ಆಯುಧ ಪೂಜೆಗೆ ಬಸ್ ಅಲಂಕಾರಕ್ಕೆ ಹಣನೀಡುವಲ್ಲಿ ಸಾರಿಗೆ ಇಲಾಖೆ ಜಿಪುಣತನ

Recommended Video

      ಆಯುದ ಪೂಜೆ ಅಲಂಕಾರಕ್ಕೆ ಹಣ ನೀಡದ ಸಾರಿಗೆ ಇಲಾಖೆ Oneindia Kannada

      ಬೆಂಗಳೂರು, ಅಕ್ಟೋಬರ್ 18: ಆಯುಧ ಪೂಜೆಗೆ ವಾಹನಗಳನ್ನು ತೊಳೆದು ಸಿಂಗರಿಸಿ ಪೂಜೆ ಮಾಡುವುದು ಪ್ರತೀತಿ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ತಮ್ಮ ವಾಹನಗಳನ್ನು ಸಿಂಗಾರ ಮಾಡುತ್ತಾರೆ. ಆದರೆ ಇಲಾಖೆಯ ವಾಹನಗಳನ್ನು ಅಲಂಕಾರ ಮಾಡುವಲ್ಲಿ ಮಾತ್ರ ಬಿಎಂಟಿಸಿ ಭಾರಿ ಜಿಪುಣತನ ತೋರಿದೆ.

      ಮೈಸೂರು ದಸರಾ - ವಿಶೇಷ ಪುರವಣಿ

      ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಿಗೆ ಅಲಂಕಾರ ಮಾಡಲು ಇಲಾಖೆ ಕೇವಲ 40 ರೂಪಾಯಿಗಳನ್ನು ಮಾತ್ರವೇ ನೀಡಿದೆ. ಈ ಹಣದಲ್ಲಿ ಒಂದು ಮೊಳ ಹಾರವಾದರೂ ಬರುತ್ತದೆಯೋ ಇಲ್ಲವೋ ಅನುಮಾನ.

      ನಾಡಹಬ್ಬ ದಸರಾ ಆಯುಧ ಪೂಜೆ ಅಂಗವಾಗಿ ವಾಹನಗಳು, ಯಂತ್ರೋಪಕರಣಗಳಿಗೆ ಶ್ರದ್ದಾಭಕ್ತಿಯಿಂದ ಅರ್ಥಪೂರ್ಣವಾಗಿ ಪೂಜೆ ನೆರವೇರಿಸಲು ಬಿಎಂಟಿಸಿ ಸೂಚಿಸಿದೆ ಆದರೆ ಹಣ ಮಾತ್ರ ಬಿಡುಗಡೆ ಆಗಿಲ್ಲ.

      BMTC, KSRTC given very less money to decorate buses

      ಬಿಎಂಟಿಸಿ ನಿರ್ಣಯಕ್ಕೆ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕ ಬಸ್‌ ಡ್ರೈವರ್‌ಗಳು, ಕಂಡಕ್ಟರ್‌ಗಳೇ ತಮ್ಮ ಸ್ವಂತ ಖರ್ಚಿನಲ್ಲಿಯೇ ತಂತಮ್ಮ ಬಸ್‌ಗಳನ್ನು ಸಿಂಗರಿಸಿದ್ದಾರೆ.

      ಬಿಎಂಟಿಸಿಯು ಇಲಾಖೆಯ ವಾಹನಗಳು, ಸಾಮಾನ್ಯ ಬಸ್‌ಗಳ ಅಲಂಕಾರಕ್ಕೆ 40 ರೂಪಾಯಿ ನೀಡಿದೆ. ವೋಲ್ವಾ ಹಾಗೂ ಕೇರಾ ಬಸ್‌ಗಳ ಅಲಂಕಾರಕ್ಕೆ 100 ರೂಪಾಯಿಗಳನ್ನು ಮಾತ್ರವೇ ನೀಡಿದೆ.

      ಬಿಎಂಟಿಸಿಯಲ್ಲಿ 5,090 ಸಾಮಾನ್ಯ ವಾಹನಗಳು, 751 ವೋಲ್ವೊ ಬಸ್‍ಗಳು, 25 ಕರೋನಾ ಬಸ್‍ಗಳು ಸೇರಿದಂತೆ ಒಟ್ಟು 5,869 ವಾಹನಗಳಿವೆ. ಆಯುಧ ಪೂಜೆಗಾಗಿ ಒಟ್ಟು 2,90,350 ರೂ. ಮಂಜೂರು ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯು ಸಹ ಇಷ್ಟೆ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+