ತಬ್ಲಿಘಿ ನಾಯಕರು ಮತ್ತು ಬುದ್ಧಿಜೀವಿಗಳಿಗೆ ಬಿಜೆಪಿಯ 13 ಪ್ರಶ್ನೆಗಳು
ಬೆಂಗಳೂರು, ಮೇ 11: "ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ, ದೇಶದ ಕಾನೂನು ಪಾಲನೆ ಮಾಡದೇ, ನಿಯಮಗಳನ್ನು ಉಲ್ಲಂಘಿಸಿ ಇಂದು ದೇಶಾದ್ಯಂತ ಮತ್ತು ನಮ್ಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡಲು ಈ ತಬ್ಲಿಘಿ ಜಮಾತ್‌ಗಳೇ ಕಾರಣ" ಎಂದು ಬಿಜೆಪಿ ನಾಯಕ ಎನ್. ರವಿ ಕುಮಾರ್ ಆರೋಪಿಸಿದರು.
ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಿದರು. "ಈ ಸಮಾಜದ ನಾಯಕರು ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂದಾಗದಿದ್ದರೆ, ಜಾಗೃತಿ ಮೂಡಿಸದಿದ್ದರೆ ದೇಶಾದ್ಯಂತ ಭಾರಿ ಅನಾಹುತವಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಈ ಬಗ್ಗೆ ತಬ್ಲಿಘಿಗಳು, ಅಜ್ಮೀರಿಗಳು ಮತ್ತು ಇವರ ಸಮಾಜದ ನಾಯಕರುಗಳು ಹಾಗೂ ಬುದ್ಧಿಜೀವಿಗಳು ಈಗ ಮೌನ ಮುರಿಯಬೇಕಾಗಿದೆ" ಎಂದು ಹೇಳಿದ ರವಿ ಕುಮಾರ್ ತಬ್ಲಿಘಿ ನಾಯಕರು, ಬುದ್ಧಿಜೀವಿಗಳ ಮುಂದೆ 13 ಪ್ರಶ್ನೆಗಳನ್ನು ಇಟ್ಟರು.
"ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆ ಮುಗಿದು ಹೋಯಿತು ಪರವಾಗಿಲ್ಲ. ಆದಾದ ನಂತರ ಕೊರೊನಾ ವೈರಸ್ ಜಗತ್ತನ್ನೇ ಆವರಿಸುವ ಸಂದರ್ಭದಲ್ಲಿ ಒಂದು ದೇಶದ ಪ್ರಜೆಗಳಾಗಿ ನಡೆದುಕೊಳ್ಳಬೇಕಾದ ಜವಾಬ್ದಾರಿ ಬಗೆ ಇದೇನಾ?" ಎಂದು ರವಿ ಕುಮಾರ್ ಪ್ರಶ್ನೆ ಮಾಡಿದರು.

ಬಿಜೆಪಿಯ ಪ್ರಶ್ನೆಗಳು
* ದೇಶದ ಪ್ರಜೆಗಳಾದ ಮೇಲೆ ಆ ಆದೇಶದ ರಕ್ಷಕರು ಆಗಬೇಕೆ ವಿನಃ ಭಕ್ಷಕರು ಆಗಬಾರದು. ತಪ್ಪು ಮಾಡಿದಾಗ ತಿದ್ದಿ ಹೇಳುವುದು ತಿಳುವಳಿಕೆ ಇರುವ ಜ್ಞಾನಿಗಳು, ನಾಯಕರು. ತಿದ್ದಿ ಹೇಳುವುದು ಅವರ ಕರ್ತವ್ಯವಾಗಬೇಕು. ಏಕೆ ಯಾವುದೇ ನಾಯಕರು, ಪ್ರಮುಖರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ, ಉದ್ದೇಶವೇನು?
* ತಬ್ಲಿಘಿಯ ರಾಷ್ಟ್ರೀಯ ಮುಖಂಡ ಮೌಲಾನಾ ಸಾದ್ ಕಾಂಧ್ವಾಲಿ ಆತನೇ ನಾನು ಕೊರೊನಾ ವೈರಸ್‌ನ ಪರೀಕ್ಷೆಗೆ ಒಳಪಡುವುದಿಲ್ಲ ಎಂದರೆ ಏನರ್ಥ?. ಇವರಿಗೆ ಸಾಮಾನ್ಯ ಜ್ಞಾನವೂ ಇಲ್ಲವೇ?, ಇದರಿಂದ ಸಮುದಾಯಕ್ಕೆ ಯಾವ ಸಂದೇಶ ತಲುಪುತ್ತದೆ ಎಂಬ ಪರಿಜ್ಞಾನ ಬೇಡವೇ?.
* 130 ಕೋಟಿ ಜನರನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ನಮ್ಮ ದೇಶದ ಆರೋಗ್ಯ ವಾರಿಯರ್ಸ್‌ಗಳಾದ ಡಾಕ್ಟರ್, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರು ಯೋಧರಂತೆ ಕೆಲಸ ಮಾಡುತ್ತಿರುವಾಗ ಅವರ ಮೇಲೆಯೇ ಹಲ್ಲೆ ಮಾಡುವುದು, ಉಗುಳುವುದು, ಅವಮಾನಿಸುವುದು ಅತ್ಯಂತ ಮೃಗೀಯ ವರ್ತನೆ. ಇದು ಅಜ್ಞಾನವೋ, ಅಹಂಕಾರವೋ?.

