ಪರಮೇಶ್ವರ್ ಆಟಕ್ಕುಂಟು ಲೆಕ್ಕಕ್ಕಿಲ್ಲ; ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ರಾಜೀನಾಮೆ ನೀಡಬೇಕು: ಬಿಜೆಪಿ ಆಗ್ರಹ

ಬೆಂಗಳೂರು, ಡಿಸೆಂಬರ್‌ 16: ಗೃಹ ಸಚಿವ ಪರಮೇಶ್ವರ್ ಅವರಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ತಾವೊಬ್ಬ ಗೃಹ ಸಚಿವ ಎಂಬುದನ್ನೇ ಮಿನಿಸ್ಟರ್‌ ಸಾಹೇಬ್ರು ಮರೆತಂತಿದೆ. ಬೆಳಗಾವಿ ಘಟನೆಯ ನೈತಿಕ ಹೊಣೆಹೊತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದರು.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವವರೆಗೂ ಬಿಜೆಪಿ ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಿದೆ ನಮ್ಮ ಸನಾತನ ಪರಂಪರೆ. ಆದರೆ ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರವು ಮಹಿಳೆಯರನ್ನು ಪೂಜಿಸುವುದಿರಲಿ, ರಾಜ್ಯದ ಮಹಿಳೆಯರಿಗೆ ಸೂಕ್ತ ರಕ್ಷಣೆಯನ್ನು ಸಹ ನೀಡಲು ಸಂಪೂರ್ಣ ವಿಫಲ. ಕೇವಲ ತಾಲಿಬಾನ್‌ನಂತಹ ಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಕರ್ನಾಟಕಕ್ಕೆ ವಿಸ್ತರಿದ್ದೇ ಕಾಂಗ್ರೆಸ್‌ನ ಆರೂವರೆ ತಿಂಗಳ ಆಡಳಿತದ ಸಾಧನೆ.

BJP Has Demanded That Lakshmi Hebbalkar Should Resign

ಬೆಳಗಾವಿಯ ವಂಟಮೂರಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ನಡೆದ ಅಮಾನುಷ ಘಟನೆ ಅತ್ಯಂತ ಹೇಯ ಹಾಗೂ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹದ್ದು. ಆದರೆ ಈ ಘಟನೆ ನಡೆದ ಮೇಲೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ಮಾತ್ರ ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಯ ಅಸಲಿ ಮುಖವಾಡವನ್ನು ಬಿಚ್ಟಿಟ್ಟಿದೆ.

ವಂಟಮೂರಿ ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಾದಿಯಾಗಿ, ಸಚಿವರು ಹಾಗೂ ಶಾಸಕರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದರು. ಆದರೆ ಸೌಜನ್ಯಕ್ಕೂ ಕೂಗಳತೆ ದೂರದಲ್ಲಿ ಸಂತ್ರಸ್ತೆ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಲಿಲ್ಲ, ಸರ್ಕಾರ ನಿಮ್ಮ ಜೊತೆ ಇದೆ ಎಂದು ಧೈರ್ಯ ತುಂಬಲಿಲ್ಲ. ಇದು ಕಾಂಗ್ರೆಸ್‌ನ ಅಸಲಿ ಮಹಿಳಾ ಸಬಲೀಕರಣ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇನ್ನು ಬೆಳಗಾವಿಯ ವಂಟಮೂರಿ ಗ್ರಾಮ ಬರುವುದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ. ಅಲ್ಲಿನ ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಸ್ವಕ್ಷೇತ್ರದಲ್ಲಿ ಕಂಡು ಕೇಳರಿಯದಂತಹ ಭೀಭತ್ಸ ಘಟನೆ ನಡೆದರೂ, ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಕುರುಡ-ಕಿವುಡ-ಮೂಗನಂತೆ ವರ್ತಿಸುತ್ತಿರುವುದು ಸಂತ್ರಸ್ತೆಗೆ ಹಾಗೂ ರಾಜ್ಯದ ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಮಹಾ ಅನ್ಯಾಯ ಎಂದು ಬಿಜೆಪಿ ಹೇಳಿದೆ.

BJP Has Demanded That Lakshmi Hebbalkar Should Resign

ಇನ್ನು ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ್‌ ಜಾರಕಿಹೊಳಿ ಅವರು ಸದನದಲ್ಲಿಯೂ ನಾಪತ್ತೆ, ಸಂತ್ರಸ್ತೆಯ ಆರೋಗ್ಯ ವಿಚಾರಿಸುವಲ್ಲಿಯೂ ನಾಪತ್ತೆ. ಇದು ಕಾಂಗ್ರೆಸ್‌ ಸರ್ಕಾರದ ಆಡಳಿತದ ಸ್ಯಾಂಪಲ್.‌ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ಅಮಾನುಷ ಘಟನೆ ನಡೆದಿದ್ದರೂ ಸಹ ಕಾಂಗ್ರೆಸ್‌ ಸಂಪೂರ್ಣ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಕಾಂಗ್ರೆಸ್‌ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಅಪರಾಧಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದೆಯಾ ಎಂಬ ಅನುಮಾನ ಮೂಡುವುದಂತು ನಿಶ್ಚಿತ ಎಂದು ಬಿಎಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಕರ್ನಾಟಕದಲ್ಲಿ ನಡೆದ ಈ ಹೀನ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಬಿಜೆಪಿಯ ಕೇಂದ್ರ ಮಹಿಳಾ ಸಮಿತಿಯ ಸದಸ್ಯರು ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಬೆಳಗಾವಿಗೆ ಬಂದಿದ್ದರೆ, ಕಾಂಗ್ರೆಸ್‌ನವರು ಮಾತ್ರ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದು ಕಾಂಗ್ರೆಸ್‌ ಮಹಿಳೆಯರಿಗೆ ನೀಡುವ ಅಸಲಿ ಗೌರವ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಪುಂಡ ಪೋಕರಿಗಳು, ಜಿಹಾದಿಗಳು, ಮತಾಂಧರು ಕಾನೂನು ಹಾಗೂ ಪೊಲೀಸರ ಭಯವಿಲ್ಲದೇ ಮಕ್ಕಳ, ಮಹಿಳೆಯರ, ಜನಸಾಮಾನ್ಯರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಹಿರಿಯ ಮಹಿಳಾ ಭೂ ವಿಜ್ಞಾನಿಯನ್ನು ಬೆಂಗಳೂರಿನಲ್ಲಿ ಹಾಡುಹಗಲೇ ಕೊಲೆಗೈಯಲಾಗಿತ್ತು. ಪ್ರತಿ ನಿತ್ಯ ಸರಗಳ್ಳತನವಂತೂ ಮಾಮೂಲಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ತಾಣವಾಗಿದ್ದ ಕರ್ನಾಟಕವನ್ನು, ಕಾಂಗ್ರೆಸ್‌ ತನ್ನ ದುರಾಡಳಿತದಿಂದ ಅಸುರಕ್ಷಿತ ತಾಣವನ್ನಾಗಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+