BJP vs BJP: ಸ್ವಂತ ಕ್ಷೇತ್ರದ ಬಗ್ಗೆ ಯೋಚಿಸಿ ಆಮೇಲೆ ಪಕ್ಷ: ಯತ್ನಾಳ್ ಹೇಳಿದ್ದು ಯಾರಿಗೆ?
ಬೆಂಗಳೂರು, ಡಿಸೆಂಬರ್ 26: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಡಳಿತ ಪಕ್ಷ ಮೇಲೆ ಮುಗಿಬೀಳಬೇಕಾದ ವಿಪಕ್ಷ ಬಿಜೆಪಿ ಯಲ್ಲಿಯೇ ಅಸಮಾಧಾನ ಎದ್ದು ಕಾಣುತ್ತಿದೆ. ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ ಬಿಸಿ ಪಾಟಿಲ್ ಅವರಿಗೆ ಶಾಸಕರು ತಿರುಗೇಟು ನೀಡಿದ್ದಾರೆ. ಈ ಮೂಲಕ ಬಿಜೆಪಿ ವರ್ಸಸ್ ಬಿಜೆಪಿ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ.
ಹಿಂದಿನಿಂದಲೇ ಬಿಜೆಪಿಯಲ್ಲಿ ನೇರ ನಡೆಯಿಂದ, ಸ್ವಪಕ್ಷದವರ ನಡೆ, ನಿರ್ಧಾರ ಟೀಕಿಸುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುತಿಸಿಕೊಂಡವರು. ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು, ಅಸಮಾಧಾನ ಹೊರ ಹಾಕಿದ್ದರು. ಇದೀಗ ಇವರಿಬ್ಬರ ವಿರುದ್ಧ ಬಿಜೆಪಿ ಮಾಜಿ ಸಚಿವ ಬಿಸಿ ಪಾಟೀಲ್ ಲೇವಡಿ ಮಾಡಿದ್ದಾರೆ.

