BJP vs BJP ತಂಡದ ವಕ್ತಾರರ ಪಟ್ಟಿ ಬಿಡುಗಡೆ!

ಗುರುವಾರ BJPvsBJP ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ BJPvsBJP ತಂಡದ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು, ಮಾರ್ಚ್ 16; ಕರ್ನಾಟಕ ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆದರೆ ಆಡಳಿತಾರೂಢ ಪಕ್ಷ ಬಿಜೆಪಿಯಲ್ಲಿ ಆಂತರಿಕ ಕಲಹ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ ವಿಚಾರದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷವಾದ ಕಾಂಗ್ರೆಸ್ ಈ ಚರ್ಚೆಗೆ ಧ್ವನಿಗೂಡಿಸಿದೆ. ಸರಣಿ ಟ್ವೀಟ್‌ಗಳ ಮೂಲಕ ಪಕ್ಷದ ಒಳಜಗಳವನ್ನು ವ್ಯಂಗ್ಯವಾಡಿದೆ.

ಗುರುವಾರ BJPvsBJP ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ BJPvsBJP ತಂಡದ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಎದುರಾಳಿ ಪಕ್ಷದ ಆಂತರಿಕ ಕಚ್ಚಾಟದ ವಗ್ಗೆ ವ್ಯಂಗ್ಯವಾಡಿದೆ. ಬಿ. ವೈ. ವಿಜಯೇಂದ್ರ ಹಾವೇರಿಯಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಸಹ ಕಾಂಗ್ರೆಸ್ ಹಲವು ಟ್ವೀಟ್‌ಗಳನ್ನು ಮಾಡಿದೆ.

BJP vs BJP Karnataka Congress Released Spokespersons List

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'BSY ಟೀಕಿಸಲೆಂದು ಒಂದು ತಂಡವನ್ನೇ ಸಂತೋಷ ಕೂಟ ತಯಾರು ಮಾಡಿದೆ. ಆ ತಂಡದ ಪ್ರಮುಖ ವಕ್ತಾರರು ಯತ್ನಾಳ್, ಸಿಟಿ ರವಿ!. ಬಿಜೆಪಿಯಲ್ಲಿ BSY ನಾಯಕತ್ವವನ್ನು ಪ್ರಶ್ನಿಸುತ್ತಿರುವವರು ಯಾರು?. ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು ಶತಪ್ರಯತ್ನ ನಡೆಸುತ್ತಿರುವವರು ಯಾರು ಬಿಜೆಪಿ ಕರ್ನಾಟಕ?' ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ಕಾಂಗ್ರೆಸ್ 'ಸಂತೋಷ ಕೂಟ' ಎಂದು ಯಡಿಯೂರಪ್ಪ ವಿರೋಧಿಗಳನ್ನು ಕರೆಯುತ್ತದೆ. ಇದರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಹೆಸರುಗಳನ್ನು ಪಕ್ಷ ಉಲ್ಲೇಖ ಮಾಡುತ್ತದೆ. ಈಗ ವಸತಿ ಸಚಿವ ವಿ. ಸೋಮಣ್ಣ ಮತ್ತು ಬಿ. ವೈ. ವಿಜಯೇಂದ್ರ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಸಂತೋಷ ಕೂಟ ಎಂಬ ಪದವನ್ನು ಬಳಕೆ ಮಾಡಿದೆ, ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕೆ ಮಾಡಿದೆ.

BJP vs BJP Karnataka Congress Released Spokespersons List

ಈ ಹಿಂದೆಯೂ ಕಾಂಗ್ರೆಸ್ ಇದೇ ಮಾದರಿಯಲ್ಲಿ ಹಲವು ಟ್ವೀಟ್ ಮಾಡಿತ್ತು. 'ಕರ್ನಾಟಕದ ಬಿಜೆಪಿಯ ಮೇರು ನಾಯಕ BS Yediyurappa ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. BSY ಅವರ ರಾಜಕೀಯ ಜೀವನದ ಅರ್ಧ ಬದುಕು ಕಳೆಯದ ಅಮಿತ್ ಶಾ ಯಡಿಯೂರಪ್ಪನವರನ್ನು ಕಾಲ ಕಸದಂತೆ ನಿರ್ಲಕ್ಷಿಸಿದ್ದಾರೆ. ಸಂತೋಷ ಕೂಟದ ಆಟದಲ್ಲಿ BSY ದುರಂತ ನಾಯಕನಾಗಿದ್ದಾರೆ. ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಸಂಸ್ಕೃತಿ ಇದೇನಾ ಬಿಜೆಪಿ ಕರ್ನಾಟಕ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿತ್ತು.

