ಪಕ್ಷಾಂತರ: ರಾಜಕೀಯ ನಿವೃತ್ತಿ ಪಡೆಯುತ್ತೇನೆ ಹೊರತು ಪಕ್ಷ ಬಿಡಲ್ಲ: ಮುನಿರತ್ನ
ಬೆಂಗಳೂರು, ಆಗಸ್ಟ್ 16: ರಾಜ್ಯ ರಾಜಕೀಯದಲ್ಲಿ ಚುನಾವಣೆ ಆಗಿ ಸರ್ಕಾರ ರಚನೆ ಆದ ಬಳಿಕವು ಪಕ್ಷಾಂತರ ಮತ್ತೆ ಸದ್ದು ಮಾಡುತ್ತಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ 17 ಶಾಸಕರ ಪೈಕಿ ಕೆಲವು ಮರಳಿ ಗೂಡು ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಮಾಜಿ ಸಚಿವ ಬಿಜೆಪಿ ನಾಯಕ ಮುನಿರತ್ನ ಅವರು, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಹೊರತು, ಕಾಂಗ್ರೆಸ್ ಸೇರಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಸುದ್ದಿಗಾರರ ಜೊತೆಗೆ ಬುಧವಾರ ಮಾತನಾಡಿದ ಅವರು, ಪಕ್ಷ ತೊರೆದು ಬಿಜೆಪಿ ಸೇರಿದ್ದ 17 ಮಂದಿ ಪೈಕಿ ಯಾರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂದು ನನಗೆ ಗೊತ್ತಿಲ್ಲ. ಆದರೆ ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಹೊರತು ಕಾಂಗ್ರೆಸ್ ಗೆ ಹೋಗುವುದಿಲ್ಲ. ನನಗೆ ಕಾಂಗ್ರೆಸ್ ಅಗತ್ಯವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುನಿರತ್ನ ಬೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ಅವರ ಮನೆಗೆ ಯಾರು ಹೋಗಿದ್ದರು?. ಕಳ್ಳತನದಿಂದ ಯಾರಾದರೂ ಹೋಗಿದ್ದರಾ? ಇಲ್ಲವೇ ಬುರ್ಕಾ ಹಾಕಿಕೊಂಡು ಹೋದ್ದರಾ ಎಂದು ಹೇಳಲಿ ಎಂದು ತಿರುಗೇಟು ನೀಡಿದರು. ಕ್ಷೇತ್ರದ ವಿಚಾರ ಬಗ್ಗೆ ಮಾತಾಡಿದ್ದನ್ನು ರಾಜಕೀಯವಾಗಿ ಡಿಕೆ ಶಿವಕುಮಾರ್ ಅವರು ಬಳಸಿಕೊಳ್ಳೋದು ಬೇಡ ಎಂದರು.
ನಾನು ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಸೇರಿದ್ದ 17 ಜನರಲ್ಲಿ 16 ಜನ ಹೋಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ನಾನಂತೂ ಬಿಜೆಪಿಯಲ್ಲಿಯೇ ಇರುತ್ತೇನೆ. ಹಾಗಂತ ನನಗೆ ಡಿಕೆ ಸಹೋದರ ಬಗ್ಗೆ ದ್ವೇಷ ಇಲ್ಲ.

ಬಿಜೆಪಿ ಏಕವಚನ ಬಳಸಿಲ್ಲ: ಮುನಿರತ್ನ
ಆರ್‌ಆರ್ ನಗರ ಕ್ಷೇತ್ರದಲ್ಲಿ ರಾಜಕೀಯವಾಗಿ ಡಿಕೆ ಸಹೋದರರು ನನ್ನನ್ನು ಸೋಲಿಸಲು ಪ್ರಯತ್ನಿಸಿದವರು. ಬಿಜೆಪಿಯಲ್ಲಿ ನಮನ್ನು ಗೌರವದಿಂದ ಕಾಣುತ್ತಿದ್ದಾರೆ. ಪಕ್ಷ ಸೇರಿದವರಲ್ಲಿ ಒಬ್ಬರಿಗೂ ಏಕವಚನ ಬಳಸಿ ಯಾರೂ ಮಾತನಾಡಿಲ್ಲ. ಒಬ್ಬ ಸಣ್ಣ ವ್ಯಕ್ತಿಯೂ ಬನ್ನಿ ಹೋಗಿ, ತಾವು ಅಂತ ಗೌರವದಿಂದ ನಡೆಸಿಕೊಂಡಿದ್ದಾರೆ. ನಮಗೆ ಬಿಜೆಪಿಯಲ್ಲಿ ಗೌರವ ಸಿಕ್ಕಿದೆ. ಈಶ್ವರಪ್ಪನವರ ಹೇಳಿಕೆ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿಸಿದರು.
ನಮಗೆ ಬಿಜೆಪಿಯೇ ಭವಿಷ್ಯ, ಬಿಜೆಪಿಯ ಚಿನ್ಹೆಯೇ ಆಧಾರ. ನಾನು ಬಿಜೆಪಿಯಲ್ಲಿ ಉಳಿಯುತ್ತೇನೆ ಇದೇ ನನ್ನ ಗಟ್ಟಿ ನೀರ್ಧಾರ ಎಂದು ಅವರು ಪುನರುಚ್ಚರಿಸಿದರು.