''ವಿಕೃತ ಮನಸುಗಳನ್ನು ಹೊಂದಿರುವಂತಹ ಬಿ.ಕೆ ಹರಿಪ್ರಸಾದ್ ಮತ್ತು ಬಸನಗೌಡ ಪಾಟೀಲ್ ಅವರು ಯತ್ನಾಳ್ ಇಬ್ಬರು ಸೇರಿದಂತೆ ಒಂದು ಪಕ್ಷ ಪ್ರಾರಂಭಿಸುವುದು ಒಳ್ಳೆಯದು ಎಂಬುದು ನನ್ನ ಭಾವನೆ'' ಎಂದು ಬಿಸಿ ಪಾಟೀಲ್ ಟ್ವೀಟ್ ಮೂಲಕ ಗುಡುಗಿದ್ದರು.
ಸ್ವಂತ ಕ್ಷೇತ್ರ ಬಗ್ಗೆ ಯೋಚಿಸಿ: ಯತ್ನಾಳ್
ಇದಕ್ಕೆ ತಿರುಗೇಟು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ''ತಮ್ಮ ಸ್ವಂತ ಕ್ಷೇತ್ರ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆನಂತರ ಯೋಚಿಸಬಹುದು'' ಎಂದು ಕಿಡಿ ಕಾರಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸುತ್ತಲೇ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಆಗಿದ್ದಾಗಲೂ ಸ್ವಪಕ್ಷದೊಳಗಿನ ರಾಜಕೀಯ ನಡೆ ಕುರಿತು ಯತ್ನಾಳ್ ಗುಡುಗಿದ್ದರು. ಲೋಕಸಭೆಯಲ್ಲಿ ಎಲ್ಲ ಕ್ಷೇತ್ರ ಗೆಲ್ಲದೇ ಒಂದೇ ಒಂದು ಕ್ಷೇತ್ರ ಸೋತರು ವಿಜಯೇಂದ್ರ ಸ್ಥಾನ ತೆರವುಗೊಳಿಸಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು. https://t.co/UH8ZtNQJOd
— Basanagouda R Patil (Yatnal) (@BasanagoudaBJP) December 26, 2023
ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ
ಇತ್ತೀಚೆಗೆ ಬಿಎಸ್ ಯಡಿಯೂರಪ್ಪ ಅವರು ಯತ್ನಾಳ್ ವಿರುದ್ಧ ದೂರು ಕೊಡಲ್ಲ ಎಂದಿದ್ದರು. ಇದಕ್ಕೂ ತಿರುಗೇಟು ಕೊಟ್ಟಿದ್ದ ಯತ್ನಾಳ್ ಅವರು ಅವರು ಮೊದಲೇ ಎಲ್ಲವನ್ನು ಮಾಡಿರುತ್ತಾರೆ. ಆದರೆ ಪಕ್ಷದಿಂದ ನನಗೆ ನೋಟಿಸ್ ಬಂದಿಲ್ಲ. ಹೀಗಾಗಿ ಈಗ ಅಂದುಕೊಂಡಂತೆ ಆಗಿಲ್ಲದ ಕಾರಣ ಹೀಗೆ ಹೇಳುತ್ತಿದ್ದಾರೆ. ಯಡಿಯೂರಪ್ಪ ಶಕುನಿ ಇದ್ದಂಗೆ ಎಂದು ಗುಡುಗಿದರು. ಇದು ಒಂದು ರೀತಿಯಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬುದನ್ನು ಎತ್ತಿ ತೋರಿಸುತ್ತದೆ.
ಇತ್ತ ಕಾಂಗ್ರೆಸ್ ನಲ್ಲಿ ಬಿಕೆ ಹರಿಪ್ರಸಾದ್ ಅವರು, ಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ದೂರು ಇಟ್ಟರು ಎನ್ನಲಾಗಿದೆ. ಇದೆಲ್ಲ ಕಾರಣದಿಂದ ಅವರು ನಾನು ಚೆಂಡಿನಂತೆ ತುಳಿದಷ್ಟು ಮೇಲೆ ಪುಟಿಯುತ್ತೇನೆ ಎಂದು ಹೇಳಿದ್ದರು.

ಸ್ವಪಕ್ಷದವರ ವಿರುದ್ಧ ಇಬ್ಬರು ವಾಗ್ದಾಳಿ
ಕೆಲವು ಸಂದರ್ಭಗಳಲ್ಲಿ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಈಡಿಗ ಸಮಾವೇಶ ನಡೆದಾಗಲು ಅವರು ಸಿಎಂ ಮೇಲೆ ಕಿಡಿ ಕಾರಿದ್ದರು. ಬ್ರಿಟಿಷ ಬೂಟು ನೆಕ್ಕುವವರಿಂದ ನಾವು ಏನು ಕಲಿಯಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಮಾತನಾಡಿದ್ದರು.
ಎರಡು ಪಕ್ಷದ ನಾಯಕರು ಸ್ವಪಕ್ಷದವರ ವಿರುದ್ಧವೇ ಮಾತನಾಡಿದ್ದಾರೆ. ಈ ಕಾರಣಕ್ಕೆ ಎಂಬಂತೆ ಬಿಸಿ ಪಾಟೀಲ್ ಅವರು ಇವರಿಬ್ಬರು ಸೇರಿಕೊಂಡು ಒಂದು ಪಕ್ಷ ಕಟ್ಟಿದ್ದರೆ ಉತ್ತಮ ಎಂದು ಲೇವಡಿ ಮಾಡಿದ್ದು, ಅದಕ್ಕೆ ಯತ್ನಾಳ್ ಅವರು ಮೊದಲು ಸ್ವಕ್ಷೇತ್ರ ಬಗ್ಗೆ ಯೋಚನೆ ಮಾಡಿ ಎಂದು ತಿಳಿಸಿದ್ದಾರೆ.












Click it and Unblock the Notifications