'ಬೊಮ್ಮಾಯಿ 1500 ಕೋಟಿ ಗುಳುಂ ಮಾಡಿದ ಭಂಡ ಸಿಎಂ': ಟಿಕೆಟ್ ಮಿಸ್‌ ಬೆನ್ನಲ್ಲೆ ಓಲೇಕಾರ್ ಬಾಂಬ್- ಜೆಡಿಎಸ್ ಟ್ವೀಟ್

ಬೆಂಗಳೂರು ಏಪ್ರಿಲ್ 14: ಟಿಕೆಟ್ ಪ್ರಕಟವಾಗುತ್ತಿದ್ದಂತೆ ರಾಜ್ಯದ ಬಿಜೆಪಿ ಬಂಡವಾಳ ಬಯಲಾಗುತ್ತಿದೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಅವರದೇ ಶಾಸಕ ನೆಹರು ಓಲೇಕಾರ್ 1,500 ಕೋಟಿ ರೂ. ಗಳ ಭ್ರಷ್ಟಚಾರ ಆರೋಪ ಮಾಡಿದ್ದಾರೆ. ಟಿಕೆಟ್ ಘೋಷಿಸಲು ಬಿಜೆಪಿ ಯಾಕೆ ಇಷ್ಟು ದಿನ ಮೀನಾಮೇಷ ಎಣಿಸುತ್ತಿತ್ತು ಎನ್ನುವುದು ರಾಜ್ಯದ ಜನತೆಗೆ ಈಗ ಅರ್ಥವಾಗುತ್ತಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಕುಟುಕಿದೆ.

'ಓಲೇಕಾರ್ ಆರೋಪಿಸಿರುವ ಭ್ರಷ್ಟಚಾರವನ್ನು ಗಮನಿಸಿದರೆ ಸಿಎಂ ಬೊಮ್ಮಾಯಿ 40% ಸಿಎಂ ಅಲ್ಲ, 99% ಕಮಿಷನ್ ಸಿಎಂ ಎಂದು ಖಚಿತವಾಗುತ್ತಿದೆ. ಜನತೆ ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ ಅಮಿತ್ ಶಾ ಮತ್ತು ನರೇಂದ್ರ ಮೋದಿ ಮಾಲಿಕತ್ವದ ಬಿಜೆಪಿ ಕಂಪನಿಗೆ ತಲುಪುತ್ತಿದೆ. ಲೋಕಾಯುಕ್ತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ' ಎಂದಿದೆ.

Bommai has looted 1500 crore: JDS Tweet

'ಇಷ್ಟೆ ಅಲ್ಲದೆ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಕೂಡಾ ಈ ಪ್ರಕರಣವನ್ನು ಪರಿಗಣಿಸಿ ಭ್ರಷ್ಟಾಚಾರಿಗಳು ಚುನಾವಣೆ ಸ್ಪರ್ಧಿಸದಂತೆ ಮಾಡಬೇಕಿದೆ. ಚುನಾವಣೆ ನೆಪದಲ್ಲಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯಕ್ಕೆ ಪದೇ ಪದೇ ಬರುತ್ತಿರುವುದು ಇಲ್ಲಿನ ಹಣವನ್ನು ಗಂಟುಕಟ್ಟಿ ದೆಹಲಿಯ ಖಜಾನೆ ತುಂಬಿಸಲೆಂದೆ ಅನಿಸುತ್ತಿದೆ' ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಹಲವಾರು ಟಿಕೆಟ್ ಆಕಾಂಕ್ಷಿಗಳಿಂದ ಬಂಡಾಯದ ಪರ್ವ ಶುರುವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾಸಕ ನೆಹರು ಓಲೇಕಾರ್‌ಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಬಂಡಾಯವೆದ್ದ ನೆಹರು ಓಲೇಕಾರ್ 'ತಮಗೆ ಟಿಕೆಟ್ ಕೈತಪ್ಪಲು ಮುಖ್ಯಮಂತ್ರಿಗಳೇ ಕಾರಣ' ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ಸಿಎಂ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ

ರಾಜ್ಯ ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ ಮಾಡಿದ್ದಾರೆ. ಪಕ್ಷದವರೇ ಬಹಿರಂಗವಾಗಿ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಕಳೆದ ದಿನ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ್, 'ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಬೊಮ್ಮಾಯಿ ಅವರೇ ಕಾರಣ' ಎಂದಿದ್ದಾರೆ.

Bommai has looted 1500 crore: JDS Tweet

'ಧಮ್ ಇದ್ದರೆ ಬೊಮ್ಮಾಯಿ ತೋರಿಸಲಿ, ನಮ್ಮ ತಾಕತ್ತು ಎಷ್ಟು ಇದೆ ಅಂತ ನಾವು ತೋರಿಸುತ್ತೇವೆ. ಅವರೂ ಅವರ ತಾಕತ್ತು ತೋರಿಸಲಿ. ಬೊಮ್ಮಾಯಿ ಸಾಕಷ್ಟು ಕಳಪೆ ಕೆಲಸ ಮಾಡಿದ್ದಾರೆ. 15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇದೆಲ್ಲವೂ ಬಯಲಾಗಲಿದೆ' ಎಂದು ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಆಕ್ರೋಶಗೊಂಡಿದ್ದಾರೆ.

ಓಲೇಕಾರ್ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ

ಓಲೇಕಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ ಅವರು,'15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದರೆ. ಅದರ ದಾಖಲೆ ತೋರಿಸಲಿ. ದಾಖಲೆ ಸಮೇತ ಆರೋಪ ಮಾಡಲಿ, ಹೇಳಿಕೆಯಿಂದ ಎಲ್ಲವೂ ನಿಜವಾಗುವುದಿಲ್ಲ. ಯಾವ ಆರೋಪ ಬೇಕಾದರೂ ಮಾಡಲಿ. ಯಾವುದೇ ಆರೋಪ ದಾಖಲೆ ಸಮೇತ ಮಾಡಲಿ' ಎಂದು ಸವಾಲು ಹಾಕಿದ್ದಾರೆ.

ಕಳೆದ ಎರಡು ದಿನಗಳಿಂದ ಬಿಜೆಪಿ ತನ್ನ ಮೊದಲ ಹಾಗೂ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸೆ ಬಿಜೆಪಿಗರ ಪೈಪೋಟಿ ಹೆಚ್ಚಾಗಿದ್ದು ಟಿಕೆಟ್ ಬಡಿದಾಟ ಶುರುವಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಹಲವಾರು ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಧಾನವನ್ನು ಹೊರಹಾಕಿದ್ದಾರೆ. ಇದು ವಿರೋಧ ಪಕ್ಷಗಳಲ್ಲಿ ಚುನಾವಣಾ ಅಸ್ತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+