ಬಿಜೆಪಿ ಗೆಲುವಿಗಾಗಿ ಮುರಳೀಧರ ರಾವ್ ಬೆಂಗಳೂರಲ್ಲೇ ವಾಸ್ತವ್ಯ
ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಮುರಳೀಧರ ರಾವ್ ಅವರು ಶೀಘ್ರದಲ್ಲೇ ಬೆಂಗಳೂರಿನಲ್ಲೇ ಬಂದು ನೆಲೆಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಟಾರ್ಗೆಟ್ 150 ಗುರಿ ಪೂರೈಕೆಗೆ ಕಾರ್ಯತಂತ್ರ ರೂಪಿಸಲು ಅನುಕೂಲ
ಬೆಂಗಳೂರು, ಜೂನ್ 6: ಕರ್ನಾಟಕದಲ್ಲಿ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಮುರಳೀಧರ ರಾವ್ ಅವರು, ಇದೇ ವರ್ಷ ಆಗಸ್ಟ್ ತಿಂಗಳಿನಿಂದ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗಾಗಿ 'ಟಾರ್ಗೆಟ್ 150' ಕಾರ್ಯತಂತ್ರವನ್ನು ಸಿದ್ಧಪಡಿಸಿಕೊಂಡಿರುವ ಬಿಜೆಪಿಯು ತನ್ನ ಈ ರಣತಂತ್ರದಲ್ಲಿ ವಿಜಯಿಯಾಗಲು ಮುರಳೀಧರ ಅವರ ಬೆಂಗಳೂರು ವಾಸ್ತವ್ಯ ಅತ್ಯಗತ್ಯ ಎಂದು ಮನಗಂಡಿದೆ. ಹಾಗಾಗಿಯೇ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ ಬೆಂಗಳೂರಿನಲ್ಲಿಯೇ ಮುರಳೀಧರ ಅವರು ವಾಸ್ತವ್ಯ ಹೂಡಲಿದ್ದಾರೆ.[ವಿಶ್ವನಾಥ್ ಸಂದರ್ಶನ : ಇರುವುದೋ ಬಿಡುವುದೋ ನೀವೇ ಹೇಳಿ!]

ಎಲ್ಲಿ ವಾಸ್ತವ್ಯ?
ನಗರದ ಮಲ್ಲೇಶ್ವರಂ ನಲ್ಲಿ ಬಿಜೆಪಿಯ ರಾಜ್ಯ ಶಾಖೆಯ ಪ್ರಧಾನ ಕಚೇರಿಯಿರುವುದರಿಂದ ಮಲ್ಲೇಶ್ವರಂ ನಲ್ಲಿಯೇ ಮನೆಯೊಂದನ್ನು ಬಾಡಿಗೆಗೆ ಪಡೆದು ಮುರಳೀಧರ ಅವರಿಗೆ ವಾಸ್ತವ್ಯ ಕಲ್ಪಿಸಲು ಬಿಜೆಪಿ ನಿರ್ಧರಿಸಿದೆ.[ತಡರಾತ್ರಿ ಉಸ್ತುವಾರಿ ಭೇಟಿ ಮಾಡಿದ ಸಿದ್ದರಾಮಯ್ಯ: ಏನೇನೋ ಸುದ್ದಿ!]
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ ರಾವ್ ಅವರು ಶೀಘ್ರದಲ್ಲೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆಂದು ಹೇಳಲಾಗುತ್ತಿದೆ. ಇದು ಮುರಳೀಧರ ರಾವ್ ಅವರ ಬೆಂಗಳೂರು ವಾಸ್ತವ್ಯದ ಯೋಜನೆಗೆ ಮತ್ತೊಂದು ಕಾರಣವಾಗಿದೆ.












Click it and Unblock the Notifications