ಲೋಕಸಭಾ ಚುನಾವಣೆ: 24 ಬಿಜೆಪಿ, 4 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್? ಕ್ಷೇತ್ರಗಳು ಇಲ್ಲಿವೆ

ಬೆಂಗಳೂರು, ಫೆಬ್ರವರಿ 06: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆಯಲೂ ಮೈತ್ರಿಯಾಗಿದೆ. ಶತಾಯಗತಾಯ ರಾಜ್ಯದಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ತಂತ್ರಗಾರಿಕೆಯನ್ನ ನಡೆಸಿದ್ದು, ಬಹುತೇಕ ಕ್ಷೇತ್ರ ಹಂಚಿಕೆ ಅಂತಿಮವಾಗಿದೆ.

ಹೌದು, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ನಾಲ್ಕು ಕ್ಷೇತ್ರಗಳು ಜೆಡಿಎಸ್‌ ಗೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕ್ಷೇತ್ರ ಹಂಚಿಕೆ ಕುರಿತು ಎರಡು ಪಕ್ಷಗಳ ನಡುವೆ ನಡೆಯುತ್ತಿದ್ದ ಮಾತುಕತೆ ಬಹುತೇಕ ಅಂತಿಮಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ.

BJP-JDS Lok Sabha Alliance 2024: 24 Constituencies for BJP and 4 for JDS: Know the Complete List

ಬಿಜೆಪಿ ಹೈಕಮಾಂಡ್‌ ಬಳಿ ಜೆಡಿಎಸ್‌ ನಾಯಕರು ಆರು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಮಂಡ್ಯ, ಹಾಸನ, ಚಿಕ್ಕಬಳ್ಲಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಹಾಗಾದರೆ ಯಾವ ಕ್ಷೇತ್ರಗಳು ಬಿಜೆಪಿ, ಯಾವ ಕ್ಷೇತ್ರಗಳು ಜೆಡಿಎಸ್‌ ಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?

ಬೆಂಗಳೂರು ಕೇಂದ್ರ

ತುಮಕೂರು

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಬೆಂಗಳೂರು ಗ್ರಾಮಾಂತರ

ಮೈಸೂರು

ಚಾಮರಾಜನಗರ

ಚಿಕ್ಕಮಗಳೂರು

ದಾವಣಗೆರೆ

ಶಿವಮೊಗ್ಗ

ಹಾವೇರಿ

ಉತ್ತರ ಕನ್ನಡ

ದಕ್ಷಿಣ ಕನ್ನಡ

ಹುಬ್ಬಳ್ಳಿ-ಧಾರವಾಡ

ಚಿತ್ರದುರ್ಗ

ಬಾಗಲಕೋಟೆ

ಬಳ್ಳಾರಿ

ಕೊಪ್ಪಳ

ವಿಜಯಪುರ

ಕಲಬುರ್ಗಿ

ಬೆಳಗಾವಿ

ಬೀದರ್

ಚಿಕ್ಕೋಡಿ

ರಾಯಚೂರು

BJP-JDS Lok Sabha Alliance 2024: 24 Constituencies for BJP and 4 for JDS: Know the Complete List

ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?

ಹಾಸನ

ಮಂಡ್ಯ

ಕೋಲಾರ

ಚಿಕ್ಕಬಳ್ಳಾಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+