BPL Card: ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಯಾರೆಲ್ಲಾ ಕಾರ್ಡ್‌ಗಳು ರದ್ದು?
BPL Ration Card: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕೆಲಸ ಮುಂದುವರೆದಿದೆ. ಹಾಗಾದ್ರೆ, ಯಾರೆಲ್ಲಾ ಅನರ್ಹರ ಪಟ್ಟಿಯಲ್ಲಿ ಬರುತ್ತೀರಿ ಹಾಗೂ ಇದರಲ್ಲಿ ರಾಜಧಾನಿ ಬೆಂಗಳೂರಿನ ಪಾಲೆಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಅನರ್ಹರು ಸಹ ಈ ಕಾರ್ಡ್‌ಗಳನ್ನು ಪಡೆದುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಸರ್ಕಾರ ಇದೀಗ ಇಂತಹವರಿಗೆಲ್ಲ ಕಡಿವಾಣ ಹಾಕಿ ಬಿಪಿಎಲ್ ಕಾರ್ಡ್ ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುತ್ತಿದೆ. ಹಾಗಾದ್ರೆ ಯಾರೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇದೀಗ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ. ಅಕ್ರಮವಾಗಿ ಬಿಪಿಎಲ್ ಪಡೆದ ಅನರ್ಹರಿಗರ ಬಿಗ್ ಶಾಕ್ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ನೇರ ತೆರಿಗೆ ಮಂಡಳಿ ಮಾಹಿತಿ ಆಧಾರದ ಅನ್ವಯ ರಾಜ್ಯದಲ್ಲಿ ಬೆಂಗಳೂರು ಒಂದರಲ್ಲೇ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ. ಆಹಾರ ಇಲಾಖೆಗೆ ಕಳೆದ ತಿಂಗಳು ಸಿಕ್ಕಿರುವ ಟ್ಯಾಕ್ಸ್ ರಿಪೋರ್ಟ್ ಇಟ್ಟುಕೊಂಡು ತೆರಿಗೆ ಕಟ್ಟುತ್ತಿರುವವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆಯಾಗಲಿವೆ ಎನ್ನುವ ಮಾಹಿತಿ ಇದೆ. ಈಗಾಗಲೇ ಈ ಕಾರ್ಯ ರಾಜ್ಯಾದ್ಯಂತ ಮುಂದುವರೆದಿದೆ.
ಈ ನಡುವೆಯೂ ಕೆಲವರು ನಾವು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು, ಇನ್ನೊಮ್ಮ ಪರಿಶೀಲಿಸಿ ಈ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಈಗಾಗಲೇ ಯಾರೆಲ್ಲಾ ಅನರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆಯೋ ಅಂತಹವರು ನಿಮ್ಮ ತಲ್ಲೂಕು ತಹಶೀಲ್ದಾರ್ ಬಳಿ ಹೋಗಿ ಅರ್ಜಿ ಸಲ್ಲಿಸಿ ಮತ್ತೆ ಮರುಪಡೆಯಬಹುದು. ಅದೂ ನೀವು ಅರ್ಹರಿದ್ದರೆ ಮಾತ್ರ. ಇಲ್ಲದಿದ್ದರೆ ಎಪಿಎಲ್‌ಗೆ ಪರಿವರ್ತನೆ ಗ್ಯಾರಂಟಿ.. ಯಾಕಂದ್ರೆ ಬಿಪಿಎಲ್ ಇರುವುದು ಬಡವರಿಗೆ, ಶ್ರೀಮಂತರಿಲ್ಲ ಅಂತಲೂ ಸ್ಪಷ್ಟನೆ ನೀಡಿದೆ.
ಈಗಾಗಲೇ ಆಹಾರ ಇಲಾಖೆಯ ಬೆಂಗಳೂರಿನ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲೇ 13,329 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಎಪಿಎಲ್‌ಗೆ ವರ್ಗಾಹಿಸಲಾಗಿದೆ. ಆದ್ದರಿಂದ ರಾಜಾಜಿನಗರದ ಆಹಾರ ಇಲಾಖೆ ಮುಂದೆ ಜನರು ದಾಂಗುಡಿ ಇಡುತ್ತಿದ್ದಾರೆ. ಕೆಲವರು ನಮ್ಮ ಅರ್ಹರಿದ್ದರೂ ಸಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸಲಾಗಿದೆ. ನಾವೂ ಯಾವುದೇ ತೆರಿಗೆ ಕಟ್ಟುತ್ತಿಲ್ಲ, ಯಾರೂ ಕಂಪನಿಗಳಲ್ಲಿ ಕೆಲಸ ಮಾಡಲು ಹೋಗುತ್ತಿಲ್ಲ ಎಂದು ಅಳಲು ತೀಡಿಕೊಳ್ಳುತ್ತಲಿದ್ದಾರೆ. ಈ ರೀತಿಯ ಘಟನೆಗಳು ಪ್ರತಿನಿತ್ಯ ನಡೆಯುತ್ತಲಿವೆ.
ಈ ಹಿಂದಿನಿಂದಲೂ ಸಹ ಸರ್ಕಾರ ಇದಕ್ಕೆ ಉತ್ತರ ನೀಡುತ್ತಲೂ ಬಂದಿದೆ. ಯಾರೆಲ್ಲಾ ಅರ್ಹರಿದ್ದಿರೋ ಅವರು ನಿಮ್ಮ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಬಳಿಕ ನೀವು ಅರ್ಹರೆಂದು ತಿಳಿದುಬಂದಲ್ಲಿ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ಮತ್ತೆ ಕೊಡಕಾಗುವುದು ಅಂತಲೂ ಸ್ಪಷ್ಟನೆ ನೀಡಿದೆ.
ಯಾರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು?
* ಸರ್ಕಾರಿ ನೌಕರಿಯಲ್ಲಿರಬಾರದು.
* ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು.
* ನಾಲ್ಕು ಚಕ್ರದ ವಾಹನ ಇರಬಾರದು.
* ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು.
ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮುಂದೆ ಈ ಬಗ್ಗೆ ನೋಟಿಸ್ ಹಾಕಿದೆ. ಅಲ್ಲದೆ, ದಾಖಲೆಗಳನ್ನು ನೀಡಲು ಸೂಚಿಸಿದೆ. ಈ ಹಿನ್ನೆಲೆ ಬಿಪಿಎಲ್ ಕಾರ್ಡ್‌ದಾರರಿಗೆ ಬಿಗ್ ಶಾಕ್ ಎದುರಾದಂತಾಗಿದೆ. ಆದ್ದರಿಂದ ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂದು ಹಲವರ ಒತ್ತಾಯವಾಗಿದೆ.












Click it and Unblock the Notifications