ಡಿಕೆಶಿಗೆ ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಖ್ ಐಕಾನ್: ಬಿಜೆಪಿ ಆರೋಪ

ಬೆಂಗಳೂರು, ಡಿಸೆಂಬರ್ 17 : ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಒಬ್ಬ ಐಕಾನ್‌ ಇದ್ದನೋ, ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ತಮಗೆ ಬೇಕಾದ ಒಬ್ಬ ಐಕಾನ್‌ನನ್ನು ಹುಡುಕಿಕೊಂಡಿದ್ದಾರೆ. ಅವನೇ ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಅಥವಾ ಡಿಕೆ ಶಿವಕುಮಾರ್ ಬ್ರದರ್‌ ಶಾರಿಖ್ ಅಂತಾ ಬಿಜೆಪಿ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೇ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುತ್ತಾರೆ. ಕಾರಣ ಇಷ್ಟೇ- ಉಗ್ರಗಾಮಿ ಮಸೂದ್ ಅಝರ್ ನನ್ನು ಜೀ ಎಂದು ಗೌರವಿಸಿದ ರಾಹುಲ್ ಗಾಂಧಿ ಯನ್ನು ಖುಷಿಪಡಿಸಲು ಈಗ ಡಿ.ಕೆ.ಶಿವಕುಮಾರ್ ಉಗರ ಗ್ರಾಮಿಗೇ ಕ್ಲೀನ್ ಚಿಟ್ ಕೊಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ದಿನಬೆಳಗಾದರೇ ಎಣ್ಣೆ ಸೀಗೇಕಾಯಿಯಂತೆ ಒಬ್ಬಬರ ಮೇಲೊಬ್ಬರು ಸಿಡಿದು ಬೀಳುತ್ತಿರುವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ. ಈಗ ಮತ್ತೆ ಒಂದಾಗಿರುವುದು ಒಂದೇ ಒಂದು ಉದ್ದೇಶಕ್ಕೆ. ಅದು ಶಾರಿಕ್‌ ಒಬ್ಬ ಅಮಾಯಕ ಎಂದು ತೋರಿಸಿ, ಅವರ ಮನೆಯ ನಾಲ್ಕು ವೋಟುಗಳನ್ನು ತೆಗೆದುಕೊಳ್ಳುವುದು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್‌ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು. ಈಗ ಡಿ.ಕೆ.ಶಿವಕುಮಾರ್ ಶಾರಿಕ್‌ನಂಥವನನ್ನು ಬೆಂಬಲಿಸಿ ಪಿಎಫ್‌ಐ ಭಾಗ 2ನ್ನು ಬೆಳೆಸುವ ಆಲೋಚನೆಯೇನಾದ್ರೂ ಇದ್ದರೆ ಬಿಡುವುದು ಒಳ್ಳೆಯದು. ಏಕೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅದನ್ನೂ ಬ್ಯಾನ್‌ ಮಾಡುತ್ತೆ ಎಂದು ಬಿಜೆಪಿ ಹೇಳಿದೆ.

BJP Slams D K Shivakumar Mangaluru Cooker Blast Case

ಕಾಂಗ್ರೆಸ್ ನಲ್ಲಿ ಕೇವಲ ಡಿ.ಕೆ ಶಿವಕುಮಾರ್ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆ ಶಿವಕುಮಾರ್ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೆಣದಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕಾಂಗ್ರೆಸ್‌ ಇದುವರೆಗೂ ಒಮ್ಮೆಯಾದರೂ ದೇಶದ ಪರವಾಗಿ ನಿಂತಿದೆಯಾ ಎಂದು ನೋಡಿದರೆ ಒಮ್ಮೆಯೂ ಇಲ್ಲ. ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೇಳಿದ್ರು, ಯೋಧರ ಸಾಮರ್ಥ್ಯ ಪ್ರಶ್ನಿಸಿದ್ರು, ಚೀನಾ ಜೊತೆ ವ್ಯವಹಾರ ಮಾಡಿದ್ರು ಹಾಗೂ ವಿದೇಶದಲ್ಲಿ ಭಾರತವನ್ನು ತೆಗಳಿದ್ರು, ಇಂಥವರಾ ದೇಶದ ಚುಕ್ಕಾಣಿ ಹಿಡಿಯ ಹೊರಟವರು? ಎಂದು ಪ್ರಶ್ನಿಸಿದೆ.

ದೇಶದ ಭದ್ರತೆಯ ವಿಚಾರದಲ್ಲೂ ಗಟ್ಟಿಯಾಗಿ ನಾವು ದೇಶದ ಪರ, ಉಗ್ರನನ್ನು ಬೆಂಬಲಿಸುವ ದರ್ದು ನಮಗೆ ಬಂದಿಲ್ಲ ಎಂದು ಹೇಳಲೂ ಆಗದ ಜನತಾ ದಳ ಕಾಂಗ್ರೆಸ್‌ನ ಬಿ ತಂಡವಲ್ಲದೇ ಇನ್ನೇನು? ಮತದಾರರು ನಿರ್ಧರಿಸಿದ್ದಾರೆ, ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಬೆಂಬಲಿಸಲು. ಹಾಗೇ, ಉಗ್ರರನ್ನು ಬೆಂಬಲಿಸುವ ಕಾಂಗ್ರೆಸ್‌'ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ‌ ಎಂದು ಬಿಜೆಪಿ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+