ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಲ್ಲದ ಬಿಜೆಪಿ ಪೋಸ್ಟರ್ ವಾರ್
ಕಳೆದ ಕೆಲವು ದಿನಗಳಿಂದ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಮುಂದುವರೆಸಿದೆ. ದಿನಂ ಪ್ರತಿ ಸರ್ಕಾರ ಎಡವಿತ್ತಿರುವುದನ್ನು ವಿರೋಧ ಪಕ್ಷವಾದ ಬಿಜೆಪಿ ಎತ್ತಿ ತೋರಿಸುತ್ತಿದೆ. ಇದನ್ನೇ ಮಂಗಳವಾರವೂ ಬಿಜೆಪಿ ಇದರ ಮುಂದುವರೆದ ಭಾಗಾವಾಗಿ ಹಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದರೆ, ವಿರೋಧ ಪಕ್ಷ ಅದರ ಆಡಳಿತವನ್ನು ಪ್ರಶ್ನೆ ಮಾಡುತ್ತಿದೆ. ಚುನಾವಣೆಗೂ ಮುನ್ನ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಮಾತು ತಪ್ಪಿದೆ ಎಂದು ಬಿಜೆಪಿ ತನ್ನ ಪೋಸ್ಟರ್ ವಾರ್‌ನಲ್ಲಿ ಹೇಳಿಕೊಂಡಿದೆ.

ಬಿಜೆಪಿ ಆರೋಪವೇನು?
ಕಾಂಗ್ರೆಸ್ ಹತ್ತು ಕೆಜಿ ಅಕ್ಕಿ ಬೇಕೋ ಬೇಡ್ವೋ ಅಂತ ಬಣ್ಣ ಬಣ್ಣದ ಕಾಗೆ ಹಾರಿಸಿದೆ. ಈಗ ಹತ್ತು ಕೆಜಿ ಅಕ್ಕಿನೂ ಕೊಡದೆ, ಹಣವೂ ನೀಡದೆ ಕನ್ನಡಿಗರಿಗೆ ಪಂಗನಾಮ ಹಾಕಿದೆ ಎಂದು ಬಿಜೆಪಿ ಕಿಡಿ ಕಾರಿದೆ. ಅಲ್ಲದೆ ಸಿಎಂ ಬರೀ ಓಳು ಬಿಟ್ಟಿದ್ದೇ ಆಯಿತು ಎಂದು ತಿಳಿಸಿದೆ. ಪೋಸ್ಟರ್‌ನಲ್ಲಿ ಬಿಜೆಪಿ ಕಾಂಗ್ರೆಸ್ ಸರ್ಕಾರ ಪಾಪರ್ ಎಂಬುದನ್ನು ಬಿಂಬಿಸುವ ರೀತಿ ತೋರಿಸಿದೆ.
ಗೊಬ್ಬರದ ಬೆಲೆ ದುಬಾರಿ
ರೈತ ಪರ ಸರ್ಕಾರ ನಡೆಸುವುದಾಗಿ ತಿಳಿಸಿದ್ದ ಕಾಂಗ್ರೆಸ್ ಮಾತು ತಪ್ಪಿದೆ ಎಂದು ಬಿಜೆಪಿ ತನ್ನ ಮತ್ತೊಂದು ಪೋಸ್ಟರ್‌ನಲ್ಲಿ ತಿಳಿಸಿದೆ. ರೈತರಿಗೆ ಬಿತ್ತನೆ ಬೀಜಗಳು ದುಪಟ್ಟು ಎಂಬ ಪತ್ರಿಕೆಯ ಕಟ್ಟಿಂಗನ್ನು ಹಾಕಿ ಪೋಸ್ಟರ್ ಮಾಡಿರುವ ಬಿಜೆಪಿ, ರೈತರಿಗೆ ಸಂಕಷ್ಟ ಮತ್ತಷ್ಟು ಎಂದು ಬಿಂಬಿಸಿದೆ.

ಡೆತ್ ನೋಟ್‌ನಲ್ಲಿ ಸಚಿವರ ಹೆಸರು
ದಕ್ಷ ಅಧಿಕಾರಿಯೊಬ್ಬರು ತಮ್ಮ ಸಾವಿಗೆ ಸಚಿವರ ಹೆಸರನ್ನು ಡೆತ್ ನೋಟ್ ಬರೆದಿಟ್ಟರೂ, ಇದುವರೆಗೂ ಭಂಡ ಸರ್ಕಾರ ಸಚಿವರ ರಾಜೀನಾಮೆ ಪಡೆಯುವುದಿರಲಿ ಕನಿಷ್ಠ ಮೃತರ ಕುಟುಂಬಕ್ಕೆ ಸಾಂತ್ವನ ಸಹ ಹೇಳಿಲ್ಲ ಎಂದು ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪೋಸ್ಟರ್ ವಾರ್ ಮಾಡಿದೆ.
ಜೆಡಿಎಸ್ ವಾರ್‌ನಲ್ಲಿ ಭಾಗಿ
ಇದನ್ನೇ ಜೆಡಿಎಸ್ ಸಹ ಅಸ್ತ್ರವನ್ನಾಗಿಸಿಕೊಂಡು ಪೋಸ್ಟರ್ ವಾರ್‌ಗೆ ಮುಂದಾಗಿದೆ. ಜನರ ಕೆಲಸವನ್ನು ದೇವರ ಕೆಲಸದಂತೆ ನಿಷ್ಠೆ, ಶ್ರದ್ಧೆಯಿಂದ ಮಾಡಬೇಕಿದ್ದ ಕರ್ತವ್ಯವನ್ನು ಸರಕಾರ ಮರೆತುಬಿಟ್ಟಿದೆ ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ 3 ತಿಂಗಳಿಂದ ಅನ್ನಭಾಗ್ಯ ಹಣ ಸ್ಥಗಿತ!, ಬಿತ್ತನೆ ಬೀಜ ದರ ಶೇ.60-70ರಷ್ಟು ಏರಿಕೆ, ✓ಕೊಪ್ಪಳದಲ್ಲಿ ಸರ್ಜರಿಗೆ 3 ತಿಂಗಳು ಕಾಯಬೇಕು, ಕಾವೇರಿಗೆ ಸರ್ವರ್ ಸಮಸ್ಯೆ, ಕೃಷಿ ಸಚಿವರೇಎಲ್ಲಿದ್ದಿರಪ್ಪ, ಎಂಬ ಪ್ರಶ್ನೆಗಳನ್ನು ಎತ್ತಿದೆ.












Click it and Unblock the Notifications