ಭಾಷೆ ಮರೆತ ಬಿಎಂಟಿಸಿ: ಸರ್ಕಾರಕ್ಕೆ ಹನುಮಂತಯ್ಯ ಪತ್ರ

Written By:
Subscribe to Oneindia Kannada

ಬೆಂಗಳೂರು, ಜೂನ್ 1: ಬಿಎಂಟಿಸಿ ನಾಗರಿಕರ ಅನುಕೂಲಕ್ಕೆ ಜಾರಿಗೆ ತಂದಿರುವ "ಸುಲಭ ಪ್ರಯಾಣಕ್ಕೆ ಸಕಲ ಮಾಹಿತಿ" (ಈಸಿ ಟ್ರಾವೆಲ್‌ ಇನ್ಫಾರ್ಮೆಷನ್‌ ಪ್ಲಾನ್‌) ಮೊಬೈಲ್ ಅಪ್ಲಿಕೇಶನ್ ನಲ್ಲಿ ಕನ್ನಡಕ್ಕೆ ಜಾಗವಿಲ್ಲ.

ಬಿಎಂಟಿಸಿ ಬಿಡಗಡೆ ಮಾಡಿರುವ ಅಪ್ಲಿಕೇಶನ್ ನಲ್ಲಿ ಪ್ರಧಾನ ಭಾಷೆಯಾಗಿ ಕನ್ನಡ ಇರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್ ಹನುಮಂತಯ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.[PMO ವೆಬ್ ಸೈಟ್ ನಲ್ಲಿ ಕನ್ನಡ ಎಲ್ಲಿ? ಅರ್ಜಿಗೆ ಸಹಿ ಹಾಕಿ]

kannada

ಆಡಳಿತ ಭಾಷೆಯೇ ರಾಜಧಾನಿಯ ಸಂಪರ್ಕ ಸಾರಿಗೆಗೆ ಬಳಸುವ ಅಪ್ಲಿಕೇಶನ್ ನಲ್ಲಿ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ಸಾರಿಗೆ ಸಚಿವರು ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.[#VenkayyaSakayya ಅಭಿಯಾನ ಹುಟ್ಟಿದ್ದು ಹೇಗೆ?]

ಈ ಅಪ್ಲಿಕೇಶನ್ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ ರಾಜ್ಯದ ಭಾಷೆಯನ್ನೇ ಕಡೆಗಣಿಸಲಾಗಿದೆ. ಸರ್ಕಾರ ತನ್ನ ತಪ್ಪು ಸರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಬಿಎಂಟಿಸಿ ಬಿಡಗಡೆ ಮಾಡಿರುವ ಅಪ್ಲಿಕೇಶನ್ ನಲ್ಲಿ ಪ್ರಧಾನ ಭಾಷೆಯಾಗಿ ಇಂಗ್ಲಿಷ್ ನ್ನು ನೀಡಲಾಗಿದೆ. ಇದರಿಂದ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರಂತರ ದೂರುಗಳು ಬರುತ್ತಿದ್ದು ಸರ್ಕಾರ ಮತ್ತು ಸಾರಿಗೆ ಸಚಿವರು ಕೂಡಲೇ ಕನ್ನಡ ಅಳವಡಿಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಹನುಮಂತಯ್ಯ ಒತ್ತಾಯ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Chairman of Kannada Development Authority L. Hanumanthaiah wrote a open letter to Karnataka Transport Minister Ramalinga Reddy regarding BMTC mobile application. Hanumanthaiah urged that State Government Should include Kannada in the app which are using by Bengaluru People.
Please Wait while comments are loading...