ಬೆಂಗಳೂರು ಮೋದಿ ಸಭೆಗೆ ಬಹ್ಮಾವರದಲ್ಲಿ ಕಲರವ!
ಬೆಂಗಳೂರು, ನ. 12: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬರಲು ಇನ್ನು 5 ದಿನ ಬಾಕಿ ಇದೆ. ಈ ಮಧ್ಯೆ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯಾದ್ಯಂತ ನಮೋ ಅಭಿಮಾನಿಗಳು ನವೋಲ್ಲಾಸದಿಂದ ಸಜ್ಜಾಗುತ್ತಿದ್ದಾರೆ.
ಒಬ್ರಲ್ಲ ನೂರೊಂದು ಮೋದಿಗಳು!: ಉಡುಪಿಯ ಬಹ್ಮಾವರದಲ್ಲಿ ನರೇಂದ್ರ ಮೋದಿ ಅಭಿಮಾನಿಗಳು ನಿನ್ನೆ ವಿಭಿನ್ನವಾಗಿ ತಯಾರಿ ನಡೆಸಿದರು. ಲೋಕಸಭಾ ಚುನಾವಣೆಯತ್ತ ಕೇಂದ್ರೀಕರಿಸಿಯೇ ಮೋದಿ ಅವರ ವೇಶಭೂಷಣವೂ ಇತ್ತೀಚೆಗೆ ಒಂದು ಸ್ಪಷ್ಟ ರೂಪ ಪಡೆದಿದೆ. ಬಿಳಿ ಗಡ್ಡ, ತಲೆಗೆ ಮುಂಡಾಸು, ಕುರ್ತಾ, ಪೈಜಾಮ ಮೋದಿ ಟ್ರೇಡ್ ಮಾರ್ಕ್ ಆಗಿದೆ. ಗಮನಾರ್ಹವೆಂದರೆ ಇತ್ತೀಚೆಗೆ ಜೀವ ಬೆದರಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೋದಿ ಎದೆಗವಚ ಧರಿಸುತ್ತಿದ್ದಾರೆ. (ಚಿತ್ರ: Ajith S Shetty Kiradi)

ಇಂತಿಪ್ಪ ಮೋದಿಯನ್ನು ಯಥಾವತ್ತಾಗಿ ಧಾರಣೆ ಮಾಡಿಕೊಂಡ ನೂರೊಂದು ಕಟ್ಟರ್ ಅಭಿಮಾನಿಗಳು ನಿನ್ನೆ ಅವರಂತೆ ಉಡುಪನ್ನು ಧರಿಸಿ, ಬಹ್ಮಾವರದಲ್ಲಿ ಕಲರವ ಮಾಡಿದರು. ಪ್ರಮುಖ ಬೀದಿಯಲ್ಲಿ ಪಥಸಂಚಲ ನಡೆಸಿದರು. ನೋಡುಗರ ಕಣ್ಮನ ಸೆಳೆದರು. ಮಾಜಿ ಶಾಸಕ ರಘುಪತಿ ಭಟ್ ಅವರು ಈ ಮೆರವಣಿಗೆಯನ್ನು ಉದ್ಘಾಟಿಸಿದರು.
'ಸಾಮಾನ್ಯವಾಗಿ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಮತ್ತು ಫಲಿತಾಂಶ ಪ್ರಕಟವಾದಾಗ ಅಭಿಮಾನಿಗಳಲ್ಲಿ ಸಂತಸ/ ಹರ್ಷ ಕಂಡುಬರುತ್ತದೆ. ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಈಗಾಗಲೇ ದೇಶಾದ್ಯಂತ ನರೇಂದ್ರ ಮೋದಿ ಅಲೆ ಆವರಿಸಿದೆ. ಮತ್ತು ದಿನೇ ದಿನೇ ಇದು ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದೆ' ಎಂದು ರಘುಪತಿ ಭಟ್ ತಿಳಿಸಿದರು.












Click it and Unblock the Notifications