ಬೀದಿ ರಂಪಾಟ; ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಕೆಲವು ದಿನಗಳ ಹಿಂದೆ ಸಂತೋಷ ಕೂಟ ಪದ ಬಳಸಿ ಬಿಜೆಪಿ ಟೀಕಿಸಿದ್ದರು. 'ಸ್ವಯಂ ಘೋಷಿತ ಶಿಸ್ತಿನ ಪಕ್ಷದ ಬೀದಿ ರಂಪಾಟ ರಾಜ್ಯದ ಜನರಿಗೆ ಮನರಂಜನೆಯ ಸಂತೋಷಕೂಟ ಏರ್ಪಡಿಸಿದೆ. ಸ್ವ ಪಕ್ಷದ ನಾಯಕರಿಗೆ ಬಿರುದು ಬಾವಲಿಗಳ ಸುರಿಮಳೆ ಆಗುತ್ತಿದೆ.ಇದೊಂದು ಟ್ರೇಲರ್ ಅಷ್ಟೇ, ಬತ್ತಳಿಕೆಯ ಬಾಣಗಳು ಮತ್ತಷ್ಟು ಸಂತೋಷ ಪಡಿಸುತ್ತದೆ ಕಾದು ನೋಡಿ. ಸರ್ಕಸ್ ಅಲ್ಲಿ ಪ್ರಾಣಿಗಳನ್ನ ತರಬೇತಿ ನೀಡಿ ಮೂಗುದಾರ ಹಾಕಿ ಮನರಂಜನೆ ಮಾಡಬಹುದು, ಅಪ್ಪಿತಪ್ಪಿ ಬಿಟ್ರೆ ಎಲ್ಲರನ್ನೂ ತಿಂದು ಹಾಕುತ್ತದೆ. ಬಿಜೆಪಿಯಲ್ಲಿ ಈಗಾಗುತ್ತಿರುವುದು ಅದೇ' ಎಂದು ಟೀಕಿಸಿದ್ದರು.

'ಕೊಲೆಗಡುಕತನ, ಪಿಂಪ್ ದಂಧೆ, ಹಫ್ತಾ ವಸೂಲಿ ತನ್ನವರನ್ನೂ ಬಿಡದೆ ತಿನ್ನುತ್ತಿದೆ. ಮೂಗುದಾರ ತಪ್ಪಿಯಾಗಿದೆ, ಹತೋಟಿಯಲ್ಲಿಡಲು ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ಮೇಲೆಲ್ಲಾ ತಳಕು-ಬಳಕು,ಒಳಗೆಲ್ಲ ಬರೀ ಹುಳುಕು-ಕೊಳಕು ನಾರುತ್ತಿದೆ. ಕಾಂಗ್ರೆಸ್ ತಟ್ಟೆಯಲ್ಲಿ ನೊಣ ಹುಡಕದೇ, ನಿಮ್ಮಲ್ಲಿ ಹೆಗ್ಗಣ ಬಿದ್ದು ವಿಲ ವಿಲ ಒದ್ದಾಡುತ್ತಿದೆ ಒಮ್ಮೆ ಕಣ್ಣಾಡಿಸಿ. ಸರ್ಕಾರ ಮ್ಯಾನೇಜ್ ಮಾಡುವ ಸಿಎಂ, ಪಕ್ಷದ ಮೇಲೆ ಹಿಡಿತವಿಲ್ಲದ ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ. ಸಿಎಂ ಆಗಲು ಎರಡುವರೆ ಸಾವಿರ ಕೋಟಿ ಹಣದ ಬೇಡಿಕೆ, ಮಂತ್ರಿಯಾಗಲು ಪಿಂಪ್ ಕೆಲಸ, ಸಿಡಿ ಬಿಡುಗಡೆಯ ಬೆದರಿಕೆ. ಮಾಜಿ ಸಿಎಂ ಮಗನ ದೃಷ್ಠವತಾರಗಳು. ಈ ಆರೋಪಗಳು ಕೇಂದ್ರದ ಮಾಜಿ ಮಂತ್ರಿ ಯತ್ನಾಳ್ ಸ್ವಪಕ್ಷದವರ ಮೇಲೆ ಎಗರಿ ಬಿದ್ದ ಪರಿ' ಎಂದು ಬಿಜೆಪಿ ಹಲವಾರು ಬೆಳವಣಿಗೆಗಳನ್ನು ಪಟ್ಟಿ ಮಾಡಿದದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+