ನಾಯಕರು ಏಕೆ ಕೈಕಟ್ಟಿ ಕುಳಿತಿದ್ದಾರೆ?
* ಪಾದರಾಯನಪುರದ ಪುಂಡರು ಎಸಗಿದ ದೇಶದ್ರೋಹವನ್ನು ಇಡೀ ನಾಡೇ ಖಂಡಿಸಿದೆ. ಇದು ಅಲ್ಲಿಗೇ ನಿಂತಿಲ್ಲ. ಟಿಪ್ಪು ನಗರಕ್ಕೂ ಹಬ್ಬಿದೆ. ಕಲಬುರಗಿಗೂ ಹಬ್ಬಿದೆ. ಇದನ್ನು ನೋಡಿ ಸಮುದಾಯದ ನಾಯಕರು ಏಕೆ ಕೈ ಕಟ್ಟಿ ಕುಳಿತಿದ್ದಾರೆ?.
* ಮೊದಲನೇ ಸುತ್ತಿನಲ್ಲಿ ತಬಿಘ್ಲಿಗಳು ಎಸಗಿದ ಘಟನೆಗಳಿಂದ ಇಡೀ ಸಮುದಾಯವನ್ನೇ ದೂಷಿಸಬಾರದು ಎಂದು ಹೇಳಿದ್ದು ಸರಿಯಾಗಿದೆ. ಆದರೆ, ಈಗ ಲಾಕ್ ಡೌನ್ ಸಡಿಲವಾದ ಮೇಲೆ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ತಬ್ಲಿಘಿ, ಅಜ್ಮೀರಿಗಳು ಕಳ್ಳರಂತೆ ತಪ್ಪಿಸಿಕೊಂಡು ಕೊರೊನಾ ಹೆಚ್ಚಾಗುವುದಕ್ಕೆ ಕಾರಣವಾಗುತ್ತಿದ್ದಾರಲ್ಲ ಇವರೇನು ಮನುಷ್ಯರೋ ಅಥವ ಏನು?.
* ತಬ್ಲಿಘಿಗಳ ವರ್ತನೆಯನ್ನು ಕಂಡು ಸ್ವತಃ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ 2 ಬಾರಿ ಮುಖಂಡರ ಜೊತೆ ಮಾತುಕತೆ ನಡೆಸಿದರು. ಪತ್ರ ಬರೆದರು, ಸಕ್ರಿಯರಾಗಿ ಕೊರೊನಾ ತಡೆಗಟ್ಟುವಲ್ಲಿ ಸಹಕರಿಸಿ ಎಂದು ವಿನಂತಿ ಮಾಡಿದರು. ಆದರೆ, ನಡೆಯುತ್ತಿರುವುದೇನು?.

ಬುದ್ಧಿಜೀವಿಗಳು ಏಕೆ ತುಟಿ ಬಿಚ್ಚುತ್ತಿಲ್ಲ
* ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿರುವ ತಬ್ಲಿಘಿಗಳು, ಈಗ ಅಜ್ಮೀರಿಗಳು ಇವರ ಬಗ್ಗೆ ಪ್ರಗತಿಪರರು, ಬುದ್ದಿಜೀವಿಗಳು ತುಟಿ ಬಿಚ್ಚುತ್ತಿಲ್ಲ ಏಕೆ?. ಕೊರೊನಾ ಹೆಚ್ಚಾಗಲು ನೇರ ಕಾರಣ ತಬ್ಲಿಘಿಗಳು ಎಂದು ಹೇಳುತ್ತಿರುವುದಕ್ಕೆ ಮಾಧ್ಯಮಗಳನ್ನು ದೂಷಿಸುವುದು ಸರಿಯಲ್ಲ. ಸ್ವತಃ ಸಮುದಾಯದ ಮುಖಂಡರು ಕೊರೊನಾ ವೈರಸ್ ಹಬ್ಬುವಿಕೆಯನ್ನು ತಡೆಗಟ್ಟಿ ಸಕ್ರಿಯರಾಗದಿದ್ದರೆ ಇನ್ನು ಭಾರಿ ಬೆಲೆ ತೆರಬೇಕಾಗುತ್ತದೆ. ಇಡೀ ರಾಜ್ಯ, ದೇಶ, ಸಾಮಾಜಿಕ, ಆರ್ಥಿಕ ಅನಾಹುತಕ್ಕೆ ಕಾರಣವಾಗುತ್ತದೆ.
* ಇಂದು ವೈರಸ್ ಹೆಚ್ಚುತ್ತಿರುವುದರಿಂದ ನೇರವಾಗಿ ತಕ್ಷಣಕ್ಕೆ ಪರಿಣಾಮ ಬೀರುತ್ತಿರುವುದು ಅಂದೇ ದುಡಿದು ತಿನ್ನಬೇಕಾದ ಕಾರ್ಮಿಕರು, ಕೂಲಿಗಳು, ಆಟೋ/ಕ್ಯಾಬ್ ಡ್ರೈವರ್, ಗಾರ್ಮೆಂಟ್ಸ್, ಸಣ್ಣ-ಪುಟ್ಟ ವ್ಯಾಪಾರಿಗಳು. ಇಡೀ ದೇಶದ ಅರ್ಥ ವ್ಯವಸ್ಥೆಯೇ ಅಲ್ಲೋಕ ಕಲ್ಲೋಲವಾಗಿದೆ. ಇದನ್ನು ನೋಡಿ ತಬ್ಲಿಘಿಗಳಿಗೆ ಕರುಳು ಮಿಡಿಯುತ್ತಿಲ್ಲವೇ?.
* ಸಮಾಜದವರನ್ನು ಕೊರೊನಾ ವೈರಸ್‌ಗೆ ತಳ್ಳಿ ಅವರನ್ನು ಸಾಯಿಸಿ ತಾನೂ ಸಾಯುವ ಈ ಮನೋಧರ್ಮಕ್ಕೆ ಏನೆನ್ನಬೇಕು?. ಇದು ಜಿಹಾದ್ ಅಂತೂ ಅಲ್ಲ. ಸಂಚೂ ಅಲ್ಲ. ಹಾಗಾದರೆ ಏನು?. ಪ್ರಗತಿಪರರು ಬುದ್ಧಿಜೀವಿಗಳು ಮೌನವಾಗಿರುವವರು ಬಾಯಿ ಬಿಡಬೇಕು ಅಲ್ಲವೇ?.

