ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೆಪಿಎಂಇ ಕಾಯ್ದೆ ರದ್ದು
Recommended Video

ಬೆಂಗಳೂರು, ನವೆಂಬರ್ 16 : 'ಕೆಪಿಎಂಇ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದರೆ ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ರದ್ದು ಪಡಿಸುತ್ತೇನೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ವೈದ್ಯರ ವಿರೋಧದ ನಡುವೆಯೂ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದರೆ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ರದ್ದುಪಡಿಸಲಾಗುತ್ತದೆ' ಎಂದರು.

'ತಜ್ಞರ ಸಲಹೆ ಪಡೆಯದೇ ತರಾತುರಿಯಲ್ಲಿ ಮಸೂದೆ ರೂಪಿಸಲಾಗಿದೆ. ವೈದ್ಯರು ಪ್ರತಿಭಟನೆ ಕೈಬಿಟ್ಟು ಮೂರು ತಿಂಗಳು ಸಹಿಸಿಕೊಳ್ಳಬೇಕು. ನಮ್ಮ ಆಡಳಿತದಲ್ಲಿ ಈ ಕಾಯ್ದೆ ಇರುವುದಿಲ್ಲ' ಎಂದು ತಿಳಿಸಿದರು.
'ಸರ್ಕಾರ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ರೂಪಿಸಬೇಕು. ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಸಾಧ್ಯವಾದರೆ ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
ಪ್ರತಿಪಕ್ಷಗಳ ವಿರುದ್ಧ ಆರೋಪ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯರ ಪ್ರತಿಭಟನೆಗೆ ಪ್ರತಿಪಕ್ಷಗಳು ಪ್ರೋತ್ಸಾಹ ನೀಡುತ್ತಿವೆ ಎಂದು ಆರೋಪ ಮಾಡಿದ್ದಾರೆ.
ಮುಷ್ಕರ ನಿರತ ವೈದ್ಯರ ಜೊತೆ ಸರ್ಕಾರ ಸಂಜೆ ಮಾತುಕತೆ ನಡೆಸಲಿದ್ದು, ನಂತರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಹೈಕೋರ್ಟ್ ಪ್ರತಿಭಟನೆ ನಿಲ್ಲಿಸುವಂತೆ ವೈದ್ಯರಿಗೆ ಸೂಚನೆ ನೀಡಿದೆ.












Click it and Unblock the Notifications