ಕಾಂಗ್ರೆಸ್ಸಿನ 07 ಗ್ಯಾರಂಟಿಗಳನ್ನು ಪಟ್ಟಿ ಮಾಡಿದ ಬಿಜೆಪಿ

ಬೆಂಗಳೂರು, ಜೂನ್ 16: ಗ್ಯಾರಂಟಿ ಯೋಜನೆಗಳ ಮೂಲಕವೇ ಅಧಿಕಾರ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರದ ನಡೆ ಮತ್ತು ನಿರ್ಧಾರದ ವಿರುದ್ಧ ವ್ಯಾಪಕ ಆರೋಪಗಳು ಮತ್ತು ಟೀಕೆಗಳು ಕೇಳಿ ಬರುತ್ತಿವೆ. KSRTC ಟಿಕೆಟ್ ದರ ಏರಿಕೆ ಸೇರಿದಂತೆ ಕಾಂಗ್ರೆಸ್‌ನ ಒಟ್ಟು 07 ಗ್ಯಾರಂಟಿಗಳನ್ನು ಗುರುತಿಸಿರುವ ಕರ್ನಾಟಕ ಬಿಜೆಪಿ ಲೇವಡಿ ಮಾಡಿದೆ.

ಕಾಂಗ್ರೆಸ್ ಆಡಳಿತ ಮತ್ತು ಗ್ಯಾರಂಟಿ ಯೋಜನೆಗಳ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಐದು ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ 'ಶಕ್ತಿ' ಯೋಜನೆಗೆ ಭರಪೂರ ಸ್ಪಂದನೆ ಸಿಕ್ಕಿರುವ ಖುಷಿಯಲ್ಲಿ ಕಾಂಗ್ರೆಸ್ ಇದೆ. ಇತ್ತ ಬಿಜೆಪಿಯು ರಾಜ್ಯ ಸರ್ಕಾರದ ಆಡಳಿತದಿಂದ ''ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ!ಕಾಂಗ್ರೆಸ್ ಎಂದು ಟ್ವಿಟ್ ಮಾಡಿದೆ.

BJP Identified 7 Guarantees Of Congress, KSRTC Ticket Price Hike, BJP Slams State Govt

ಬಿಜೆಪಿ ಪ್ರಕಾರ, ಕಾಂಗ್ರೆಸ್ ನಿಂದ 07 ಗ್ಯಾರಂಟಿಗಳು ಜಾರಿಯಾಗಿವೆ. ಆವುಗಳೆಂದರೆ '' ವಿದ್ಯುತ್, ಮೀಟರ್ ದರ ಏರಿಕೆ, ಕುಡಿಯುವ ನೀರಿನ ಬೆಲೆ ಏರಿಕೆ, ಸದ್ದಿಲ್ಲದೆ KSRTC ಟಿಕೆಟ್ ದರ ಏರಿಕೆ, ಮದ್ಯಪಾನದ ಬೆಲೆಯೂ ಏರಿಕೆ, ನಂದಿನಿ ಹಾಲಿನ ದರ ಏರಿಕೆ, ಆಸ್ತಿ ನೋಂದಣಿ ಶುಲ್ಕ ಏರಿಕೆ, ಮೊಟ್ಟೆ-ಮಾಂಸದ ದರವೂ ಏರಿಕೆ''.

ಸಿದ್ದು-ಡಿಕೆಶಿಯ ಬೆಲೆ ಹೆಚ್ಚಳದ ಗ್ಯಾರಂಟಿ ಕೊಡುಗೆಗಳು

ಉಚಿತ ಘೋಷಣೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಿಸಿ ಜನರಿಗೆ ಆರ್ಥಿಕ ಹೊರ ಮಾಡುತ್ತಿದೆ. ಕಾಂಗ್ರೆಸ್ ಧನದಾಹಿ, ಎಟಿಎಂ ಸರ್ಕಾರ (#ATMSarkara). ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಿಕೆ ಶಿವಕುಮಾರ್ ಅವರು ಬೆಲೆ ಹೆಚ್ಚಳದ ಈ ಏಳು ಗ್ಯಾರಂಟಿ ಕೊಡುಗೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ 200 ಯೂನಿಟ್ ವಿದ್ಯುತ್ ಎಂದು ಹೇಳಿತ್ತು. ಈ ಗ್ಯಾರಂಟಿ ಜಾರಿಯಾಗಬೇಕಿದೆ. ಅಷ್ಟರಲ್ಲಾಗಲೇ ವಿದ್ಯುತ್, ಮೀಟರ್ ದರ ಸರ್ಕಾರ ಏರಿಕೆ ಮಾಡಿದೆ. ಅಲ್ಲದೇ ಮೇ ತಿಂಗಳ ವಿದ್ಯುತ್ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಇತರೆ ತೆರಿಗೆ, ಯುನಿಟ್ ದರ ಹೆಚ್ಚಳ ಮಾಡಿ ಬಿಲ್ ನೀಡಲಾಗಿದೆ. ಇದಕ್ಕು ಜನರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

BJP Identified 7 Guarantees Of Congress, KSRTC Ticket Price Hike, BJP Slams State Govt

ಸದ್ದಿಲ್ಲದೇ ksrtc ಟಿಕೆಟ್ ದರ ಏರಿಕೆ: ಬಿಜೆಪಿ

ಇನ್ನೂ ಶಕ್ತಿ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ. ಇದರ ವೆಚ್ಚ ಸರಿದೂರಿಸಲು ಬೇರೆ ವಸ್ತುಗಳ ಮೇಲೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಮದ್ಯಪಾನದ ದರ ಹೆಚ್ಚಾಗಿದೆ. ಅದರ ಬೆನ್ನಲ್ಲೆ ಸದ್ದಿಲ್ಲದೆ KSRTC ಟಿಕೆಟ್ ದರವನ್ನೂ ಸಹ ಏರಿಕೆ ಸಹ ಕಾಂಗ್ರೆಸ್ ಏರಿಕೆ ಮಾಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಂಗೆಟ್ಟಿದ್ದ ಜನರು ಸಂಕಷ್ಟ ಎದುರಿಸುವ ಹೊತ್ತಿನಲ್ಲಿಯೇ ನಂದಿನ ಹಾಲಿನ ದರ ಸಹ ಹೆಚ್ಚಳವಾಗಿದೆ. ಅದರೊಂದಿಗೆ ಆಸ್ತಿ ನೋಂದಣಿ ಶುಲ್ಕ ಏರಿಕೆ ಹೆಚ್ಚಾಗಿದೆ. ಕಳೆದ ಎರಡು ಮೂರು ದಿನಗಳಿಂದ 'ಮೊಟ್ಟೆ- ಮಾಂಸದ ದರವೂ ಏರಿಕೆ ಆಗಿದೆ. ಇದು ಜನರಿಗೆ ಆರ್ಥಿಕ ತೊಂದರೆ ನೀಡುವ ಗ್ಯಾರಂಟಿಗಳಾಗಿವೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+