ತಿಳುವಳಿಕೆ ತಬ್ಲಿಘಿಗಳಿಗೇಕೆ ಇಲ್ಲ?
* ಕೊರೊನಾ ವೈರಸ್ ಹರಡುತ್ತಿರುವ ಪುಂಡರು, ಅವಿದ್ಯಾವಂತರು, ಅನಕ್ಷರಸ್ತರು ಎನ್ನುತ್ತಿದ್ದಾರೆ. ಹಾಗಾದರೆ ಇನ್ನಿತರೆ ಸಮುದಾಯಗಳಲ್ಲಿನ ಅನಕ್ಷರಸ್ತರು, ಅವಿದ್ಯಾವಂತರು, ಏಕೆ ಕೊರೊನಾ ವೈರಸ್ ಹಬ್ಬಿಸುತ್ತಿಲ್ಲ. ಇವರಿಗೆ ಇರುವ ಜವಾಬ್ದಾರಿ, ತಿಳುವಳಿಕೆ ತಬ್ಲಿಘಿಗಳಿಗೇಕೆ ಇಲ್ಲ?.
* ಒಂದು ವಿಚಾರವನ್ನಂತೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಒಂದು ಬಾರಿ, ಎರಡು ಬಾರಿ ಈ ರೀತಿ ತಪ್ಪು ಮಾಡುವವರನ್ನು ಕ್ಷಮಿಸಬೇಕು. ಆದರೆ ಪದೇ ಪದೇ ಅದೇ ತಪ್ಪನ್ನು ಮಾಡಿದರೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು.
* ವಿದೇಶಗಳಿಂದಲೂ ಆಗಮಿಸಿ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಬಿಟ್ಟು 9000 ಜನರ ತಬ್ಲಿಘಿ ಸಮಾವೇಶದಿಂದ ಕೊರೊನಾ ಭಾರಿ ವ್ಯಾಪಕತೆ ಪಡೆದಿದೆ ಎನ್ನುವುದು ಗಮನಾರ್ಹ. ಇದರಲ್ಲಿ 1890 ಜನ ತಬ್ಲಿಘಿಗಳು 500 ಜನ ಅಜ್ಮೀರಿಗಳು ತಲೆಮರೆಸಿಕೊಂಡು ಕಳ್ಳರಂತೆ ತಪ್ಪಿಸಿಕೊಂಡವರು ಈಗ 2ನೇ ಹಂತದಲ್ಲಿ ಕೊರೊನಾ ಹಬ್ಬಿಸುತ್ತಿದ್ದಾರೆ. ಈಗಲೂ ಕಳ್ಳರಂತೆ ತಪ್ಪಿಸಿಕೊಂಡು ನಗರಗಳಲ್ಲಿ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಜಿಲ್ಲೆಗಳ ಗಡಿಯಲ್ಲಿ ಸರಿಯಾದ ಕಾವಲು ಹಾಕಬೇಕು ಮತ್ತು ಸರ್ಕಾರದ ಅಧೀನದಲ್ಲಿಯೇ ಕ್ವಾರಂಟೈನ್ ಮಾಡಬೇಕು.












Click it and Unblock the Notifications