ದಿನೇಶ್ ಅಮೀನ್ ಮಟ್ಟು ರಾಜೀನಾಮೆಗೆ ಬಿಜೆಪಿ ಪಟ್ಟು

Subscribe to Oneindia Kannada

ಬೆಂಗಳೂರು, ಜನವರಿ, 27: ದೇಶಾದ್ಯಂತ ಶಂಕಿತ ಉಗ್ರರನ್ನು ಬಂಧಿಸಿದ್ದ ಸಮಯದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದು ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯ ಮಾಡಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ದಿನೇಶ್ ಅಮಿನಮಟ್ಟು ಅಂಥವರ ಹೇಳಿಕೆಗಳು ಸಮಾಜದ ಸ್ವಾಸ್ಥ ಕೆಡಿಸುತ್ತವೆ ಎಂದು ಆರೋಪಿಸಿದ್ದಾರೆ.[ದೇಶಾದ್ಯಂತ ಶಂಕಿತ ಉಗ್ರರ ಬಂಧನ]

bjp

ನಾನು ಸಾಮಾಜಿಕವಾಗಿ ಮಾತನಾಡಿದ್ದನ್ನು ತಿರುಚಿಕೊಂಡು ಮಾಧ್ಯಮಗಳು, ಬಿಜೆಪಿ ಆರೋಪ ಮಾಡುತ್ತಿದೆ. ಪ್ಯಾಪುಲರ್ ಪ್ರಂಟ್ ಆಫ್ ಇಂಡಿಯಾವನ್ನು ನಾನು ಹೇಗೆ ವಿರೋಧಿಸುತ್ತೇನೋ ಹಾಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ವಿರೋಧಿಸುತ್ತೇನೆ ಎಂದು ದಿನೇಶ್ ಅಮಿನಮಟ್ಟು ಹೇಳಿದ್ದಾರೆ.[ನನ್ನ ಮಗ ಉಗ್ರನಲ್ಲ]

ಅಮೀನಮಟ್ಟು ಹೇಳಿಕೆಗೆ ಸಾಮಾಜಿಕ ತಾಣದಲಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಬಿಜೆಪಿ ನಾಯಕ ಸುರೇಶ್ ಕುಮಾರ್ ಸಹ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಮೀನ್ ಮಟ್ಟು ಕುರಿತಾಗಿ ಹಲವು ಅನುಮಾನ ತೋಡಿಕೊಂಡಿದ್ದರು. ಇದೀಗ ಬಿಜೆಪಿ ರಾಜೀನಾಮೆ ನೀಡುವಂತೆ ಆಗ್ರಹ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reacting to BJP leaders' demand for Karnataka chief minister's media advisor Dinesh Amin Mattu resignation after he made a statement on the arrests of terror suspects, Mattu claimed that the party members had misconstrued his statement. BJP Karnataka spokesperson Suresh Kumar in a letter to CM on Monday reportedly said that Mattu had demoralised the recent arrests of terror suspects by security forces and that he had given "communal colour" to terrorism. Terming his statement as "dangerous" he said he must be removed as he was over-riding the interest of the government.
Please Wait while comments are loading...