ಕೊಳವೆ ಬಾವಿ ದುರಂತ: ಸುದ್ದಿ ಕೇಳಿ ಮೃತರ ದೊಡ್ಡಪ್ಪ ಸಾವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಗದಗ, ಏಪ್ರಿಲ್ 12: ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಇಂದು ಕೊಳವೆ ಬಾವಿಗೆ ಬಿದ್ದು ಮೃತರಾದ ಶಂಕರಪ್ಪ (30) ಅವರ ಸಾವಿನ ಸುದ್ದಿ ಕೇಳಿ ಅವರ ದೊಡ್ಡಪ್ಪ ಸಂಗಪ್ಪ ಬಾಣದ್(32) ಎನ್ನುವವರು ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ.

ಮೊದಲೇ ಶಂಕರಪ್ಪ ಅವರ ಸಾವಿನಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಇದೀಗ ಅವರ ದೊಡ್ಡಪ್ಪ ಸಂಗಪ್ಪ ಅವರ ಸಾವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.[ಗದಗ ಕೊಳವೆ ಬಾವಿ ದುರಂತ: ಕಾರ್ಮಿಕರಿಬ್ಬರೂ ಸಾವು]

Borewell tragedy: Shankrappa's uncle dies

ಇಂದು ಬೆಳಗ್ಗೆ ಶಂಕರಪ್ಪ ಅವರ ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯನ್ನು ರಿ ಬೋರ್ ಮಾಡಿಸುತ್ತಿದ್ದ ಸಮಯದಲ್ಲಿ ಜಮೀನಿನ ಮಾಲೀಕ ಶಂಕರಪ್ಪ ಮತ್ತು ಕಾರ್ಮಿಕ ಬಸವರಾಜ್ (32) ಎಂಬುವವರು ಕೊಳವೆಗೆ ಬಾವಿಗೆ ಬಿದ್ದಿದ್ದರು. ಹಲವು ಗಂಟೆಗಳ ಕಾರ್ಯಾಚರಣೆಯ ನಂತರವೂ ಇಬ್ಬರನ್ನೂ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಸುದ್ದಿಯನ್ನು ಕೇಳಿದ ಅವರ ದೊಡ್ಡಪ್ಪ, ಆಘಾತ ತಾಳಲಾರದೆ ಸಾವನ್ನಪ್ಪಿದ್ದು, ಕುಟುಂಬವೀಗ ಇಬ್ಬರ ಸಾವಿನ ದುಃಖವನ್ನು ಭರಿಸಬೇಕಿದೆ.[ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a strange incident, Shankrappa banad's death news kills his uncle Sangappa Banad also. By hearing Shankrappa's death news, Sangappa met with heart attack and dies.
Please Wait while comments are loading...