ಸುಳ್ಳುರಾಮಯ್ಯ ಅವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
ಬೆಂಗಳೂರು, ನವೆಂಬರ್ 01: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಕೊಡುಗೆಗಳ ಕುರಿತು ವ್ಯಂಗ್ಯವಾಡಿದೆ. ಸರ್ಕಾರಿ ಖಜಾನೆ ತುಂಬಿ ತುಳುಕುತ್ತಿದೆಂದು ತೆರಿಗೆ ಹಣದಲ್ಲಿ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದುಕೊಂಡಿರುವ ಸುಳ್ಳುರಾಮಯ್ಯ ಅವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳು
▪️ದಸರಾ ಆಚರಣೆಗೆ ಅನುದಾನ ಕಡಿತ
▪️ಹಂಪಿ ಉತ್ಸವ ಸಂಪೂರ್ಣ ರದ್ದು
▪️ಸರ್ಕಾರಿ ಕನ್ನಡ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ
▪️ತಾಯಿ ಭುವನೇಶ್ವರಿ ಪ್ರತಿಮೆಗಿಲ್ಲ ಹಣ
▪️ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಕಲೆಕ್ಷನ್
ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ಸಮಾಜದಲ್ಲಿ ಅಶಾಂತಿ ಮೂಡಿಸಿ, ತುಷ್ಟೀಕರಣದಿಂದ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಓಲೈಕೆಯಲ್ಲೇ ಮಿಂದೇಳುತ್ತಿದೆ. ಚಾಮರಾಜಪೇಟೆಯ ಸಾರ್ವಜನಿಕ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಸಿದ್ದರಾಮಯ್ಯ ಅವರ ಸರ್ಕಾರ ಅನುಮತಿ ನಿರಾಕರಿಸಿರುವುದು ಕಾಂಗ್ರೆಸ್‌ನ ಕನ್ನಡ ಪ್ರೇಮದ ವಾಸ್ತವ ಚಿತ್ರಣ. ರಾಜ್ಯೋತ್ಸವ ಆಚರಣೆಗೂ ಕರ್ನಾಟಕದಲ್ಲಿ ಹೈಕೋರ್ಟ್ ಕದ ತಟ್ಟಿಯೇ ಅನುಮತಿ ಪಡೆಯುವ ಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಮತ್ತು ಖಂಡನೀಯ ಎಂದು ಹೇಳಿದೆ.
ಕರ್ನಾಟಕ ವಿರೋಧಿ ಕಾಂಗ್ರೆಸ್ ಸರ್ಕಾರದ ಅಸಮರ್ಥ ನಡೆಯಿಂದಾಗಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. I.N.D.I. ಮೈತ್ರಿಕೂಟಕ್ಕಾಗಿ ಸಿದ್ದರಾಮಯ್ಯ ಅವರ ಸರ್ಕಾರ ಕದ್ದು ಮುಚ್ಚಿ ಕಳ್ಳತನದಿಂದ ಕಾವೇರಿ ನೀರು ಹರಿಬಿಡುತ್ತಿರುವುದರಿಂದ ಕೆ.ಆರ್.ಎಸ್. ಖಾಲಿ ಆಗಿದೆ. ರೈತರಿಗೆ ಬೆಳೆ ಬೆಳೆಯಬೇಡಿ ಎಂದು ದಿಗ್ಭಂಧನ ಹಾಕಿರುವ ತುಘಲಕ್ ಸರ್ಕಾರ ಬೆಂಗಳೂರಿಗರ ಕುಡಿಯುವ ನೀರಿಗೂ ಸಂಕಷ್ಟ ತಂದಿಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ.
ಮಾನ್ಯ @siddaramaiah ಅವರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳು:
— BJP Karnataka (@BJP4Karnataka) November 1, 2023
▪️ದಸರಾ ಆಚರಣೆಗೆ ಅನುದಾನ ಕಡಿತ
▪️ಹಂಪಿ ಉತ್ಸವ ಸಂಪೂರ್ಣ ರದ್ದು
▪️ಸರ್ಕಾರಿ ಕನ್ನಡ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ
▪️ತಾಯಿ ಭುವನೇಶ್ವರಿ ಪ್ರತಿಮೆಗಿಲ್ಲ ಹಣ
▪️ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಕಲೆಕ್ಷನ್
ಸರ್ಕಾರಿ ಖಜಾನೆ ತುಂಬಿ ತುಳುಕುತ್ತಿದೆಂದು…












Click it and Unblock the Notifications