ಅವ್ಯವಹಾರ: ತಿರುಚಿ ವರದಿ ಬರೆಯದಂತೆ ಆಗ್ರಹ
ಎಲ್ಲರಿಗೂ ಒಂದೇ ನ್ಯಾಯ ಇರುವಂತೆ ಬಿಬಿಎಂಪಿ ಕಾಮಗಾರಿಗಳ ತನಿಖೆ ನ್ಯಾಯಯುತ ಆಗಲಿ. ಅಧಿಕಾರಿಗಳು ತಿರುಚಿ ವರದಿ ಬರೆಯಬಾರದು. ನನ್ನ ಕ್ಷೇತ್ರ ಆರ್ ಆರ್ ನಗರದಲ್ಲಿ ಅವ್ಯವಹಾರ ಆಗಿದೆ ಅಂತ ಅಧಿಕಾರಿಗಳು ತಿರುಚಿ ಬರೆದರೆ, ಆ ದಾಖಲೆ ಮುಂದೆ ಅವರಿಗೇ ಮುಳ್ಳಾಗುತ್ತದೆ. ಆದ್ದರಿಂದ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ಮಾಡಿ ತನಿಖೆ ಮಾಡಲಿ ಎಂದು ಮುನಿರತ್ನ ಆಗ್ರಹಿಸಿದರು.
ಬೆಂಗಳೂರಿನಿಂದ ಶೇಕಡಾ 70ರಷ್ಟು ಕೂಲಿ ಕಾರ್ಮಿಕರು ವಲಸೆ ಹೋಗಿದ್ದಾರೆ. ನಗರದಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿವೆ
ಅನುದಾನ ಬಿಡುಗಡೆ ಮಾಡಿಲ್ಲ. ಈಗಿರುವ ಅಧಿಕಾರಿಗಳೇ ಕಾಮಗಾರಿಗಳನ್ನು ಪ್ರಮಾಣೀಕರಿಸಿದ್ದಾರೆ. ಈಗ ಅದೇ ಅಧಿಕಾರಿಗಳು ಮರುತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಎರಡು ಕಂತಿನಲ್ಲಿ ಅನುದಾನ ಬಿಡುಗಡೆ ಆಗಬೇಕಿತ್ತು, ಆದರೆ ಆಗಿಲ್ಲ.
ಬಿಬಿಎಂಪಿಯಲ್ಲಿ ಈಗಾಗಲೇ 3000 ಕೋಟಿ ಅನುದಾನ ಇದೆ, 2000 ಕೋಟಿ ತೆರಿಗೆ ಸಂಗ್ರಹ ಆಗಿದೆ. ಹೀಗಿದ್ದರೂ ಸಹ
ಆದರೂ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ಮಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ಅವರು ಆರೋಪಿಸಿದರು.
ಒಳ್ಳೆಯದಾಗುವುದಿದ್ದರೆ ಹೋಗಲಿ: ಮುನಿರತ್ನ
ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದರೆ ಅವರನ್ನು ನಾನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಅವರಿಗೇ ಒಳ್ಳೆಯದು ಆಗುತ್ತದೆ ಎಂದು ಅನಿಸಿದರೆ ಅವರು ಹೋಗಲಿ. ಗೃಹ ಸಚಿವ ಪರಮೇಶ್ವರ ಅವರು ಪಕ್ಷಕ್ಕೆ ಬಂದರೆ ಲಾಸ್ಟ್ ಬೆಂಚ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಿದ್ದರೆ ಹೋಗಲಿ. ನಾವು ಈಗ ಬಿಜೆಪಿಯಲ್ಲಿ ಮೊದಲ ಬೆಂಚ್ ಎಂದು ಅವರು ಟಾಂಗ್ ನೀಡಿದರು.
ಕಾಂಗ್ರೆಸ್ ಹೋಗಿ ಲಾಸ್ಟ್ ಬೆಂಚ್ ಲ್ಲಿ ಕುಳಿತರೆ ಮೊದಲ ಬೆಂಚ್ ಗೆ ಬರೋಕೆ ಇನ್ನೂ 20 ವರ್ಷ ಆಗಲಿದೆ. ಅಲ್ಲಿಗೆ 85 ವರ್ಷ ಆಗಲಿದ್ದು, ಈಗಾಗಲೇ ಕೆಲವರಿಗೆ 65 ವರ್ಷ ಆಗಿದೆ ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ಶಾಸಕರಿಗೂ ಅನುದಾನ ಸಿಗುತ್ತಿಲ್ಲ ಎಂಬ ವಿಚಾರ, ಕಾಂಗ್ರೆಸ್ ಶಾಸಕರಿಗೆ ಸರ್ಕಾರ ಇದೆ, ಸಚಿವರು ಇದ್ದಾರೆ. ಹೀಗಿದ್ದಾಗ ಶಾಸಕರಿಗೆ ಏಕೆ ಅನುದಾನ ಎಂದು ಅವರು ಪ್ರಶ್ನಿಸಿದರು. ಅನುದಾನ ಪಡೆದು ಟ್ರಾನ್ಸ್‌ಫರ್ ಮಾಡ್ಕೊಂಡು ಟೈಂ ಪಾಸ್ ಮಾಡುತ್ತಿದ್ದಾರೆ. ಈವರೆಗೆ ಯಾರಾದರೂ ಒಬ್ಬರು ಅನುದಾನ ಕೇಳಿದ್ದಾರಾ?. ನಮಗೆ ಅನುದಾಣ ಕೊಡದಿದ್ದರೂ ಪರಿವಾಗಿಲ್ಲ. ಬೆಂಗಳೂರಿನ 12 ಜನ ಶಾಸಕರಿಗೆ ಆದ್ರೂ ಅನುದಾನ ಕೊಡಿ ಎಂದು ಅವರು ಹೇಳಿದರು.












Click it and Unblock the Notifications