ಕಾಂಗ್ರೆಸ್ ಸಂಚಾಲಕರಾಗಿ ಬ್ರಿಜೇಶ್ ಕಾಳಪ್ಪ ನೇಮಕ
ಬೆಂಗಳೂರು, ಮಾರ್ಚ್ 04: ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಅವರನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಮಾಧ್ಯಮ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ನೇಮಕ ಪತ್ರವನ್ನು ಬ್ರಿಜೇಶ್ ಕಾಳಪ್ಪ ಅವರಿಗೆ ಹಸ್ತಾಂತರಿಸಿದರು.
ಸುಪ್ರೀಂಕೋರ್ಟಿನಲ್ಲಿ ವಕೀಲರಾಗಿರುವ ಬ್ರಿಜೇಶ್ ಕಾಳಪ್ಪ ಅವರು ಈ ಹಿಂದೆ ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರ(ಕ್ಯಾಬಿನೆಟ್ ದರ್ಜೆ ಹುದ್ದೆ) ರಾಗಿ ಕಾರ್ಯನಿರ್ವಹಿಸಿದ್ದರು. ಹರ್ಯಾಣ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕೂಡಾ ಕರ್ತವ್ಯ ನಿಭಾಯಿಸಿದ್ದಾರೆ.

ಸದ್ಯ ಭಾರತೀಯ ಕಾಂಗ್ರೆಸ್ ನ ರಾಷ್ಟೀಯ ವಕ್ತಾರರಾಗಿದ್ದಾರೆ. ಸಿವಿಎಲ್, ಕ್ರಿಮಿನಲ್, ಜಲ ವಿವಾದ ಹಾಗೂ ಚುನಾವಣಾ ಕಾನೂನು ಸಂಬಂಧಿಸಿದ ಕೇಸುಗಳನ್ನು ನಿಭಾಯಿಸಿರುವ ಬ್ರಿಜೇಶ್ ಅವರು ಸರ್ಕಾರದ ಪರ ವಾದ ಮಂಡಿಸಿದ ಅನುಭವ ಹೊಂದಿದ್ದಾರೆ.












Click it and Unblock the Notifications