ಮೋದಿ ಆಗಮನಕ್ಕೂ ಮುನ್ನವೇ ರಾಜ್ಯಕ್ಕೆ ನಡ್ಡಾ ಆಗಮನ!
ಬೆಂಗಳೂರು, ಜೂನ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 20ಕ್ಕೆ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ನರೇಂದ್ರ ಮೋದಿ ಆಗಮನಕ್ಕೂ ಮುನ್ನವೇ ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜೂನ್ 18ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಬಿಜೆಪಿ ಹೈಕಮಾಂಡ್ ನಡೆ ಮತ್ತು ಚಿತ್ತ ಚುನಾವಣೆಗಳನ್ನು ಗೆಲ್ಲುವ ಕಡೆಗೆ ಗಮನವನ್ನು ಕೇಂದ್ರಿಕರಿಸುತ್ತದೆ. ಚುನಾವಣೆಗೂ ಮುನ್ನ ರಾಜ್ಯದ ಜನರ ಮೂಡ್ ಯಾವ ಪಕ್ಷದ ಕಡೆಯಿದೆ. ಜನರನ್ನು ಹೇಗೆ ತಮ್ಮ ಪಕ್ಷದೆಡೆಗೆ ಸೆಳೆಯಬಹುದು ಎಂಬದನ್ನು ತನ್ನದೇ ಸರ್ವೇಗಳ ಮೂಲಕ ತಿಳಿದುಕೊಳ್ಳುತ್ತದೆ. ಬಿಜೆಪಿ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿರುವುದರಿಂದ ಶಾಸಕರಲ್ಲಿಯೂ ಸಂಪುಟಕ್ಕೆ ಸೇರುವ ಆಸೆ ನನಸಾಗುತ್ತಾ ಎಂದು ಎದುರು ನೋಡುತ್ತಿದ್ದಾರೆ.
ಬಿಬಿಎಂಪಿಯ ಚುನಾವಣೆಯು ಸಮೀಪಿಸುತ್ತಿರುವುದರಿಂದ ಬಿಜೆಪಿ ಅಧ್ಯಕ್ಷ ರಾಜ್ಯ ಭೇಟಿ ಬಹಳ ಮಹತ್ವವನ್ನು ಪಡೆದಿದೆ. ಚುನಾವಣೆ ಹೊಸ್ತಿಲಲ್ಲಿ ಬೆಂಗಳೂರು ಶಾಸಕರಿಗೆ ಸಂಪುಟದಲ್ಲಿ ಭರ್ತಿಯೋ, ಸಚಿವಗಿರಿ ಒಲಿಯಲಿದೆಯೋ ಎಂದು ಕೆಲವು ಶಾಸಕರು ಕಾತುರವಾಗಿದ್ದಾರೆ.

ಬಿಜೆಪಿಯ ಒಬಿಸಿ ಯುವ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ
ಬಿಜೆಪಿಯ ಒಬಿಸಿ ಯುವ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ ವರ್ಗ ಇದೇ 16 ರಿಂದ 18ರವರೆಗೂ ಯಲಹಂಕದ ರಮಡಾ ಹೊಟೇಲ್‌ನಲ್ಲಿ ನಡೆಯಲಿದೆ. ಮೂರು ದಿನಗಳು ನಡೆಯಲಿರುವ ಒಬಿಸಿ ಯುವಮೋರ್ಚಾ ಶಿಬಿರದಲ್ಲಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳು, ಮೋರ್ಚಾ ರಾಜ್ಯಾಧ್ಯಕ್ಷರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಜೆ. ಪಿ. ನಡ್ಡಾ, ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಚಿತ್ರದುರ್ಗಕ್ಕೆ ತೆರಳಲಿರುವ ಜೆಪಿ ನಡ್ಡಾ
ಕೋಟೆನಗರಿ ಚಿತ್ರದುರ್ಗ ಮುರುಘಾ ಮಠದಲ್ಲಿ ಜೂನ್ 18ರಂದು ರಾಜ್ಯಮಟ್ಟದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಮುರುಘಾ ಮಠಕ್ಕೆ ಜೂನ್ 18 ಮಧ್ಯಾಹ್ನ ಭೇಟಿಯಾಗಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಜೆಪಿ ನಡ್ಡಾ ಬೇಟಿಯಾಗಿ ಆಶೀರ್ವಾದವನ್ನು ಪಡೆಯಲಿದ್ದಾರೆ.












Click it and Unblock the Notifications