'ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ, ಅವನು ಲಿಂಗಾಯತನೇ ಅಲ್ಲ'
ಕಲಬುರಗಿ, ಮಾರ್ಚ್ 13: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ನಾಯಕರ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದ ಬೆನ್ನಲ್ಲೇ ನಿರಂತರವಾಗಿ ಯತ್ನಾಳ್ ವಾಗ್ದಾಳಿ ನಡೆಸುತ್ತಿದ್ದಾರೆ.
ಹೌದು, ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನ ಸರಿ ಪಡಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ರೆ, ಇತ್ತ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಕುರಿತು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ ಹಾಗೂ ಅವನು ಲಿಂಗಾಯತನೇ ಅಲ್ಲ ಎಂದು ಹೇಳಿದ್ದು, ಯಡಿಯೂರಪ್ಪ ಅವರ ಹಿಂದೆ ಕೆಲವು ಸ್ವಾಮಿಜಿಗಳಿದ್ದಾರೆ. ಹಣ ನೀಡುತ್ತಾನೆ ಅಂತಹ ಸ್ವಾಮೀಜಿಗಳು ಆತನಿಗೆ ತತಾಸ್ಥು ಅಂತಾರೆ. ಈ ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಇನ್ನಷ್ಟು ಬಂಡವಾಳ ಬಯಲು ಮಾಡುತ್ತೆನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆಯ ಮೂವರು ಹಿಂದು ಸಂಸದರಿಗೆ ಟಿಕೆಟ್ ಕೈ ತೊಪ್ಪೊ ವಿಚಾರದ ಕುರಿತು ಮಾತನಾಡಿದ ಅವರು, ಈ ಹಿಂದೆ ನನ್ನನ್ನು ಸೋಲಿಸೊಕೆ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಹಣ ಕಳುಹಿಸಿದ್ದ. ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬ ಮಗ ಕ್ಯಾಬಿನೆಟ್ ಮಂತ್ರಿಯಾಗಬೇಕು, ಇನ್ನೊಬ್ಬ ಮಗ ಮುಖ್ಯಮಂತ್ರಿಯಾಗಬೇಕು. ಇನ್ನೂ ಅವರ ಮನೆಯ ಕೆಲವು ಚಿಳ್ಳಿ ಮಿಳ್ಳಿ ಸದಸ್ಯರು ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಸದಸ್ಯರಾಗಬೇಕು. ಇದು ಮಾಜಿ ಸಿಎಂ ಯಡಿಯೂರಪ್ಪ ಅವರ ಕೊನೆಯ ಕನಸು ಎಂದು ಯತ್ನಾಳ್ ಅವರು ಯಡಿಯೂರಪ್ಪ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪೂಜ್ಯ ತಂದೆ - ಮಗ ಇಬ್ಬರೂ ಬರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸೊದೆ ಅವರ ದಂಧೆಯಾಗಿದೆ. ಹುಟ್ಟಿಸಿದವ ಮಾತ್ರ ನಮಗೆ ಅಪ್ಪಾಜಿ ಆಗುತ್ತಾನೆ, ಬೇರೆಯವರೆಲ್ಲ ಯಾಕಾಗುತ್ತಾರೆ. ತಾನು ಎಲ್ ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರ ಕಾಲಿಗೆ ಬಿದ್ದಿಲ್ಲ. ಒಂದಷ್ಟು ಜನರನ್ನು ಬೆನ್ನಿಗೆ ಕಟ್ಟಿಕೊಂಡು ತಾನು ಸಮಾಜದ ಉದ್ಧಾರಕ ಎಂದು ಹೇಳುವವ ನಾಯಕ ಅನಿಸಿಕೊಳ್ಳಲಾರ, ಲಿಂಗಾಯತರಲ್ಲಿ ಯಾವುದೇ ಉಪಜಾತಿಗಳಿಲ್ಲ, ಲಿಂಗಾಯತರೆಲ್ಲ ಒಂದೇ ಎಂದು ಅವರು ಹೇಳಿದರು.












Click it and Unblock the Notifications