ನಿಖಿಲ್ ಕುಮಾರಸ್ವಾಮಿ v/s ಪ್ರಜ್ವಲ್ ರೇವಣ್ಣ, ಸಹೋದರರ ರಾಜಕೀಯ ಫೈಟ್ ಶುರು

Recommended Video

      ನಿಖಿಲ್ ಕುಮಾರಸ್ವಾಮಿ v/s ಪ್ರಜ್ವಲ್ ರೇವಣ್ಣ | ಇಬ್ಬರು ಸಹೋದರರ ರಾಜಕೀಯ ಜಟಾಪಟಿ ಶುರು | Oneindia Kannada

      ಬೆಂಗಳೂರು, ಸೆಪ್ಟೆಂಬರ್ 04: ಜೆಡಿಎಸ್‌ ಪಕ್ಷದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ನಡುವೆ ರಾಜಕೀಯ ಹಗ್ಗ-ಜಗ್ಗಾಟ ಪ್ರಾರಂಭವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ.

      ವಿಧಾನಸಭೆ ಚುನಾವಣೆಯಲ್ಲಿಯೇ ರಾಜರಾಜೇಶ್ವರಿ ನಗರ ಟಿಕೆಟ್ ಕೇಳಿ ಆ ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ದೇವೇಗೌಡರಿಂದ ಸೂಚನೆ ಬಂದ ಕಾರಣ ಸುಮ್ಮನಾಗಿದ್ದ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಈಗಾಗಲೇ ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.

      ಮತ್ತೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಸ್ಟಾರ್ ಪ್ರಚಾರಕನಾಗಿ ಕಾರ್ಯ ಮಾಡಿದ್ದ ನಿಖಿಲ್ ಗೌಡ ಸಹ ಚುನಾವಣಾ ರಾಜೀಯಕ್ಕೆ ಇಳಿಸುವ ಸ್ಪಷ್ಟ ಸುಳಿವನ್ನು ಇಂದು ಮಾಧ್ಯಮಗಳಿಗೆ ನೀಡಿದ್ದಾರೆ.

      ಮಂಡ್ಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಇದೆ, ಆದರೆ ಪಕ್ಷದ ಹಿರಿಯರು ಏನು ನಿರ್ಣಯ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ಬದ್ಧವಾಗಿರುತ್ತೇನೆ ಎಂದಿದ್ದಾರೆ.

      'ರಾಜಕೀಯ, ಸಿನಿಮಾ ಒಟ್ಟಿಗೆ ನಿಭಾಯಿಸುತ್ತೇನೆ'

      'ರಾಜಕೀಯ, ಸಿನಿಮಾ ಒಟ್ಟಿಗೆ ನಿಭಾಯಿಸುತ್ತೇನೆ'

      ಮುಂದುವರೆದು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ, ರಾಜಕೀಯ ಮತ್ತು ಸಿನಿಮಾ ಎರಡನ್ನೂ ತೂಗಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ. ಆ ಮೂಲಕ ಚುನಾವಣೆಗೆ ಸ್ಪರ್ಧಿಸುವ ಸಂಪೂರ್ಣ ಆಕಾಂಕ್ಷೆ ಇದೆ ಎಂದಿದ್ದಾರೆ.

      ನಿಖಿಲ್-ಪ್ರಜ್ವಲ್‌ ನಡುವೆ ತೆರೆಮರೆ ರಾಜಕೀಯ

      ನಿಖಿಲ್-ಪ್ರಜ್ವಲ್‌ ನಡುವೆ ತೆರೆಮರೆ ರಾಜಕೀಯ

      ಜೆಡಿಎಸ್‌ಗೆ ಅಂಟಿರುವ ಕುಟುಂಬ ರಾಜಕಾರಣದ ಕಳಂಕವನ್ನು ತೊಡೆದುಕೊಳ್ಳ ಬೇಕು ಎಂದು ದೇವೇಗೌಡರು ಕಳೆದ ಬಾರಿ ಕುಟುಂಬದಿಂದ ಇಬ್ಬರಿಗೆ ಮಾತ್ರ ಟಿಕೆಟ್ ಎಂದಿದ್ದರು. ಈಗ ಮತ್ತಿಬ್ಬರು ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ವಿಶೇಷವೆಂದರೆ ಇಬ್ಬರೂ ಮಂಡ್ಯದಿಂದಲೇ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಇದು ಈ ಇಬ್ಬರ ನಡುವೆ ತೆರೆಮರೆಯ ರಾಜಕೀಯ ಜಟಾಪಟಿಗೆ ಕಾರಣವಾಗಬಹುದು.

