ ಸ್ವಾಧೀನ ಮಾಡಿಕೊಂಡಿದ್ದು 19 ಎಕರೆ ಬಾಕಿಯಿದೆ. ಡೀಮ್ಡ್ ಅರಣ್ಯ ಭೂಮಿಯಲ್ಲಿ 11 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 104 ಎಕರೆ ಬಾಕಿಯಿದೆ. ಸ್ವಾಧೀನಗಳಿಗೆ 73 ಕೋಟಿ ಅವಶ್ಯಕತೆಯಿದೆ ಎಂದು ಮಾಹಿತಿ ನೀಡಿದರು.

11 ಸಾವಿರ ಕೋಟಿ ಬಿಲ್ ಇದೆ; ಯಾರಿಗೆ ಕೊಡುವುದು

ಕೇಂದ್ರದಲ್ಲಿ ಯಾವುದೇ ಯೋಜನೆ ಮಾಡಿದರೂ ಯೋಜಿತವಾಗಿ ಮಾಡುತ್ತಾರೆ. ನಮ್ಮ ಇಲಾಖೆಗೆ ಇರುವ ಬಜೆಟ್ 22 ಸಾವಿರ ಕೋಟಿ ಆದರೆ 1.50 ಲಕ್ಷ ಕೋಟಿ ಕಾಮಗಾರಿಗಳು ನಡೆಯುತ್ತಿವೆ. ಬಿಲ್ ಗಳ ಶೇ.10ಕ್ಕಿಂತ ಹೆಚ್ಚು ಪಾವತಿ ಮಾಡಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಬಿಲ್ ಪಾವತಿಗಾಗಿ 1,200 ಕೋಟಿ ಕೊಟ್ಟಿದ್ದಾರೆ. ಆದರೆ ಒಟ್ಟು ಬಿಲ್ 11 ಸಾವಿರ ಕೋಟಿಯಷ್ಟಿದೆ. ಯಾರಿಗೆ ದುಡ್ಡು ಕೊಡುವುದು ಬಿಡುವುದು. ಇದೇ ದೊಡ್ಡ ಪ್ರಶ್ನೆ. ಇದಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಮಾತ್ರ ಗುರಿ ಮಾಡುತ್ತಿಲ್ಲ. ನಾವೆಲ್ಲರೂ ಇದಕ್ಕೆ ಕಾರಣ ಎಂದರು.

ಸದಸ್ಯ ಟಿ.ಎ.ಶರವಣ ಅವರು ಕೆರೆ ಒತ್ತುವರಿ ಹಾಗೂ ಲಕ್ಷ್ಮಣ್ ರಾವ್ ವರದಿ, ಕೆರೆ ಬಫರ್ ಜೋನ್ ಉಲ್ಲಂಘನೆ ಬಗ್ಗೆ ಕೇಳಿದ ಪ್ರಶ್ನೆಗೆ, ಹೈಕೋರ್ಟ್ ಈ ಹಿಂದೆ ನೀಡಿದ ತೀರ್ಪಿನಂತೆ ಕೆರೆ ಬಳಿ 50 ಮೀಟರ್, ಕಾಲುವೆ ಬಳಿ 15 ಮೀಟರ್ ಬಫರ್ ಜೋನ್ ಇಡಿ ಎಂದು ಸೂಚನೆ ನೀಡಿತ್ತು. ಆರ್ ಎಂಪಿ ಅನ್ವಯ 2015 ರಲ್ಲಿ ಅನುಮತಿ ನೀಡಿದ್ದರೆ ಮುಂದುವರೆಯಿರಿ ಎಂದು ಹೇಳಿತ್ತು. ಈ ಬಗ್ಗೆ ಒಂದು ಸಮಿತಿ ರಚನೆ ಮಾಡಿ ಅರಣ್ಯ ಇಲಾಖೆಗೆ ಕಳಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+