ಅಪ್ಪನಿಗೆ ಹುಟ್ಟಿದ್ರೆ CD ಬಿಡುಗಡೆ ಮಾಡ್ಲಿ: ಯತ್ನಾಳ್ ಸವಾಲ್ ಹಾಕಿದ್ದು ಯಾರಿಗೆ?
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಿ.ಡಿ ಸದ್ದು ಮಾಡತೊಡಗಿದೆ. ಈ ಬಾರಿ ಸಿ.ಡಿ ಸುಳಿಯಲ್ಲಿ ಮುನ್ನೆಲೆ ಬಂದಿರುವವರು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್. ಹೌದು ಮುಸ್ಲಿಂ ಮುಖಂಡರು ಯತ್ನಾಳ್ ಅವರ ಸಿ.ಡಿ ರಿಲೀಸ್ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಯತ್ನಾಳ್ ಅವರೂ ಕೌಂಟರ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ಖಾದ್ರಿ ಎಂಬ ಒಬ್ಬ ವಕ್ಫ್ ಆಸ್ತಿ ಲೂಟಿಕೋರ, ಹಿಂದೆ ಜಿಲ್ಲೆಯಿಂದ ಗಡೀಪಾರಾಗಿದ್ದವನೊಬ್ಬನು ನಾವು ವಕ್ಫ್ ಆಸ್ತಿಯ ಲೂಟಿಯ ಬಗ್ಗೆ ಪ್ರತಿಭಟನೆಗೆ ಮುಂದಾಗಿರುವಾಗ ನನ್ನ ಸಿ.ಡಿ ಬಿಡುಗಡೆ ಮಾಡುತ್ತೀನಿ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ನಾನು ಹೇಳಿದ್ದೆ. ಅವರ ಅಪ್ಪನಿಗೆ ಯಾರಾದರರೂ ಹುಟ್ಟಿರುವವರು ಸಿ.ಡಿ ಬಿಡುಗಡೆ ಮಾಡಲಿ. ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಇಂತಹ ಅಯೋಗ್ಯರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿರುವುದನ್ನೂ ಗಮನಿಸಿದ್ದೇನೆ. ಈಗಾಗಲೇ ಮಾನಹಾನಿ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ ಎಂದು ಯತ್ನಾಳ್ ಕೆಂಡವಾಗಿದ್ದಾರೆ.
ಸಿ.ಡಿ ಬಗ್ಗೆ ಹೇಳಿದ್ಯಾರು?: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಮ್ಮನೆ ರಾಜಕೀಯ ಮಾಡಿಕೊಂಡಿದ್ರೆ ಸರಿ. ಇಲ್ಲದಿದ್ರೆ ಯತ್ನಾಳ್ ಅವರ ಸಿಡಿ ರಿಲೀಸ್ ಮಾಡ್ತೀವಿ ಎಂದು ಮುಸ್ಲಿಂ ನಾಯಕರು ವಾರ್ನಿಂಗ್ ಕೊಟ್ಟಿದ್ದಾರೆ. ವಿಜಯಪುರದಲ್ಲಿ ಮಾತನಾಡಿರುವ ವಕೀಲ ಎಸ್.ಎಸ್.ಖಾದ್ರಿ, ಅಲ್ಲಿನ ಮಾಜಿ ಕಾರ್ಪೊರೇಟರ್ ಅಬ್ದುಲ್ ರಜಾಕ್ ಹೊರ್ತಿ, ಹಾಗೂ ಮುಸ್ಲಿಂ ಮುಖಂಡರು ಸಿಡಿ ರಿಲೀಸ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಶಾಸಕ ಯತ್ನಾಳ್ ಅವರ ಸಿ.ಡಿ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಯತ್ನಾಳ್ ಕೂಡ ಸವಾಲ್ ಹಾಕಿದ್ದಾರೆ.
ಸರ್ಕಾರದ ವಿರುದ್ಧವೂ ಯತ್ನಾಳ್ ಗುಡಗು: ದಸರಾ ಸ್ತಬ್ದಚಿತ್ರ ಪ್ರದರ್ಶನದ ವೇಳೆ ಪೆರಿಯಾರ್ ರಾಮಸ್ವಾಮಿ ಅವರ ಚಿತ್ರ ಬಳಕೆ ಮಾಡಿರುವುದು ಯತ್ನಾಳ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ದಸರಾ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪೆರಿಯಾರ್ ಅವರ ಚಿತ್ರವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರ ಆಸ್ತಿಕರ ಭಾವನೆ ಘಾಸಿಗೊಳಿಸಿದೆ ಎಂದು ಯತ್ನಾಳ್ ಖಂಡಿಸಿದ್ದಾರೆ.

ಸ್ತಬ್ದಚಿತ್ರಗಳ ಪ್ರದರ್ಶನ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕೇ ಹೊರತು ಯಾವುದೇ ಪಕ್ಷದ, ಅಥವಾ ವ್ಯಕ್ತಿಯ ಸಿದ್ದಾಂತಗಳನ್ನಲ್ಲ ಎಂದಿರುವ ಯತ್ನಾಳ್, 1971ರಲ್ಲಿ ನಡೆದ ಮೂಢನಂಬಿಕೆಗಳ ವಿರುದ್ಧದ ಸೇಲಂ ಪ್ರತಿಭಟನೆಯಲ್ಲಿ ಪೆರಿಯಾರ್ ಮತ್ತು ಆತನ ಸಂಗಡಿಗರು ಹಿಂದೂ ದೇವರುಗಳ ಮೂರ್ತಿಗಳನ್ನು ಭಗ್ನಗೊಳಿಸಿದರು ಎಂದು ಉಲ್ಲೇಖಿಸಿದ್ದಾರೆ.
ಈತನನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ರಾಯಭಾರಿಯೆಂದು ತೋರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಕಿಂಚಿತ್ತಾದರೂ ಈತನ ಬಗ್ಗೆ ಸಂಶೋಧನೆ ಮಾಡಬೇಕಿತ್ತು. ಹಿಂದೂ ವಿರೋಧಿಗಳನ್ನು ವೈಭವೀಕರಿಸುತ್ತಿರುವ ಸರ್ಕಾರದ ನಡೆ ಖಂಡನೀಯ. ರಾಮಸ್ವಾಮಿಯ ಚಿತ್ರ ತೋರಿಸುವುದು ಹಿಂದೂಗಳ ಮಾಡಿದ ಅವಮಾನವಷ್ಟೇ ಅಲ್ಲ, ನಾಡದೇವತೆ ಚಾಮುಂಡಿಗೆ ಮಾಡಿದ ಅಪಮಾನವೂ ಹೌದು ದೂರಿದ್ದಾರೆ.












Click it and Unblock the Notifications