ಬಿಜೆಪಿ ಭ್ರಷ್ಟಾಚಾರದ ರೇಟ್ ಕಾರ್ಡ್ ಜಾಹೀರಾತು: ಕಾಂಗ್ರೆಸ್ ವಿರುದ್ಧ ಪ್ರಕರಣಕ್ಕೆ ಮುಂದಾದ ಬಿಜೆಪಿ

ಬೆಂಗಳೂರು, ಮೇ 6: ಕಾಂಗ್ರೆಸ್ ಪ್ರಕಟಿಸಿದ ಬಿಜೆಪಿಯ ಭ್ರಷ್ಟಾಚಾರ ರೇಟ್‌ ಕಾರ್ಡ್‌ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಅನೇಕ ಪತ್ರಿಕೆಗಳಲ್ಲಿ 'ಟ್ರಬಲ್ ಇಂಜಿನ್' ಶೀರ್ಷಿಕೆಯಡಿ ಜಾಹೀರಾತು ಪ್ರಕಟಿಸಿದ್ದು, ಹುದ್ದೆಗಳ ನೇಮಕಾತಿ, ವರ್ಗಾವಣೆ ಮತ್ತು ಉದ್ಯೋಗ ಪಡೆಯಲು ಕೊಡಬೇಕಾದ ಲಂಚದ ದರಗಳನ್ನು ಉಲ್ಲೇಖಿಸಿದೆ. ಜಾಹೀರಾತಿನಲ್ಲಿ ಸರ್ಕಾರಿ ಕಾಮಗಾರಿಗಳ ಕಮಿಷನ್ ಬಗ್ಗೆಯೂ ಉಲ್ಲೇಖಿಸಲಾಗಿದೆ.

BJP Corruption Rate Card Advertisement: BJP takes case against Congress

ಕಾಂಗ್ರೆಸ್‌ ಪತ್ರಿಕೆಗಳಿಗೆ ನೀಡಿರುವ ಜಾಹೀರಾತನ್ನು ನಾನು ಗಮನಿಸಿದ್ದೇನೆ. ಈ ನಿಟ್ಟಿನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸುತ್ತೇನೆ. ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರಯತ್ನಿಸುತ್ತೇನೆ. ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಏತನ್ಮಧ್ಯೆ, ಸಂಸದ ಲಹರ್ ಸಿಂಗ್ ಸಿರೋಯಾ ಟ್ವೀಟ್ ಮಾಡಿ, "ಕಾಂಗ್ರೆಸ್ ಇಂದು ಪ್ರಕಟಿಸಿರುವುದು ಶುದ್ಧ ಪ್ರಚಾರ. ನನ್ನ ವಕೀಲರನ್ನು ಸಂಪರ್ಕಿಸಿದ ನಂತರ ಕರ್ನಾಟಕ ಕಾಂಗ್ರೆಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಾನು ಪ್ರಸ್ತಾಪಿಸುತ್ತೇನೆ. ಎಲ್ಲಾ ಸಂಸ್ಥೆಗಳು ಮತ್ತು ಜಾಹೀರಾತಿನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಹುದ್ದೆಗಳನ್ನು ಹೊಂದಿರುವ ಎಲ್ಲರನ್ನು ಸಾಕ್ಷ್ಯಕ್ಕಾಗಿ ನ್ಯಾಯಾಲಯವು ಖಂಡಿತವಾಗಿಯೂ ಪರಿಶೀಲಿಸುತ್ತದೆ. ಈ ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಅವಮಾನಿಸಲಾಗಿದೆ" ಎಂದು ಬರೆದಿದ್ದಾರೆ.

ಶುಕ್ರವಾರವಷ್ಟೇ ಬಿಜೆಪಿ ಸರ್ಕಾರದ ರೇಟ್‌ ಕಾರ್ಡ್‌ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ಶನಿವಾರ ಬಿಜೆಪಿ ಸರ್ಕಾರದ ಮೇಲೆ ದಾಳಿ ಮುಂದುವರೆಸಿದೆ. ಶನಿವಾರವೂ ಕೂಡ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದ್ದು, ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ 40% ಭ್ರಷ್ಟಾಚಾರದ ನಿರಂತರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಈಗ ಪಕ್ಷವನ್ನು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜರೆದಿದೆ.

BJP Corruption Rate Card Advertisement: BJP takes case against Congress

40% ಭ್ರಷ್ಟ ಬಿಜೆಪಿ ಸರ್ಕಾರ ಕರ್ನಾಟಕದ ಜನರಿಂದ 1,50,000 ಕೋಟಿ ರೂಪಾಯಿ ಲೂಟಿ ಮಾಡುವುದರ ಮೂಲಕ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಟೆಂಡರ್‌ಗಳನ್ನು ನೀಡಲು ಮತ್ತು ಬಿಲ್‌ ಬಿಡುಗಡೆಗೊಳಿಸಲು ಸಚಿವರು 40% ಕಮಿಷನ್ ಕೇಳಲು ಪ್ರಾರಂಭಿಸಿದ ನಂತರ ಗುತ್ತಿಗೆದಾರರ ಸಂಘವು ಕ್ರಮಕ್ಕಾಗಿ ಪ್ರಧಾನಿ ಅವರಿಗೆ ಪತ್ರ ಬರೆದರು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ ಸಚಿವರೊಬ್ಬರು 40% ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. 18,000 ಶಾಲೆಗಳು ಸರ್ಕಾರದ ಮೇಲೆ ತೀವ್ರ ಭ್ರಷ್ಟಾಚಾರದ ಆರೋಪ ಮಾಡಿವೆ. ದೇವಸ್ಥಾನ, ಮಠಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ 30% ಕಮಿಷನ್ ಕೇಳುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದ್ದಾರೆ ಎಂದು ಹೇಳಿದೆ.

ಈ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲು ಸತತ ಪ್ರಯತ್ನ ಮಾಡುತ್ತಿರುವ ಪಕ್ಷ ಬಿಜೆಪಿ ಸರ್ಕಾರ ಲೋಪಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಇದರೊಂದಿಗೆ ಜನರಿಗೆ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ ಶಾಸಕ ಮತ್ತು ಅವರ ಪುತ್ರನಿಂದ 8 ಕೋಟಿ ರೂಪಾಯಿ ನಗದನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದಾರೆ. ಸಿಎಂ ಆಗಲು 2,500 ಕೋಟಿ ರೂಪಾಯಿ ಕೊಡುವಂತೆ ಕೇಳಲಾಗಿತ್ತು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಪೊಲೀಸ್ ನೇಮಕಾತಿ ಹಗರಣದಲ್ಲಿ ಸಚಿವರಿಗೆ ಕೋಟಿಗಟ್ಟಲೆ ಸಂದಾಯವಾಗಿದೆ ಎಂದು ಟೀಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+