BPL Card: ರಾಜ್ಯದಲ್ಲಿ ಹೊಸ ಪಡಿತರ ಚೀಟಿ ಹಂಚಿಕೆ ಬಗ್ಗೆ ಮಹತ್ವದ ಮಾಹಿತಿ

BPL Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇನ್ನೂ ಈ ಸಬಂಧ ಆಗಾಗ ಅಪ್ಡೇಟ್‌ ಮಾಹಿತಿಗಳು ಲಭ್ಯವಾಗುತ್ತಲೇ ಇರುತ್ತವೆ. ಇದೀಗ ಹೊಡ ರೇಷನ್‌ ಕಾರ್ಡ್‌ ಪಡೆಯುವ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಹೊಸ ಪಡಿತರ ಚೀಟಿ ಪಡೆಯುವ ಬಗ್ಗೆ ಆಹಾರ ಇಲಾಖೆ ಮಾಹಿತಿಯೊಂದನ್ನು ನೀಡಿದೆ ಎಂದು ತಿಳಿದುಬಂದಿದೆ. ಸರ್ಕಾರದಿಂದ ಸದ್ಯಕ್ಕೆ ಹೊಸ ರೇಷನ್‌ ಕಾರ್ಡ್‌ ವಿತರಣೆ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್‌.ಮುನಿಯಪ್ಪ ತಿಳಿಸಿದ್ದಾದ್ದಾರೆ ಎನ್ನುವ ಮಾಹಿತಿಯೊಂದು ಮೂಗಳಿಂದ ಲಭ್ಯವಾಗಿದೆ.

BPL Card Important information about New Ration Cards Distribution in State

ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ರೇಷನ್‌ ಕಾರ್ಡ್‌ ನಿಗದಿ ಗುರಿ ಮುಕ್ತಾಯಗೊಂಡಿದೆ. ಹೊಸ ಕಾರ್ಡ್‌ ಕೊಡುವುದನ್ನು ನಿಲ್ಲಿಸಲಾಗಿದೆ. ಅನರ್ಹರ ಕಾರ್ಡ್‌ ರದ್ದು ಮಾಡುವವರೆಗೂ ಹೊಸ ಕಾರ್ಡ್‌ಗಳನ್ನು ಕೊಡಲಾಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಸಚಿವರು ಹೇಳಿದ್ದಾರೆ. ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್‌ಗಳಿಗಾಗಿ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಸದ್ಯ ಹೊಸ ರೇಷನ್‌ ಕಾರ್ಡ್‌ ಕೊಡಲು ಸರ್ಕಾರದಲ್ಲು ಇದೀಗ ಅವಕಾಶ ಇಲ್ಲ . ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದೆ.

ಕೆ.ಎಚ್‌.ಮುನಿಯಪ್ಪ ಹೇಳಿದ್ದೇನು?: ನಕಲಿ ದಾಖಲೆ ನೀಡಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿ ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದೀಗ ಬಿಪಿಎಲ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಪ್ಡೇಡ್‌ ಮಾಹಿತಿಯನ್ನು ಕೊಟ್ಟಿದ್ದಾರೆ. ವಿವರ ಇಲ್ಲಿದೆ ಗಮನಿಸಿ.

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರು ಸ್ವಯಂ ಪ್ರೇರಿತವಾಗಿ ಪಡಿತರ ಚೀಟಿಯನ್ನು ಹಿಂದಿರುಗಿಸಿದರೆ ಮತ್ತಷ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲು ಅನುಕೂಲ ಆಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಇತ್ತೀಚೆಗಷ್ಟೇ ತಿಳಿಸಿದ್ದರು.

ತುಮಕೂರಿನ ಕುಣಿಗಲ್ ರಸ್ತೆಯ ಅಮರಜ್ಯೋತಿ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉಳ್ಳವರು, ಶ್ರೀಮಂತರು ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಅಂತಹವರು ಸ್ವಯಂಪ್ರೇರಿತವಾಗಿ ಹಿಂತಿರುಗಿಸಿದರೆ ಬಡವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಸಹಾಯ ಆಗಲಿದೆ ಎಂದು ಹೇಳಿದ್ದರು.

ದೇಶದಲ್ಲೇ ಅತೀ ಹೆಚ್ಚು ಪಡಿತರ ಚೀಟಿಗಳನ್ನು ವಿತರಣೆ ಮಾಡುವ ರಾಜ್ಯ ಅಂದರೆ ಕರ್ನಾಟಕ ಮಾತ್ರ. ನಮ್ಮ ರಾಜ್ಯದಲ್ಲಿರುವ 7 ಕೋಟಿ ಜನರ ಪೈಕಿ ಶೇಕಡ 70ರಷ್ಟು ಫಲಾನುಭವಿಗಳಿಗೆ ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 4.50 ಕೋಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇದರ ಸದುಪಯೋಗ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕೆಂದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+