ಸಿದ್ದರಾಮಯ್ಯ ಅವರೇ, ಕದ್ದ ಮಾಲನ್ನು ಹಿಂತಿರುಗಿಸಿದರೆ ಕಳ್ಳ ನಿರಪರಾಧಿ ಆಗುತ್ತಾನೆಯೇ: ಹೇಳಿದ್ಯಾರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣ ಬೇತಾಳ ಬೆನ್ನು ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಸಿದ್ದರಾಮಯ್ಯ ಅವರ ಹಳೇಯ ವಿಡಿಯೋಗಳೇ ಅವರಿಗೆ ಮುಳುವು ಹಾಗೂ ತಿರುಗುಬಾಣವಾಗುತ್ತಿದೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಮಾತನಾಡಿದ್ದ ಮಾತುಗಳನ್ನು ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷವಾದ ಬಿಜೆಪಿ ನೆನಪಿಸುತ್ತಿದೆ. ಅಲ್ಲದೇ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ ಎಂದೂ ಪ್ರಶ್ನೆ ಮಾಡಿದೆ.
ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಶ್ನೆ ಮಾಡಿದೆ. ಮುಡಾ ಹಗರಣದ ಕಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಿ.ಎಂ ಅವರ ಪತ್ನಿ 14 ಸೈಟುಗಳನ್ನು ಹಿಂದಿರುಗಿಸುವ ಮಾತನಾಡಿದ್ದರು. ಈ ವಿಷಯವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿವೆ. ಏನು ತಪ್ಪೇ ಮಾಡಿಲ್ಲ ಎಂದಾದರೆ, ಈಗ ಮುಡಾ ಸೈಟುಗಳನ್ನು ಹಿಂದಿರುಗಿಸುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿವೆ. ಕಳ್ಳತನ ಮಾಡಿದ ಕಳ್ಳ ಆ ವಸ್ತುವನ್ನು ಹಿಂದಕ್ಕೆ ಕೊಟ್ಟ ಮಾತ್ರಕ್ಕೆ ಕಳ್ಳನಾದವನು ನಿರಪರಾಧಿಯಾಗಲು ಸಾಧ್ಯವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಬಿಜೆಪಿಯು, ಎರಡು ನಾಲಿಗೆಯ ಬುರುಡೆರಾಮಯ್ಯ ಎಂದು ಟ್ವೀಟ್ ಮಾಡಿದೆ. ಮುಂದುವರಿದು, ಮುಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನು ಹಿಂತಿರುಗಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಅಂದಿನ ಹೇಳಿಕೆಯನ್ನು ಮತ್ತೆ ನೆನಪಿಸಿಕೊಳ್ಳಿ. ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುವನೇ ಹೇಳಿ ಎಂದು ಪ್ರಶ್ನೆ ಮಾಡಿದೆ. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲೇಬೇಕು ಎಂದೂ ಬಿಜೆಪಿ ಆಗ್ರಹಿಸಿದೆ.
ಎರಡು ನಾಲಿಗೆಯ ಬುರುಡೆರಾಮಯ್ಯ !
— BJP Karnataka (@BJP4Karnataka) October 1, 2024
ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ @siddaramaiah ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನು ಹಿಂತಿರುಗಿಸುವ ನಿರ್ಧಾರ ಮಾಡಿದ್ದಾರೆ.
ಸಿದ್ದರಾಮಯ್ಯನವರೇ ನಿಮ್ಮ ಅಂದಿನ ಹೇಳಿಕೆಯನ್ನು ಮತ್ತೆ ನೆನಪಿಸಿಕೊಳ್ಳಿ.
ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ… pic.twitter.com/tDL41cDFtx
ಸಿದ್ದರಾಮಯ್ಯ ಹಳೆಯ ವಿಡಿಯೋ ಟ್ವೀಟ್: ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುವನೇ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿರುವ ಬಿಜೆಪಿಯು ಈ ಸಂಬಂಧ ಈ ಹಿಂದೆ ಇದೇ ರೀತಿಯ ವಿಷಯವೊಂದಕ್ಕೆ ಸಿದ್ದರಾಮ್ಯ ಅವರು ನೀಡಿದ್ದ ಪ್ರತಿಕ್ರಿಯೆಯ ವಿಡಿಯೋವನ್ನು ಟ್ವೀಟ್ ಮಾಡಿ ಕಾಲೆಳೆದಿದೆ. ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು, ಕಾನೂನು ಬಾಹಿರವಾಗಿ ಸೈಟು ತೆಗೆದುಕೊಂಡಿದ್ದಾರೆ ಹಾಗೂ ಹಣವನ್ನೂ ತೆಗೆದುಕೊಂಡಿದ್ದಾರೆ.
ತಪ್ಪು ಮಾಡದೆ ಇದ್ದಿದ್ದರೆ ಯಾಕೆ ಸೈಟ್ ಹಿಂದಿರುಗಿಸುತ್ತಿದ್ದರು, ಕಾನೂನು ಬಾಹಿರವಾಗಿರುವುದರಿಂದಲೇ ಸೈಟು ಹಿಂದಿರುಗಿಸುತ್ತಿದ್ದಾರೆ ಎಂದು ಹೇಳಿರುವುದು ಆ ವಿಡಿಯೋದಲ್ಲಿ ಇದೆ. ಅಲ್ಲದೇ ಅವರೇ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿರುವುದು ಆ ವಿಡಿಯೋದಲ್ಲಿ ಇದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿಯ ಟ್ವೀಟ್‌ಗೆ ಜನ ಪ್ರತಿಕ್ರಿಯಿಸುತ್ತಿದ್ದಾರೆ. ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂದು ಟೀಕಿಸಿದ್ದರು.












Click it and Unblock the Notifications