ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿ 'ಸಂತೋಷ ಕೂಟ'ದ ರಹಸ್ಯ ಬಿಚ್ಚಿಟ್ಟ ಕಾಂಗ್ರೆಸ್!

|
Google Oneindia Kannada News

ಬೆಂಗಳೂರು, ಜನವರಿ 13; ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯವಿದೆ. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎಂಬ ಬಣವಿದೆ ಎಂದು ಬಿಜೆಪಿ ಟೀಕೆ ಮಾಡುತ್ತದೆ.

ಆದರೆ ಕರ್ನಾಟಕ ಕಾಂಗ್ರೆಸ್ ಬಿಜೆಪಿಯಲ್ಲಿನ ಬಣ ರಾಜಕೀಯದ ರಹಸ್ಯ ಬಿಚ್ಚಿಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, 'ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವವನ್ನು ಕೊನೆಗಾಣಿಸುವಲ್ಲಿ 'ಸಂತೋಷ ಕೂಟ' ಯಶಸ್ವಿಯಾಗಿ ಮುಂದುವರೆದಿದೆ. ಅದಕ್ಕೆ ಮೋದಿ ಅವರೂ ಕೈಜೋಡಿಸಿದ್ದಾರೆ!' ಎಂದು ಹೇಳಿದೆ.

ಕಟೀಲ್ + ಸಂತೋಷ್, ಬೊಮ್ಮಾಯಿ + ಜೋಶಿ; ಕಾಂಗ್ರೆಸ್ ಲೆಕ್ಕಾಚಾರವೇನು? ಕಟೀಲ್ + ಸಂತೋಷ್, ಬೊಮ್ಮಾಯಿ + ಜೋಶಿ; ಕಾಂಗ್ರೆಸ್ ಲೆಕ್ಕಾಚಾರವೇನು?

#ModiMouna ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಧಾರವಾಡದಲ್ಲಿ ಉದ್ಘಾಟನೆಗೊಂಡ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಡೆಗಣಿಸಲಾಗಿದೆ ಎಂದು ದೂರಿದೆ.

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಮತ್ತೆ ಕಡೆಗಣನೆ ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಮತ್ತೆ ಕಡೆಗಣನೆ

BJP Neglected BS Yediyurappa Says Congress

'ಇಂದು ಕರ್ನಾಟಕದಲ್ಲೇ ಇದ್ದ ಪ್ರಧಾನಿ ಕಾರ್ಯಕ್ರಮದತ್ತ BS Yediyurappa ಅವರ ಸುಳಿಯಲೇ ಇಲ್ಲ. ಪ್ರೊಟೊಕಾಲ್ ನೆಪದಲ್ಲಿ ಕನಿಷ್ಠ ಪಕ್ಷ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಲಾದರೂ BSY ಅವರಿಗೆ ಅವಕಾಶ ಮಾಡಿಕೊಡಲಿಲ್ಲ BJP Karnataka. BSY ಅವರನ್ನು ನೆನಸಿಕೊಳ್ಳದ #ModiMouna ವು #BSYmuktaBJP ಅಭಿಯಾನದ ಮುಂದುವರೆದ ಭಾಗವಾಗಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕ ಚುನಾವಣೆ 2023: ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಅವರನ್ನು ಕೆಣಕದಿರುವುದು ಬಿಜೆಪಿಗೆ ಒಳ್ಳೆಯದು!ಕರ್ನಾಟಕ ಚುನಾವಣೆ 2023: ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಅವರನ್ನು ಕೆಣಕದಿರುವುದು ಬಿಜೆಪಿಗೆ ಒಳ್ಳೆಯದು!

'ಸ್ವತಃ ತಮ್ಮದೇ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್‌ ಕಡೆಗಣಿಸಿ, ಕೊನೆಯ ಆಹ್ವಾನ ನೀಡಲಾಯಿತು. ಯಡಿಯೂರಪ್ಪ ಅವರಿಗೆ ಕನಿಷ್ಠ ಆಹ್ವಾನವನ್ನು ನೀಡಲಿಲ್ಲ, ಗಣನೆಗೂ ತೆಗೆದುಕೊಂಡಿಲ್ಲ' ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

'ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವವನ್ನು ಕೊನೆಗಾಣಿಸುವಲ್ಲಿ 'ಸಂತೋಷ ಕೂಟ' ಯಶಸ್ವಿಯಾಗಿ ಮುಂದುವರೆದಿದೆ. ಅದಕ್ಕೆ ಮೋದಿ ಅವರೂ ಕೈಜೋಡಿಸಿದ್ದಾರೆ! #ModiMouna' ಎಂದು ಟ್ವೀಟ್‌ ಮಾಡಿದೆ.

