ರೇವಣ್ಣ ಫ್ಯಾಮಿಲಿ ರಾಸಲೀಲೆ ವಿಡಿಯೋ ನನ್ನ ಕೈಲಿದೆ’ : ಬಿಜೆಪಿ ಮುಖಂಡ ಹೇಳಿದ್ದೇನು?
ಹಾಸನ, ಜನವರಿ 16: ಬಿಜೆಪಿ ಮುಖಂಡ ದೇವರಾಜೇಗೌಡ ಹಾಗು ಮಾಜಿ ಸಚಿವ ರೇವಣ್ಣ ಕುಟುಂಬ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ವಾರದ ಹಿಂದೆ ಹಾಸನದಲ್ಲಿ ಸುದ್ದಿ ಗೋಷ್ಟಿ ನಡೆಸಿ ರೇವಣ್ಣ ಕುಟುಂಬದ ರಾಸಲೀಲೆ ವೀಡಿಯೋ ಇದೆ. ರೇವಣ್ಣ ಇನ್ನುಮುಂದೆ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು.
ರೇವಣ್ಣ ಇನ್ನುಮುಂದೆ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು. ಇಲ್ಲವಾದರೆ ಹಾಸನದ ಪ್ರಮುಖ ವೃತ್ತದಲ್ಲಿ ಎಲ್ ಇ ಡಿ ಪರದೆ ಹಾಕಿ ವೀಡಿಯೋ ಪ್ಲೇ ಮಾಡೋದಾಗಿ ಮಾತನಾಡಿದ್ದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿಕೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ರು.

ರೇವಣ್ಣರ ಹೇಳಿಕೆ ಬೆನ್ನಲ್ಲೇ ಸವಾಲು ಸ್ವೀಕಾರ ಮಾಡಿರೋದಾಗಿ ಮಾದ್ಯಮ ಗೋಷ್ಠಿ ಕರೆದ ದೇವರಾಜೇಗೌಡ. ರೇವಣ್ಣರ ಸವಾಲನ್ನು ಸಂತೋಷ ದಿಂದ ಸ್ವೀಕಾರ ಮಾಡಿದ್ದೇನೆ, ಒಂದು ವೀಡಿಯೋ ವನ್ನು ರಾಜ್ಯದ ಜನತೆ ಹಾಗು ದೇಶದ ನಾಗರೀಕರ ಮುಂದೆ ಇಡುತ್ತೇನೆ ಎಂದು ಮೆಸೇಜ್ ನೀಡಿದ್ದಾರೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಸವಾಲನ್ನು ಸ್ವೀಕರಿಸಿದ್ದೇನೆ, ಅವರ ಸವಾಲಿಗೆ ಸರಿಯಾದ ಉತ್ತರ ಕೊಡುತ್ತೇನೆ. ರೇವಣ್ಣ ಅವರೇ ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ನನ್ನ ಆಸ್ತಿ ಪತ್ರಗಳನ್ನು ನಿಮ್ಮ ಮನೆಗೆ ಕೊರಿಯರ್ ಮಾಡುತ್ತೇನೆ. ರೇವಣ್ಣ ಅವರೇ ನನ್ನ ಬಳಿ ಬೇನಾಮಿ ಹೆಂಡ್ತಿ, ಆಸ್ತಿ, ಮನೆ ಇಲ್ಲ. ನಿಮ್ಮ ಮನೆ ಅಡ್ರೆಸ್ ಸರಿಯಾಗಿ ಕೊಡಿ. ಪರ್ಮನೆಂಟ್ ಅಡ್ರೆಸ್ ಕೊಟ್ಟರೆ ಸೇಲ್ ಡಿಡ್ ಪತ್ರಗಳನ್ನು ಕೊರಿಯರ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜನಗಳಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ಹೆಚ್ ಡಿ ರೇವಣ್ಣ ಅವರು ನನ್ನ ವಿರುದ್ಧ ಅಸಂಬದ್ಧವಾದ ಪದಗಳನ್ನು ಬಳಸಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಮತಗಟ್ಟೆಯಲ್ಲಿ ನಿಂತು ಕಳ್ಳ ಮತ ಹಾಕಿಸಿದ್ದೀರಿ. ಕೈಯಲ್ಲಿ ಓಟರ್ ಐಡಿ ಹಿಡಿದು ಮತ ಹಾಕಿಸಿದ್ರಿ. ನೀವು ಆಗ ಸರ್ಕಾರದ ಮಂತ್ರಿ ಆಗಿದ್ರಿ. 40-50 ನಿಮಿಷಗಳ ಕಾಲ ಪಡುವಲಹಿಪ್ಪೆ ಬೂತ್ ಸಂಖ್ಯೆ 244 ರಲ್ಲಿ ನಿಂತು ಐಡಿ ಕಾರ್ಡ್ ಕೊಟ್ಟು ಮತ ಹಾಕಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ವಿರುದ್ಧ ಆರೋಪಿಸಿದರು.
ರೇವಣ್ಣ ಅವರು ಅಪರಾಧಿ ಎಂದು ಹೈಕೋರ್ಟ್‌ನಲ್ಲಿ ಸಾಬೀತಾಗಿದೆ. ದೇವೇಗೌಡರ ಕುಟುಂಬದ 48 ಮತಗಳು ಪಡುವಲಹಿಪ್ಪೆ ಬೂತ್‌ನಲ್ಲಿವೆ, ಆದರೆ ಮತ ಚಲಾವಣೆ ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ, ಎಚ್.ಡಿ.ರೇವಣ್ಣ ಕುಟುಂಬ, ಒಬ್ಬರು ಸೊಸೆ ಮಾತ್ರ. ರೇವಣ್ಣ ಅವರು ಕಳ್ಳ ಓಟು ಹಾಕಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಅವರು ಬೂತ್‌ನಲ್ಲಿ ನಿಂತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ.
ರೇವಣ್ಣ ಅವರು ನನ್ನ ವಿರುದ್ಧ ಅಸಂಬದ್ಧವಾದ ಪದಗಳನ್ನು ಬಳಸಿದ್ದಾರೆ. ನಾನು 70 ಕೋಟಿ ರೂ. ಸಂಪಾದನೆ ಮಾಡಿದ್ದೇನೆ ಎಂದು ಹೆಚ್ಡಿ ರೇವಣ್ಣ ಅವರ ವಕೀಲರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದೇನೆ. ನನ್ನ ಚರ ಮತ್ತು ಸ್ಥಿರ ಅಸ್ಥಿ ದಾಖಲೆ ಘೋಷಣೆ ಮಾಡಿದ್ದೇನೆ. ಮನೆ, ಅಸ್ಥಿ ಸೇರಿ ನನ್ನ ಬಳಿ 80 ಕೋಟಿ ಇದೆ ಎಂದು ತಿಳಿಸಿದರು.












Click it and Unblock the Notifications