ನೋಟು ವಿನಿಮಯ ಪ್ರಕರಣ: ಮತ್ತಿಕಟ್ಟಿ ಅಳಿಯನಿಗೆ ಜಾಮೀನು
ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಕಾಂಗ್ರೆಸ್ ನಾಯಕ ವೀರಣ್ಣ ಮತ್ತಿಕಟ್ಟಿ ಅಳಿಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 4: ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಕಾಂಗ್ರೆಸ್ ನಾಯಕ ವೀರಣ್ಣ ಮತ್ತಿಕಟ್ಟಿ ಅಳಿಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಮಾಜಿ ವಿಧಾನಪರಿಷತ್ ಸಭಾಪತಿಗಳೂ ಆದ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್ ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.[ಕಪ್ಪು-ಬಿಳಿ ದಂಧೆ, ವೀರಣ ಮತ್ತೀಕಟ್ಟಿ ಅಳಿಯ ಸೇರಿ 13 ಜನ ಅರೆಸ್ಟ್]

ಏಪ್ರಿಲ್ 1ರ ಮಧ್ಯ ರಾತ್ರಿ 9 ಗಂಟೆ ವೇಳೆ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬೆನ್ಸನ್ ಟೌನ್ ನಲ್ಲಿರುವ ಪ್ರವೀಣ್ ಕುಮಾರ್ ಮನೆ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಿದ್ದರು. ಜತೆಗೆ 9.14 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವೀರಣ್ಣ ಮತ್ತಿಕಟ್ಟಿ, "ನನಗೂ ಅಳಿಯನಿಗೂ ಕಳೆದ 6 ತಿಂಗಳಿನಿಂದ ಸಂಪರ್ಕವಿಲ್ಲ. ಆತನ ಮನೆ ಮೇಲೆ ದಾಳಿ ನಡೆದಿರುವ ವಿಚಾರವೂ ನನಗೆ ಇಲ್ಲ," ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications