ಸುರಂಗದಲ್ಲಿ ರಸ್ತೆ ಮಾಡ್ಸೋರಂತೆ ಮೊದ್ಲು ರಸ್ತೆ ಗುಂಡಿ ಮುಚ್ಚಿ ಎಂದ ಬಿಜೆಪಿ!

ಸುರಂಗದಲ್ಲಿ ಆ ಮೇಲೆ ರಸ್ತೆ ಮಾಡ್ಸೋರಂತೆ ನಿಮ್ಮ ಯೋಗ್ಯತೆಗೆ ಮೊದ್ಲು ರಸ್ತೆ ಗುಂಡಿ ಮುಚ್ಚಿ ಎಂದು ಕಾಂಗ್ರೆಸ್‌ ಸರ್ಕಾರವನ್ನು ಬಿಜೆಪಿ ವ್ಯಂಗ್ಯವಾಡಿದೆ.ರಸ್ತೆ ಗುಂಡಿಗಳನ್ನು ಮುಚ್ಚದ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಡೆದಯನ್ನು ವಿರೋಧ ಪಕ್ಷವಾದ ಬಿಜೆಪಿ ವಿಡಿಯೋಗಳ ಮೂಲಕ ಟ್ರೋಲ್ ಮಾಡುತ್ತಿದೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ರಸ್ತೆ ಗುಂಡಿಗಳದ್ದೇ ಕಾರುಬಾರು. ಈ ಬಾರಿಯೂ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

BJP said to close the potholes before making the road in the tunnel

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ಕಾರುಬಾರು. ಈ ಬಾರಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ. ಎಲ್ಲಾ ರಸ್ತೆ ಗುಂಡಿಗಳನ್ನು ಕಾಲ ಮಿತಿಯಲ್ಲಿ ಮುಚ್ಚಲಾಗುತ್ತಿದೆ ಎಂದು ಹೇಳಿದ್ದರೂ, ಇನ್ನೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವಾಗಿಲ್ಲ.

ಬಿಜೆಪಿಯಿಂದ ಸರಣಿ ಟ್ರೋಲ್

ಕರ್ನಾಟಕದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಬಿಜೆಪಿ ಸರಣಿ ಟ್ರೋಲ್ ಮಾಡಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ವಿಫಲವಾಗಿರುವುದನ್ನು ವ್ಯಂಗ್ಯವಾಗಿ ತೋರಿಸಲಾಗಿದೆ.

ಉಡುಪಿಯಲ್ಲಿ ಯಮರಾಜ ಹಾಗೂ ಚಿತ್ರಗುಪ್ತ ವೇಷಧಾರಿಗಳು ಉಡುಪಿಯಲ್ಲಿರುವ ರಸ್ತೆ ಗುಂಡಿಯನ್ನು ಬಳಸಿ ಮಾಡಿರುವ ವ್ಯಂಗ್ಯ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಡಿಕೆಶಿಗೆ ಟಾಂಗ್ ಕೊಟ್ಟ ಬಿಜೆಪಿ

ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವಾಗ ಅಜ್ಜಿ - ಮೊಮ್ಮಗ ರಸ್ತೆಗುಂಡಿಯಿಂದ ಬೀಳುವ ಹಾಗೂ ಡಿಕೆಶಿ ಶಿವಕುಮಾರ್‌ ಅವರೊಂದಿಗೆ ಸಂಭಾಷಣೆ ನಡೆಸುವ ಮಾದರಿಯ ವ್ಯಂಗ್ಯ ವಿಡಿಯೋವೊಂದನ್ನು ಬಿಜೆಪಿ ಹಂಚಿಕೊಂಡಿದೆ.

ಆ ವಿಡಿಯೋದಲ್ಲಿ ರಸ್ತೆ ಗುಂಡಿಯಿಂದ ಅಜ್ಜ - ಮೊಮ್ಮಗ ಕೆಳಗೆ ಬೀಳುತ್ತಾರೆ. ಆಗ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ ವರೆಗೆ ಸುರಂಗ ಮಾರ್ಗ ಮಾಡ್ಸತೀನಿ ಈಗ ಬೇಜಾರ್ ಮಾಡ್ಕೋಬೇಡಿ ಎಂದು ಡಿಕೆಶಿ ಹೇಳುವಂತೆ (ಡಿಕೆಶಿ ಚಿತ್ರ) ಧ್ವನಿ ಸೇರಿಸಲಾಗಿದೆ. ಆಗ ಆ ಯುವಕ ಸುಮ್ಮೆ ಹೋಗ್ರಿ, ರಸ್ತೆ ಗುಂಡಿ ಮುಚ್ಚೋಕೆ ನಿಮಗೆ ಯೋಗ್ಯತೆ ಇಲ್ಲ. ಇನ್ನು ಸುರಂಗದಲ್ಲಿ ರಸ್ತೆ ಮಾಡಿಸ್ತೀರಾ ಎಂದು ಪ್ರಶ್ನೆ ಮಾಡುವುದಿದೆ.

ಇದರ ಮುಂದುವರಿದ ಭಾಗವಾಗಿ ಅಜ್ಜಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವಂತೆ. ಕಂಡಿದ್ದೀನಿ ನಿನ್ನೂ - ನಿನ್ನ ಸರ್ಕಾರನ ನಡಿಯ್ಯಯ ಸುಮ್ನೆ ಎನ್ನುವ ಸಂಭಾಷಣೆ ಇದೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.

ಅಯೋಗ್ಯ ಸರ್ಕಾರವೆಂದ ಬಿಜೆಪಿ

ರಾಜ್ಯದಲ್ಲಿ ಅಯೋಗ್ಯ ಸರ್ಕಾರವಿದೆ ಎಂದು ಬಿಜೆಪಿ ಹೇಳಿದೆ. ರಸ್ತೆ ಗುಂಡಿಯ ಬಗ್ಗೆ ಮಾಡಿರುವ ವ್ಯಂಗ್ಯ ವಿಡಿಯೋವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿಯು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಒಂದೇ ಒಂದು ಗುಂಡಿ ಮುಚ್ಚಲು ಕೈಲಾಗದಷ್ಟು ಅಸಮರ್ಥವಾಗಿದೆ. ಈ ಅಯೋಗ್ಯ ಕಾಂಗ್ರೆಸ್‌ ಸರ್ಕಾರ ಎಂದು ಮೂದಲಿಸಿದೆ.

ರಾಜ್ಯದ ತುಂಬಾ ಯಮ ಸ್ವರೂಪಿ ಗುಂಡಿಗಳದ್ದೇ ಹಾವಳಿ ಹೆಚ್ಚಾಗಿದೆ. ಗುಂಡಿಗಳ ನಡುವೆ ಜನರು ರಸ್ತೆ ಹುಡುಕುವಂತಾಗಿದೆ. ಆದರೆ ಭ್ರಷ್ಟ @siddaramaiah ಸರ್ಕಾರ ಜಮೀನು ನುಂಗುವಲ್ಲೇ ಕಾಲಹರಣ ಮಾಡುತ್ತಿದೆ ಎಂದಿದೆ.

ಅಲ್ಲದೇ ರಸ್ತೆ ಗುಂಡಿಗೆ ಸಂಬಂಧಿಸಿದಂತೆ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+