ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗಮ-ಮಂಡಳಿ ಪಟ್ಟಿ ಇಂದು ಬಹಿರಂಗ

|
Google Oneindia Kannada News

ಬೆಂಗಳೂರು, ನ.24 : ಬಹುನಿರೀಕ್ಷಿತ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಕುರಿತು ಇಂದು ಅಂತಿಮ ಆದೇಶ ಹೊರಬೀಳಲಿದೆ. ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡುವುದಿಲ್ಲ. ಆಯಾ ಇಲಾಖೆಗಳೇ ನೇರವಾಗಿ ಆದೇಶಗಳನ್ನು ಹೊರಡಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಆದ್ದರಿಂದ ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಧಿಕಾರಾವಧಿಯನ್ನು 18 ತಿಂಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. [ನಿಗಮ-ಮಂಡಳಿ ಪಟ್ಟಿ ಅಂತಿಮ]

Siddaramaiah

ಅಧ್ಯಕ್ಷರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಿಲ್ಲ. ಆಯಾ ಇಲಾಖೆಗಳೇ ನೇರವಾಗಿ ಆದೇಶಗಳನ್ನು ಹೊರಡಿಸಲಿವೆ. ಹೈಕಮಾಂಡ್‌ ತೀರ್ಮಾನದಂತೆ ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. [ಕಾಂಗ್ರೆಸ್ ನಾಯಕನ ಆತ್ಮಹತ್ಯೆ ಯತ್ನ]

ಒಟ್ಟು 95 ನಿಗಮ ಮಂಡಳಿಗಳಿಗೆ ನೇಮಕಮಾಡಲಾಗಿದ್ದು, ಇಂದಿನಿಂದಲೇ ಅಧ್ಯಕ್ಷ-ಉಪಾಧ್ಯಕ್ಷರು ಯಾರು ಎಂಬುದು ತಿಳಿದುಬರಲಿದೆ. ನಿಗಮ ಮಂಡಳಿಗಳ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳಿದ್ದು, ಪಟ್ಟಿ ಹೊರಬಂದ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಪಟ್ಟಿಯಲ್ಲಿ ಸ್ಥಾನ ದೊರೆಯದ ಕಾರಣ ಮೈಸೂರಿನ ಕಾಂಗ್ರೆಸ್ ನಾಯಕ ಇಟ್ಟಿಗೆಗೂಡು ಪ್ರದೇಶದ ನಿವಾಸಿ ಪ್ರಭಾಕರ್ (68) ಮತ್ತು ಅವರ ಪುತ್ರ ಪ್ರತಾಪ್ (35) ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
KPCC president G. Parameshwara and Chief Minister Siddaramaiah finalize the list for Appointment to boards, corporations. List will announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X