ಜಗದೀಶ್‌ ಶೆಟ್ಟರ್ ಕಡೆಗಣನೆ; ಕರ್ನಾಟಕ ಕಾಂಗ್ರೆಸ್‌ ಗುರುವಾರ ಟ್ವೀಟ್ ಮಾಡಿ ಕರ್ನಾಟಕ ಬಿಜೆಪಿಯ ಬಣ ರಾಜಕೀಯ ಬಿಚ್ಚಿಟ್ಟಿತ್ತು. 'ಹುಬ್ಬಳ್ಳಿಯಲ್ಲೇ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿದೆ' ಎಂದು ಆರೋಪಿಸಿತ್ತು.

'ಅವರದ್ದೇ ಕ್ಷೇತ್ರದಲ್ಲಿ ಅವರನ್ನೇ ಕಡೆಗಣಿಸುತ್ತಿರುವುದು ಇದು ಎರಡನೇ ಬಾರಿ. BSY ವಿರುದ್ಧ ಕಟೀಲ್ + ಸಂತೋಷ್ ಜೋಡಿಯಾದರೆ, ಶೆಟ್ಟರ್ ವಿರುದ್ಧ ಬೊಮ್ಮಾಯಿ + ಜೋಶಿ ಜೋಡಿಯಾಗಿದ್ದಾರೆ! #BJPvsBJP' ಎಂದು ಬಿಜೆಪಿಯನ್ನು ಟೀಕಿಸಿತ್ತು.

yediyurappa

ಕಾಂಗ್ರೆಸ್ ಮತ್ತೊಂದು ಟ್ವೀಟ್‌ನಲ್ಲಿ, 'ಸ್ಯಾಂಟ್ರೋ ರವಿಗೆ ಸಿಎಂ ಪುತ್ರ "ಸ್ವೀಟ್ ಬ್ರದರ್" ಸಿಎಂ ಬೊಮ್ಮಾಯಿ "ಅಪ್ಪಾಜಿ" ಇಷ್ಟೊಳ್ಳೆ ನೆಂಟಸ್ತಿಕೆ ಇದ್ದರೂ ಸ್ಯಾಂಟ್ರೋ ರವಿ ನನಗೆ ತಿಳಿದೇ ಇಲ್ಲ ಎನ್ನುವ Basavaraj Bommai ಅವರೇ, ನಿಮ್ಮ ಮಾತನ್ನು ದೇವರು ಮೆಚ್ಚುತ್ತಾನಾ?!' ಎಂದು ಕಾಂಗ್ರೆಸ್ ಕೇಳಿದೆ.

'Narendra Modi ಅವರೇ, ಚೀಫ್ ಬ್ರೋಕರ್ ನೇಮಿಸಿ ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿರುವ ಬಗ್ಗೆ ಮೌನವೇಕೆ?. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸ್ಯಾಂಟ್ರೋ ರವಿಯ ಗಾಡ್ ಫಾದರ್! ಆತನ ಪ್ರೀತಿಯ "ಅಪ್ಪಾಜಿ" ಬೊಮ್ಮಾಯಿಯವರಿಗೆ ಸ್ಯಾಂಟ್ರೋ ರವಿಯ ಮೆಸೇಜ್‌‌ಗಳಿಗೆ ರಿಪ್ಲೇ ಮಾಡಲು ಸಮಯವಿದೆ, ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯವಿಲ್ಲ! ನರೇಂದ್ರ ಮೋದಿ ಅವರೇ, ಒಮ್ಮೆ ಸಿಎಂ ಮಾನಸ ಪುತ್ರ ಸ್ಯಾಂಟ್ರೋ ರವಿಯ ಸಾಧನೆಗಳನ್ನು ಗಮನಿಸಿ. #ModiMouna' ಎಂದು ಕಾಂಗ್ರೆಸ್‌ ಹೇಳಿದೆ.

'ಗೃಹಸಚಿವರ ವರ್ಗಾವಣೆ ಆದೇಶ ಪತ್ರವೊಂದಕ್ಕೆ ಸ್ಯಾಂಟ್ರೋ ರವಿ ಸಂಭ್ರಮಿಸಿದ್ದಾನೆ. ಆತನ ವರ್ಗಾವಣೆ ದಂಧೆಯಲ್ಲಿ ಗೃಹಸಚಿವ Araga Jnanendra ಅವರ ಸಂಪೂರ್ಣ ಸಹಬಾಗಿತ್ವ, ಸಹಕಾರವಿರುವುದು ಸ್ಪಷ್ಟ. BJP Karnataka ಸರ್ಕಾರದ ಭ್ರಷ್ಟಾಚಾರಕ್ಕೆ ಖುಲ್ಲಂಖುಲ್ಲಾ ಸಾಕ್ಷ್ಯವಿದ್ದರೂ 'ನಾ ಖಾನೆದುಂಗಾ' ಎನ್ನುವ #ModiMouna ಏಕೆ?' ಎಂದು ಟ್ವೀಟ್ ಮೂಲಕ ಚಾಟಿ ಬೀಸಿದೆ.

English summary
In a tweet Karnataka Congress said that BJP has neglected former chief minister B.S. Yediyurappa at 26th national youth festival at Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X