      ಪ್ರಜ್ವಲ್‌ಗೆ ಟಿಕೆಟ್ ನೀಡುವಂತೆ ದೇವೇಗೌಡ ಮೇಲೆ ಒತ್ತಾಯ

      ಪ್ರಜ್ವಲ್‌ಗೆ ಟಿಕೆಟ್ ನೀಡುವಂತೆ ದೇವೇಗೌಡ ಮೇಲೆ ಒತ್ತಾಯ

      ವಿಧಾನಸಭೆ ಚುನಾವಣೆಗೆ ಪ್ರಜ್ವಲ್‌ಗೆ ಟಿಕೆಟ್ ನೀಡಲೇ ಬೇಕು ಎಂದು ರೇವಣ್ಣ ಹಾಗೂ ಭವಾನಿ ರೇವಣ್ಣ ಸಾಕಷ್ಟು ಒತ್ತಾಯ ಮಾಡಿದ್ದರು. ಆದರೆ ದೇವೇಗೌಡರು ಹಾಸನದ ತಮ್ಮದೇ ಲೋಕಸಭೆ ಕ್ಷೇತ್ರ ಬಿಟ್ಟುಕೊಡುವುದಾಗಿ ಮಾತು ನೀಡಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ತನಗೂ ಟಿಕೆಟ್ ಬೇಕು ಎಂದು ಪಟ್ಟು ಹಿಡಿದರೆ ಇಬ್ಬರ್ಲಿ ಯಾರಿಗೆ ಟಿಕೆಟ್ ಕೊಡುತ್ತಾರೋ ನೋಡಬೇಕು.

      ಪ್ರಚಾರ ಆರಂಭಿಸಿರುವ ಪ್ರಜ್ವಲ್ ರೇವಣ್ಣ

      ಪ್ರಚಾರ ಆರಂಭಿಸಿರುವ ಪ್ರಜ್ವಲ್ ರೇವಣ್ಣ

      ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಚುನಾವಣೆಗೆ ತಯಾರಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಬಹುವಾಗಿ ಸಕ್ರಿಯರಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಸಕ್ರಿಯವಾಗಿ ಓಡಾಡುತ್ತಿರುವ ಅವರು, ಹಾಸನ, ಮಂಡ್ಯ, ಮೈಸೂರುಗಳಲ್ಲಿ ಟಿಕೆಟ್ ಗೆ ಬೇಡಿಕೆ ಇಡಲಿದ್ದಾರೆ.

      ಅನಿತಾ ಕುಮಾರಸ್ವಾಮಿಗೆ ರಾಮನಗರದ ಟಿಕೆಟ್‌

      ಅನಿತಾ ಕುಮಾರಸ್ವಾಮಿಗೆ ರಾಮನಗರದ ಟಿಕೆಟ್‌

      ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅನಿತಾ ಅವರೇ ಚುನಾವಣೆಗೆ ನಿಂತರೆ. ಆ ನಂತರ ಲೋಕಸಭೆ ಚುನಾವಣೆಗೆ ನಿಖಿಲ್ ಪ್ರಜ್ವಲ್ ಇಬ್ಬರಿಗೂ ಟಿಕೆಟ್ ನೀಡಿದ್ದರೆ ಕೆಲವೇ ಒಂದುವ ವರ್ಷದ ಅವಧಿ ಒಳಗೆ ಒಟ್ಟು 5 ಜನ ದೇವೇಗೌಡ ಕುಟುಂಬದವರು ಮುಖ್ಯ ಚುನಾವಣೆ ಎದುರಿಸಿದಂತಾಗುತ್ತದೆ. ಭವಾನಿ ರೇವಣ್ಣ ಈಗಾಗಲೇ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ ಅಲ್ಲಿಗೆ ಬಹುತೇಕ ಎಲ್ಲರೂ ಸಕ್ರಿಯ ರಾಜಕಾರಣಿಗಳಾದಂತಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+